ಮಂಗಳವಾರ, ಜೂನ್ 15, 2021
21 °C

ನೇಚರ್ ನೆಸ್ಟ್: ಯಶಸ್ಸಿನ ಹೆಜ್ಜೆ...

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಉಳುವಾ ಯೋಗಿಗೆ ನ್ಯಾಯಯುತ ಬೆಲೆ            ಒದಗಿಸುವ, ನಗರವಾಸಿಗಳಿಗೆ ತಾಜಾ ಕೃಷಿ ಉತ್ಪನ್ನಗಳಿಂದ ಸಿದ್ಧಪಡಿಸಿದ ಸಾತ್ವಿಕ, ಆರೋಗ್ಯಕರ ಪೇಯ, ತಿನಿಸು ಒದಗಿಸುವ ಮೂಲಕ ಹೊಸ ಬಗೆಯ ವಹಿವಾಟಿನ ಅವಕಾಶಗಳನ್ನು ವಿಸ್ತರಿಸಿ, ಉದ್ಯಮ ಬೆಳೆಸುವ ಕನಸನ್ನು ಬೆಂಗಳೂರಿನ ನಾಲ್ಕು ಮಂದಿ ಉತ್ಸಾಹಿ ಉದ್ಯಮಿಗಳು ನನಸಾಗಿಸಲು ಹೊರಟಿದ್ದಾರೆ.ಈ ನಾಲ್ವರೂ ಕೃಷಿ ಹಿನ್ನೆಲೆಯಿಂದ ಬಂದವರು ಎನ್ನುವುದೂ ವಿಶೇಷ. `ನೇಚರ್ ಡ್ರಿಂಕ್ ರೀಟೇಲ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್  ಸಂಸ್ಥೆ ಮೂಲಕ ಹೊಸ ಬಗೆಯ ವಹಿವಾಟು ಪರಿಕಲ್ಪನೆ ಸಾಕಾರಗೊಳಿಸಲು ಇವರು ದೃಢ ಹೆಜ್ಜೆ ಇಟ್ಟಿದ್ದಾರೆ. ನೈಸರ್ಗಿಕ ಆಹಾರ ಮತ್ತು ಪಾನೀಯಗಳ ದೇಶದ ಮೊಟ್ಟ ಮೊದಲ ಮತ್ತು ಅತಿ ದೊಡ್ಡ ವಹಿವಾಟಿನ ಸ್ವರೂಪ ಇದಾಗಿದೆ. ವಿಪ್ರೊ, ಜೆನ್‌ಪ್ಯಾಕ್ಟ್‌ನಂತಹ ಸಾಫ್ಟ್‌ವೇರ್ ಸಂಸ್ಥೆಗಳೂ ತಮ್ಮ  ಆವರಣಗಳಲ್ಲಿ ವಹಿವಾಟು ವಿಸ್ತರಿಸಲು ಅವಕಾಶ ಮಾಡಿಕೊಡಲು ಆಲೋಚಿಸುತ್ತಿರುವುದು ಕೂಡ ಈ ವಹಿವಾಟಿಗೆ ಸಿಕ್ಕಿರುವ ಮಾನ್ಯತೆಯ ದ್ಯೋತಕವಾಗಿದೆ.ತರಕಾರಿ ಸೂಪ್,  ಮೊಳಕೆ ಕಾಳುಗಳ ಸಲಾಡ್, ತಾಜಾ ಮತ್ತು ಆರೋಗ್ಯಕರವಾದ ಹಸಿ ಇಲ್ಲವೇ ಬೇಯಿಸಿದ   ತರಕಾರಿಯ ಹಲವು ಮಿಶ್ರಣಗಳ ತಿನಿಸು(ವೆಜಿಟೇಬಲ್ ಸಲಾಡ್), ಹಣ್ಣು - ತರಕಾರಿಗಳಿಂದ ತಯಾರಿಸುವ ಐಸ್‌ಕ್ರೀಂ, 18 ವಿವಿಧ ಬಗೆಯ ರುಚಿಗಳಲ್ಲಿ ಎಳೆನೀರು, ನೇಚರ್  