ಮಾಸ್ಕೊ (ಪಿಟಿಐ): ಪಶ್ಚಿಮ ಸೈಬೀರಿಯಾದ ಟಿಯುಮೆನ್ ನಗರದಲ್ಲಿ ಗಗನಕ್ಕೆ ಏರಿದ ಸ್ವಲ್ಪ ಹೊತ್ತಿನಲ್ಲೇ ತುರ್ತಾಗಿ ಕೆಳಗಿಳಿಯಲು ಯತ್ನಿಸುತ್ತಿದ್ದ ರಷ್ಯಾದ ಪ್ರಯಾಣಿಕ ವಿಮಾನವೊಂದು ಸೋಮವಾರ ನೆಲಕ್ಕೆ ಅಪ್ಪಳಿಸಿದ ಪರಿಣಾಮವಾಗಿ 31 ಮಂದಿ ಅಸು ನೀಗಿದ್ದಾರೆ.

ವಿಮಾನದಲ್ಲಿದ್ದ 43 ಜನರ ಪೈಕಿ ಕನಿಷ್ಠ 31 ಮಂದಿ ದುರಂತದಲ್ಲಿ ಮೃತರಾಗಿದ್ದಾರೆ ಎಂದು ರಷ್ಯಾದ ಆಪತ್ಕಾಲ ಸಚಿವಾಲಯವನ್ನು ಉಲ್ಲೇಖಿಸಿ ರಿಯಾ ನೊವೊಸ್ತಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಿಮಾನದಲ್ಲಿ ಮಕ್ಕಳು ಇರಲಿಲ್ಲ ಎಂದು ವರದಿ ಹೇಳಿದೆ.

ಅವಳಿ ಎಂಜಿನ್ನಿನ ಎಟಿಆರ್ - 72 ವಿಮಾನವು ಸರ್ಗುತ್ ಕಡೆಗೆ ಹೊರಟಿದ್ದಾಗ ಟಿಯುಮೆನ್ ನಗರದಿಂದ 30 ಕಿ.ಮೀ. ದೂರದಲ್ಲಿ ಈ ಅಪಘಾತ ಸಂಭವಿಸಿತು. ಗಗನಕ್ಕೆ ಏರಿದ ಸ್ವಲ್ಪ ಹೊತ್ತಿನಲ್ಲೇ ತುರ್ತಾಗಿ ಕೆಳಗಿಳಿಯಲು ಯತ್ನಿಸಿದ ವಿಮಾನ ಭಾರಿ ಸದ್ದಿನೊಂದಿಗೆ ಸ್ಫೋಟಗೊಂಡು ಬೆಂಕಿಯ ಕೆನ್ನಾಲಿಗೆಯಲ್ಲಿ ಮುಳುಗಿತು. ವಿಮಾನ ಚೂರು ಚೂರಾಗಿ ಬಿತ್ತು.

39 ಮಂದಿ ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ವಿಮಾನದಲ್ಲಿ ಇದ್ದರು. ಎಲ್ಲ ಸಿಬ್ಬಂದಿಯೂ ಸಾವನ್ನಪ್ಪಿದವರಲ್ಲಿ ಸೇರಿದ್ದಾರೆ. ಬದುಕುಳಿದ 11 ಮಂದಿಯನ್ನು ಆಸ್ಪತ್ರೆಗೆ ಒಯ್ಯಲಾಗಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ಹೇಳಿದೆ. ಒಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ನಂತರ ಮೃತನಾದ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.