ಹುಮನಾಬಾದ್: ನೆಹರು ಅವರು ಪಂಚವಾರ್ಷಿಕ ಯೋಜನೆ ಹರಿಕಾರ ಎಂದು ಬೀದರ್ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸುರೇಶ ಎಸ್.ಹೊನ್ನಪ್ಪಗೋಳ್ ಅಭಿಪ್ರಾಯಪಟ್ಟರು. ಇಲ್ಲಿನ ಎಸ್.ಬಿ.ಸಿ ಪ್ರಥಮ ದರ್ಜೆ ಕಾಲೇಜಿನ ನೆಹರು ಅಧ್ಯಯನ ಕೇಂದ್ರ ವತಿಯಿಂದ ನೆಹರು ಸಿದ್ದಾಂತ ಕುರಿತು ಭಾನುವಾರ ಏರ್ಪಡಿಸಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ, ಮಾತನಾಡಿದರು.

ಅಭಿವೃದ್ದಿ ಯೋಜನೆಗಳ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಮಾನತೆ ತರಲು ನೆಹರು ಅವರು ಪಟ್ಟ ಪರಿಶ್ರಮ ಸ್ಮರಣೀಯ ಎಂದು ಹೊನ್ನಪ್ಪಗೋಳ್ ತಿಳಿಸಿದರು. ಇಂದಿನ ವಿದ್ಯಾವಂತ ಯುವಕರು ನೆಹರು ಅವರ ಆದರ್ಶ ಮೈಗೂಡಿಸಿಕೊಳ್ಳುವ ಮೂಲಕ ನೈತಿಕತೆ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಸಮಾಜಶಾಸ್ತ್ರ ವಿಭಾಗ ನಿರ್ದೇಶಕ ಪ್ರೊ.ಎಚ್.ಎಂ.ಕಾಶಿನಾಥ ಆಶುಭಾಷಣ ಮಾಡಿದರು. ಡಾ.ಎಂ.ಎಸ್.ತಲವಾರ್ ಮುಖ್ಯ ಅತಿಥಿಯಾಗಿದ್ದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಧರ್ಮದರ್ಶಿ ಡಾ,ಚಂದ್ರಶೇಖರ ಪಾಟೀಲ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯಕ್ರಮಗಳಿಗೂ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

ಸಂಗಯ್ಯಸ್ವಾಮಿ ನಿರ್ದೇಶನದಲ್ಲಿ ಮಹಾವಿದ್ಯಾಲಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಾಚಾರ್ಯ ಪ್ರೊ.ಡಿ.ಎಂ.ನಂದಿ ಸ್ವಾಗತಿಸಿದರು. ನೆಹರು ಅಧ್ಯಯನ ಕೇಂದ್ರ ಸಂಯೋಜಕ ಡಾ.ಶಿವಾನಂದ ಮಠಪತಿಪ್ರಾಸ್ತಾವಿಕ ಮಾತನಾಡಿದರು. ಪ್ರೊ.ಎನ್.ಎನ್.ಬಿರಾದಾರ ನಿರೂಪಿಸಿದರು. ಡಾ.ಎಸ್.ಸಿ. ಕಳ್ಳಿಮಠ್ ವಂದಿಸಿದರು.

ಕೈದಿಗಳ ಕಾದಾಟ
ಗುಲ್ಬರ್ಗ: ಗುಲ್ಬರ್ಗ ಕೇಂದ್ರ ಕಾರಾಗೃಹದಲ್ಲಿ ಭಾನುವಾರ ಕೊಲೆಯತ್ನ ಆರೋಪದ ಕೈದಿ ಬಸವರಾಜ ಹಾಗೂ ದರೋಡೆ ಮತ್ತು ಡಕಾಯಿತಿ ಪ್ರಕರಣಗಳ ವಿಚಾರಣಾಧೀನ ಕೈದಿ ಮಜೀಬ್ ನಡುವೆ ಕಾದಾಟ ನಡೆದಿದೆ. ಈ ಘಟನೆಯಲ್ಲಿ ಮಜೀಬ್ ಗಾಯಗೊಂಡಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.