ನೆಸ್ಟ್‌ನ ವಿಶೇಷ ಖಾದ್ಯ `ಹರೀರಾ~ ಮುಂತಾದವುಗಳನ್ನು ಗ್ರಾಹಕರಿಗೆ ವಿಶೇಷ ರೀತಿಯಲ್ಲಿ ಸಿದ್ಧಪಡಿಸಿ ಉಣಬಡಿಸಲಾಗುತ್ತಿದೆ ಎಂದು ಸಂಸ್ಥೆಯ ನಿರ್ದೇಶಕ ಆನಂದಕುಮಾರ್ ಎಸ್. ಪಿ. ಹೇಳುತ್ತಾರೆ.ರಸ್ತೆ ಬದಿಯಲ್ಲಿ ಮಾರಾಟ ಆಗುತ್ತಿರುವ, ಸರ್ವ ರೋಗಕ್ಕೆ ಮದ್ದು ಆಗಿರುವ ಎಳೆನೀರಿಗೆ ವ್ಯವಸ್ಥಿತ, ಸಂಘಟಿತ ಸ್ವರೂಪದ ಮಾರುಕಟ್ಟೆ ನಿರ್ಮಾಣ ಮಾಡುವ ಉದ್ದೇಶವನ್ನೂ ಸಂಸ್ಥೆಯು ಕಾರ್ಯರೂಪಕ್ಕೆ ತಂದಿದೆ. ಎಳೆನೀರನ್ನು 18 ಬಗೆಯ  ಪರಿಮಳ  ಮತ್ತು ಸ್ವಾದಿಷ್ಟಕರ ರುಚಿಗಳಲ್ಲಿ ಒದಗಿಸಲಾಗುತ್ತಿದೆ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗಿರೀಶ್ ಟಿ.ಸಿ, ಡಾ. ಉದಯ ಕುಮಾರ್ ಶೆಟ್ಟಿ, ಬಾಹುಬಲಿ ಮತ್ತು ಆನಂದಕುಮಾರ್ ಇವರೆಲ್ಲರೂ ನಲ್ವತ್ತರ ವಯೋಮಾನದ  ಒಳಗಿನವರು. ಇವರಲ್ಲಿ ಇಬ್ಬರು ತಮ್ಮ ಸಾಫ್ಟ್‌ವೇರ್ ಮತ್ತು ಬ್ಯಾಂಕ್ ವೃತ್ತಿ ಬಿಟ್ಟು ಬಂದವರಾಗಿದ್ದರೆ, ಇನ್ನಿಬ್ಬರು ಕ್ರಮವಾಗಿ ವೈದ್ಯ ವೃತ್ತಿ ಮತ್ತು ವಾಹನ ಮಾರಾಟ ಏಜೆನ್ಸಿಯಲ್ಲಿ ತೊಡಗಿಕೊಂಡಿದ್ದಾರೆ.  ಕೃಷಿ ಹಿನ್ನೆಲೆಯಿಂದ ಬಂದಿರುವ ಇವರೆಲ್ಲ ಹೊಸ ಬಗೆಯ ಉದ್ಯಮಕ್ಕೆ ಉತ್ಸಾಹದಿಂದ ಕೈಹಾಕಿ ಯಶಸ್ಸಿನ ಒಂದೊಂದೇ ಹೆಜ್ಜೆ ಇರಿಸುತ್ತಿದ್ದಾರೆ.`ನಿಮ್ಮ ಆಹಾರವನ್ನು ನಿಮ್ಮ ಔಷಧಿಯಂತೆ ಸೇವಿಸಿ, ಇಲ್ಲದಿದ್ದರೆ ನೀವು ಔಷಧಿಯನ್ನೇ ಆಹಾರದಂತೆ ಸೇವಿಸಬೇಕಾದೀತು...~ -ಇದು ನೇಚರ್ ನೆಸ್ಟ್‌ನ ಧ್ಯೇಯವಾಕ್ಯ. ಇದಕ್ಕೆ ಪೂರಕವಾಗಿಯೇ ಗ್ರಾಹಕರ ಆರೋಗ್ಯ ವೃದ್ಧಿಸುವ, ರಕ್ಷಿಸುವ ತಿನಿಸು, ಪೇಯಗಳನ್ನೇ ಸುಸಜ್ಜಿತ `ನೇಚರ್ ನೆಸ್ಟ್~ ಮಳಿಗೆಗಳಲ್ಲಿ ಪೂರೈಸಲಾಗುತ್ತಿದೆ.ಋತುಮಾನಕ್ಕೆ ಅನುಗುಣವಾಗಿ ಆಯಾ ಸಮಯಕ್ಕೆ ದೊರೆಯುವ ಹಣ್ಣು  ತರಕಾರಿಗಳಿಂದ ಖಾದ್ಯ,    ಸಲಾಡ್‌ಗಳನ್ನು ಸಿದ್ಧಪಡಿಸಿ ಮಾರಾಟ ಮಾಡಲಾಗುತ್ತಿದೆ. ಆಹಾರ ಉತ್ಪನ್ನಗಳ ಸೇವನೆಯಿಂದ ಸಣ್ಣ ಪುಟ್ಟ ಅಲರ್ಜಿಗಳೂ ದೂರವಾಗಬೇಕು ಎನ್ನುವ ಕಾಳಜಿಯೂ ಸಂಸ್ಥೆಗೆ ಇದೆ. ಇದೇ ಕಾರಣಕ್ಕೆ ಯಾವುದೇ ಬಗೆಯ ಅಡ್ಡ ಪರಿಣಾಮ ತಡೆಗಟ್ಟಲು ಇಲ್ಲಿ ಎಣ್ಣೆ ಪದಾರ್ಥಗಳ ಬಳಕೆ ನಿಷೇಧಿಸಲಾಗಿದೆ.ಪ್ರಿಸರ್‌ವೇಟಿವ್‌ಗಳನ್ನೂ (ಸಿದ್ಧ ಆಹಾರ ಉತ್ಪನ್ನ ಹಾಳಾಗದಂತೆ ತಡೆಯುವ ಪದಾರ್ಥ) ಬಳಸಲಾಗುವುದಿಲ್ಲ. ಕೃತಕ ರುಚಿ ನೀಡುವ ರಾಸಾಯನಿಕಗಳ ಬಳಕೆಯೂ ಇಲ್ಲಿ ನಿಷಿದ್ಧ.

ಬರೀ ಎಳೆನೀರು ಮಾರಾಟ ಮಾಡುವ `ನೇಚರ್ ಡ್ರಿಂಕ್~  ಹೆಸರಿನ ಮಳಿಗೆಗಳನ್ನು ಬಿಗ್ ಬಜಾರ್ ಆವರಣದಲ್ಲಿ ತೆರೆಯಲಾಗಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಇಂತಹ 5 ಮಳಿಗೆಗಳು ಇವೆ. ಇನ್ನೂ 12 ಮಳಿಗೆಗಳು ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿವೆ.`ನೇಚರ್ ನೆಸ್ಟ್~ ಮಳಿಗೆಗಳು ಸಂಪೂರ್ಣ ಸುಸಜ್ಜಿತ. ಇಲ್ಲಿ ಎಲ್ಲ ಅನುಕೂಲತೆಗಳನ್ನು ಕಲ್ಪಿಸಲಾಗಿದೆ. ಮನಸ್ಸಿಗೆ ಉಲ್ಲಾಸ ನೀಡುವ ಬಗೆಯಲ್ಲಿ ರೂಪಿಸಿರುವ ಮಳಿಗೆಗಳಲ್ಲಿ ಆರಾಮವಾಗಿ ಕುಳಿತುಕೊಂಡು ತಿಂಡಿ, ಪೇಯ ಸೇವಿಸಲು ಅವಕಾಶ ಒದಗಿಸಲಾಗಿದೆ.ಕಾಲೇಜ್ ವಿದ್ಯಾರ್ಥಿಗಳ ಹರಟೆ, ಉದ್ದಿಮೆ ವಹಿವಾಟಿನ ಚರ್ಚೆ, ಹುಟ್ಟುಹಬ್ಬದ ಸಡಗರಕ್ಕೂ ಇಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. ಶೀಘ್ರದಲ್ಲಿಯೇ ವೈಫೈ ಸೌಲಭ್ಯ ಆರಂಭಿಸಲಾಗುತ್ತಿದೆ.ಜಯನಗರದಲ್ಲಿ 6 ತಿಂಗಳ ಹಿಂದೆ ಆರಂಭಿಸಲಾಗಿರುವ ಮೊದಲ ಮಳಿಗೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ರಾಜಾಜಿನಗರದ ನವರಂಗ ಥೇಟರ್ ಪಕ್ಕ ತೆರೆದಿರುವ ಎರಡನೇ ಮಳಿಗೆಯಲ್ಲಿಯೂ ವಹಿವಾಟು ಕ್ರಮೇಣ ಕುದುರುತ್ತಿದೆ. ಸದ್ಯದಲ್ಲಿಯೇ ಮಲ್ಲೇಶ್ವರಂ 8ನೇ ಕ್ರಾಸ್‌ನಲ್ಲಿ 3ನೇ ಮಳಿಗೆ ಕಾರ್ಯಾರಂಭ ಮಾಡಲಿದೆ.`ಹರೀರಾ~ ಇಲ್ಲಿಯ ವಿಶೇಷ ಖಾದ್ಯ. 15 ರಿಂದ 18 ದವಸ ಧಾನ್ಯ, ಒಣ ಹಣ್ಣು ನೆನೆಸಿ ಅವುಗಳನ್ನು ರುಬ್ಬಿ ಹೊರತೆಗೆದ ಹಾಲಿನಿಂದ ತಯಾರಿಸಿದ ಈ ಖಾದ್ಯ ರುಚಿಕರ ಅಷ್ಟೇ ಅಲ್ಲ  ಆರೋಗ್ಯವನ್ನೂ ವೃದ್ಧಿಸುತ್ತದೆ ಎಂದು ಆನಂದ್ ಕುಮಾರ್ ಹೇಳುತ್ತಾರೆ. ತರಕಾರಿ ಮತ್ತು ಹಣ್ಣುಗಳಿಂದಲೇ ತಯಾರಿಸುವ ಐಸ್‌ಕ್ರೀಂ, `ನೇಚರ್ ನೆಸ್ಟ್~ನ ಇನ್ನೊಂದು ವಿಶೇಷತೆ. ಸದ್ಯಕ್ಕೆ ಲಾಭದ ಪ್ರಮಾಣ ಕಡಿಮೆ ಇದ್ದರೂ, ಬಳಕೆದಾರರ ಆರೋಗ್ಯ ಮುಖ್ಯ ಎನ್ನುತ್ತಾರೆ ಅವರು.ದೇಶಿ ಬರ್ಗರ್ ಕೂಡ ಇಲ್ಲಿ ಲಭ್ಯ. ಬನ್ ಒಳಗಡೆ ಕಟ್‌ಲೆಟ್, ಮೊಳಕೆ ಕಾಳು, ಗುಲ್‌ಕಂದ್ ಒಳಗೊಂಡ ಈ ಬರ್ಗರ್ ಕಾಲೇಜ್ ವಿದ್ಯಾರ್ಥಿಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ವಿದೇಶಿ ಖಾದ್ಯಗಳಾದ ಪಿಜ್ಜಾ, ಬರ್ಗರ್‌ದಂತಹ ಜಂಕ್ ಫುಡ್ ( ಅಪೌಷ್ಟಿಕ ಆಹಾರ) ಬದಲಿಗೆ, ಈ ಅಪ್ಪಟ ದೇಶಿ ಉತ್ಪನ್ನವನ್ನು  ಯುವ ಜನರು ಮೆಚ್ಚಿಕೊಳ್ಳುತ್ತಿದ್ದಾರೆ.ಎಲ್ಲ ಬಗೆಯ ಮತ್ತು ವಯೋಮಾನದ ಗ್ರಾಹಕರ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ಖಾದ್ಯ ಮತ್ತು ಪೇಯಗಳನ್ನು ಇಲ್ಲಿ ತಯಾರಿಸಿ ಉಣಬಡಿಸಲಾಗುತ್ತದೆ.ಬೆಳಗಿನ ವಾಯು ವಿಹಾರಕ್ಕೆ ಬರುವವರಿಗೂ ಇಲ್ಲಿ ದೊರೆಯುವ ಪೇಯ, ತಿನಿಸು ಸೇವನೆ ಆರೋಗ್ಯವೃದ್ಧಿಸಲಿದೆ ಎಂದು ಸಂಸ್ಥೆಯ ಪ್ರವರ್ತಕರು ಹೇಳುತ್ತಾರೆ. ಈ ಮಳಿಗೆಗಳು  ಬೆಳಿಗ್ಗೆ 6ರಿಂದ ಸಂಜೆ 11.30ರವರೆಗೆ  ಕಾರ್ಯನಿರ್ವಹಿಸುತ್ತವೆ.  ದೈಹಿಕ ವ್ಯಾಯಾಮ ಮಾಡಲು ಜಿಮ್‌ಗೆ ಹೋಗುವವರು ದೇಹದಾರ್ಢ್ಯ ಹೆಚ್ಚಿಸಲು ಅಡ್ಡ ಪರಿಣಾಮ ಬೀರುವ ಮಾತ್ರೆ, ಔಷಧಿ ಸೇವಿಸುವ ಬದಲಿಗೆ ಇಲ್ಲಿಯ ನೈಸರ್ಗಿಕ ಉತ್ಪನ್ನಗಳನ್ನೇ ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಜೀವಸತ್ವಗಳನ್ನೆಲ್ಲ ಪೂರೈಸಿಕೊಳ್ಳಬಹುದು. ಮಧುಮೇಹಿಗಳಿಗೆಂದೇ ಹಾಗಲಕಾಯಿಯ ಕಹಿ ಬೇರ್ಪಡಿಸಿ ಅದರ ಔಷಧಿ ಗುಣಕ್ಕೆ ಯಾವುದೇ ಧಕ್ಕೆ ಒದಗದ ರೀತಿಯಲ್ಲಿ ಸಲಾಡ್ ಸಿದ್ಧಪಡಿಸಿಕೊಡಲಾಗುವುದು ಎಂದೂ ಆನಂದ್ ಕುಮಾರ್ ಹೇಳುತ್ತಾರೆ.ಬೆಂಗಳೂರಿನಲ್ಲಿ 20 ರಿಂದ 30 ಮಳಿಗೆಗಳನ್ನು ತೆರೆಯುವ ಆಲೋಚನೆ ಇದೆ.  2012ರ ಡಿಸೆಂಬರ್ ಅಂತ್ಯದ ಒಳಗೆ  ನಗರದ ಪ್ರಮುಖ ಬಡಾವಣೆಗಳಲ್ಲಿ ಉದ್ಯಮಿಗಳ ಪಾಲುದಾರಿಕೆಯಡಿ ವಹಿವಾಟು ವಿಸ್ತರಿಸಲು ಸಂಸ್ಥೆ ಮುಂದಾಗಿದೆ.ಪಾಲುದಾರಿಕೆಯಡಿ ವಹಿವಾಟು ಆರಂಭಿಸಲು ಬಯಸುವ ಆಸಕ್ತರು ಆಯಾ ಪ್ರದೇಶ ಆಧರಿಸಿ ರೂ 15, ರೂ 20 ಮತ್ತು  ರೂ 40 ಲಕ್ಷದವರೆಗೆ ಹಣ ಹೂಡಿಕೆ ಮಾಡಬೇಕಾಗುತ್ತದೆ.  ವಹಿವಾಟಿನ ಎಲ್ಲ ಹೊಣೆಗಾರಿಕೆಯನ್ನು ಸಂಸ್ಥೆಯೇ ನೋಡಿಕೊಳ್ಳುತ್ತದೆ. 3 ವರ್ಷಗಳವರೆಗೆ ಹೂಡಿದ ಹಣವನ್ನು ವಾಪಸ್ ಪಡೆಯಲು ಅವಕಾಶ ಇರಲಾರದು. 3 ವರ್ಷಗಳ ನಂತರ ವಹಿವಾಟು ಬೇಡವಾದವರಿಗೆ ಮೂಲ ಭದ್ರತಾ ಠೇವಣಿಯಲ್ಲಿ ಶೇ 80ರಷ್ಟನ್ನು ವಾಪಸ್ ಕೊಡಲಾಗುವುದು.

 

ಮಳಿಗೆಯಲ್ಲಿ ನಡೆಯುವ ವಹಿವಾಟಿನಲ್ಲಿ ನಿರ್ದಿಷ್ಟ ಪ್ರಮಾಣದ ಲಾಭವನ್ನು ಪಾಲುದಾರರಿಗೆ ಪಾವತಿಸಲಾಗುತ್ತದೆ. ಮಳಿಗೆಯ ಸಕಲ ವೆಚ್ಚವನ್ನು ಸಂಸ್ಥೆಯೇ ಭರಿಸುತ್ತದೆ. ಕ್ಯಾಷ ಕೌಂಟರ್ ಅನ್ನು ಪಾಲುದಾರರ ಪ್ರತಿನಿಧಿಗಳೇ ನಿರ್ವಹಿಸಬೇಕು. ಮೂರು ವರ್ಷದಲ್ಲಿ ಹೂಡಿದ ಹಣ ವಾಪಸ್. ಬರುತ್ತದೆ ಎಂದು ಅವರು ಭರವಸೆ ನೀಡುತ್ತಾರೆ.ನೇಚರ್ ನೆಸ್ಟ್: ಯಶಸ್ಸಿನ ಹೆಜ್ಜೆ..

ಮನೆ ಮನೆಗೂ ಪೂರೈಸುವ ಸೌಲಭ್ಯವನ್ನೂ ಒದಗಿಸಲಾಗುವುದು. 3 ಕಿ.ಮೀ ವ್ಯಾಪ್ತಿ ಒಳಗೆ ಪೂರೈಸಲಾಗುವುದು.ಕನಿಷ್ಠ ್ಙ 300 ಬೇಡಿಕೆ ಇರಬೇಕು. ಸಭೆ ಸಮಾರಂಭಗಳಿಗೂ ತಿನಿಸು ಪೂರೈಸಲು ಸಂಸ್ಥೆ  ಸಿದ್ಧವಿದೆ.ಸಾಫ್ಟ್‌ವೇರ್ ಸಂಸ್ಥೆಗಳಾದ ವಿಪ್ರೊ, ಜೆನ್‌ಪ್ಯಾಕ್ಟ್ ಸಂಸ್ಥೆಗಳ ಆವರಣದ ಒಳಗೆ ಮಳಿಗೆಯ ವಹಿವಾಟಿಗೆ ಅವಕಾಶ  ದೊರೆಯಲಿದೆ. ಈ ವಹಿವಾಟನ್ನು ಸಂಸ್ಥೆಯೇ ನಿರ್ವಹಿಸಲಿದೆ. ಸಾಫ್ಟ್‌ವೇರ್ ಸಂಸ್ಥೆಗಳಲ್ಲಿ ಮುಂಬೈನ ಡಬ್ಬಾವಾಲಾ ಪರಿಕಲ್ಪನೆಯಂತೆ, ಉದ್ಯೋಗಿಗಳ ಅಗತ್ಯಗಳನ್ನು ಅವರು ಕುಳಿತಲ್ಲಿಯೇ ಪೂರೈಸುವ ವ್ಯವಸ್ಥೆ ಮಾಡಲಾಗುವುದು. ಇದರಿಂದ ತಂತ್ರಜ್ಞರ ಆರೋಗ್ಯ ರಕ್ಷಣೆಯೂ,  ಸಮಯದ ಅಪವ್ಯಯವೂ ಕಡಿಮೆಯಾಗಲಿದೆ.ಸಾಫ್ಟ್‌ವೇರ್ ಸಂಸ್ಥೆಗಳಲ್ಲಿನ `ನೇಚರ್ ನೆಸ್ಟ್~ ಮಳಿಗೆ ವಾರದ 5 ದಿನಗಳಲ್ಲಿ 24 ಗಂಟೆಗಳ ಕಾಲ ತೆರೆದಿರುವಂತೆ ನೋಡಿಕೊಳ್ಳಲಾಗುವುದು ಎಂದು ಆನಂದ್ ಕುಮಾರ್ ಹೇಳುತ್ತಾರೆ.ಪಾಲುದಾರರ ಮೇಲೆ ಯಾವುದೇ ಹೊರೆ ಇರಬಾರದು. ಮಾರಾಟದಲ್ಲಿ ಇಂತಿಷ್ಟು ಪ್ರಮಾಣದಲ್ಲಿ ಲಾಭ. ಹೂಡಿಕೆ ಹಣ ವಾಪಸ್. ಮೂರು ವರ್ಷದಲ್ಲಿ ಹೂಡಿದ ಹಣ ವಾಪಸ್. ಜತೆಗೆ ಠೇವಣಿಯೂ ಮರಳುತ್ತದೆ. ಮುಂಬೈ, ಕೋಲ್ಕತ್ತಾದಿಂದಲೂ `ನೇಚರ್ ನೆಸ್ಟ್~ ಆರಂಭಿಸಲು ಕೋರಿಕೆಗಳು ಬರುತ್ತಿವೆ. ಆರಂಭದಲ್ಲಿ ಬೆಂಗಳೂರು ನಗರದಲ್ಲಿ ವಹಿವಾಟು ಕೇಂದ್ರಿಕರಿಸಲು ಸಂಸ್ಥೆ ಉದ್ದೇಶಿಸಿದೆ. ಕ್ರಮೇಣ ತುಮಕೂರು, ಮಂಗಳೂರು, ಮೈಸೂರು ಸೇರಿದಂತೆ ರಾಜ್ಯದಲ್ಲಿನ ಇತರ ಪ್ರಮುಖ ನಗರಗಳಿಗೆ  ವಹಿವಾಟು ವಿಸ್ತರಿಸಲು ಆಲೋಚನೆ ಸಂಸ್ಥೆಗೆ ಇದೆ.ನಾಲ್ವರು ಪ್ರವರ್ತಕರು ಸ್ವಂತದ ಮೂಲದಿಂದ ಹಾಕಿರುವ ಬಂಡವಾಳ ಈಗ  ರೂ1 ಕೋಟಿ ದಾಟಿದೆ. 25 ಮಳಿಗೆ ಆರಂಭವಾದರೆ ವಹಿವಾಟಿನ ಮೊತ್ತ ರೂ 10 ಕೋಟಿಗಳಷ್ಟಾಗಲಿದೆ. ಮಲ್ಲೇಶ್ವರಂ ಮಳಿಗೆಗೆ- ಇಬ್ಬರು ಹಣ ತೊಡಗಿಸಿದ್ದಾರೆ.  ಮಾಹಿತಿಗೆ ಪಂಕು ಸಾಗರ್ 97390 9779 /81050 00944 ಮತ್ತು ಅಂತರಜಾಲ ತಾಣ www.naturedrink.in  ಕ್ಕೆ ಭೇಟಿ ನೀಡಬಹುದು. ್ಝ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.