ಮಂಗಳವಾರ, ಮೇ 11, 2021
28 °C

ನೈಟ್ ರೈಡರ್ಸ್‌ಗೆ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಪಿಟಿಐ): ರೆಲೋಫ್ ವಾನ್ ಡರ್ ಮೆರ್ವ್ (73) ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಸಾಮರ್ಸೆಟ್ ತಂಡ ಇಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ 5 ವಿಕೆಟ್‌ಗಳ ಗೆಲುವು ಪಡೆಯಿತು.



ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ಮೊದಲು ಬ್ಯಾಟ್ ಮಾಡಿದ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 161 ರನ್ ಪೇರಿಸಿತು. ಇಂಗ್ಲೆಂಡ್‌ನ ಕೌಂಟಿ ತಂಡ ಸಾಮರ್ಸೆಟ್ 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 164 ರನ್ ಗಳಿಸಿ ಜಯ ಸಾಧಿಸಿತು.



40 ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 73 ರನ್ ಗಳಿಸಿದ ಮೆರ್ವ್ ಸಾಮರ್ಸೆಟ್ ತಂಡದ ಗೆಲುವಿನ ರೂವಾರಿ ಎನಿಸಿದರು. ಅರ್ಹತಾ ಹಂತದ ಪಂದ್ಯದಲ್ಲೂ ನೈಟ್ ರೈಡರ್ಸ್ ಈ ತಂಡದ ಕೈಯಲ್ಲಿ ಸೋಲು ಅನುಭವಿಸಿತ್ತು. 13 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 119 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಸಾಮರ್ಸೆಟ್ ಬಳಿಕ ಅಲ್ಪ ಆತಂಕದ ಕ್ಷಣಗಳನ್ನು ಎದುರಿಸಿತಾದರೂ ಗೆಲುವು ಪಡೆಯುವಲ್ಲಿ ಯಶಸ್ವಿಯಾಯಿತು.



ಇದಕ್ಕೂ ಮೊದಲು ಜಾಕ್ ಕಾಲಿಸ್ (74) ತೋರಿದ ಉತ್ತಮ ಬ್ಯಾಟಿಂಗ್ ನೆರವಿನಿಂದ  ನೈಟ್ ರೈಡರ್ಸ್ ಸವಾಲಿನ ಮೊತ್ತ ಪೇರಿಸಿತ್ತು. ಕಾಲಿಸ್ 61 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸೇರಿದಂತೆ ಒಟ್ಟು 74 ರನ್ ಗಳಿಸಿದರು.



ಆರಂಭಿಕ ಆಘಾತ ಒಡ್ಡಿದ ಸಾಮರ್ಸೆಟ್ ತಂಡದ ಲೆವಿಸ್ ಗ್ರೆಗೊರಿ (9ಕ್ಕೆ2) ಬಿಸ್ಲಾ ಅವರನ್ನು ಬೇಗನೆ ಪೆವಿಲಿಯನ್‌ಗೆ ಆಟ್ಟಿದರು. ಆಗ ತಂಡದ ಮೊತ್ತ ಕೇವಲ 20. ಇದಾದ ಎರಡು ಎಸೆತಗಳಲ್ಲಿ ಗ್ರೆಗೊರಿ ಮತ್ತೆ `ಕೈ~ ಚಳಕ ತೋರಿಸಿದರು. ಇವರಿಗೆ ವಿಕೆಟ್ ಒಪ್ಪಿಸಿದ್ದು ನಾಯಕ ಗೌತಮ್ ಗಂಭೀರ್. ಫಿಟ್‌ನೆಸ್ ಸಮಸ್ಯೆಯಿಂದ ಅರ್ಹತಾ ಹಂತದಲ್ಲಿ ಆಡದಿದ್ದ ಗಂಭೀರ್ ಮೊದಲ ಎಸೆತದಲ್ಲೇ ಔಟಾದರು.



ತಂಡ ಸಂಕಷ್ಟಕ್ಕೆ ಸಿಲುಕಿದಾಗ ಕಾಲಿಸ್ ಆಸರೆಯಾದರು. ಯೂಸುಫ್ ಪಠಾಣ್ ಜೊತೆಗೂಡಿ 93 ರನ್ ಕಲೆ ಹಾಕಿದರು. ಈ ಜೋಡಿ ಕೇವಲ 22 ಎಸೆತಗಳಲ್ಲಿ 50 ರನ್ ಗಳಿಸಿತು. ಅರುಲ್ ಸುಪ್ಪಯ್ಯ ಅವರ ಓವರ್‌ನಲ್ಲಿ ಸತತ ನಾಲ್ಕು ಸಿಕ್ಸರ್ ಸಿಡಿಸಿದ ಪಠಾಣ್ 21 ಎಸೆತಗಳಲ್ಲಿ 39 ರನ್ ಗಳಿಸಿದರು.



ಕೋಲ್ಕತ್ತ ನೈಟ್ ರೈಡರ್ಸ್: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 161

ಮನ್ವಿಂದರ್ ಬಿಸ್ಲಾ ಸಿ ಜೋನೆಸ್ ಬಿ ಗ್ರೆಗೊರಿ  17

ಜಾಕ್ ಕಾಲಿಸ್ ಔಟಾಗದೆ  74

ಗೌತಮ್ ಗಂಭೀರ್ ಸಿ ಥಾಮಸ್ ಬಿ ಗ್ರೆಗೊರಿ  00

ಮನೋಜ್ ತಿವಾರಿ ಸಿ ಡೊಕ್ರೆಲ್ ಬಿ ಥಾಮಸ್  20

ಯೂಸುಫ್ ಪಠಾಣ್ ಔಟಾಗದೆ  39

ಇತರೆ: (ಲೆಗ್ ಬೈ-4, ವೈಡ್-6, ನೋ ಬಾಲ್)  11

ವಿಕೆಟ್ ಪತನ: 1-20 (ಬಿಸ್ಲಾ; 2.4), 2-21 (ಗಂಭೀರ್; 2.6), 3-71 (ತಿವಾರಿ; 12.1).

ಬೌಲಿಂಗ್ ವಿವರ: ಅಲ್ಫೊನ್ಸೊ ಥಾಮಸ್ 4-0-34-1, ಮುರಳಿ ಕಾರ್ತಿಕ್ 4-0-25-0, ಲೆವಿಸ್ ಗ್ರೆಗೊರಿ 2-0-9-2, ಪೀಟರ್ ಟ್ರೆಗೊ 1-0-6-0, ರೆಲೋಫ್  ವಾನ್ ಡರ್ ಮರ್ವ್ 4-0-21-0, ಜಾರ್ಜ್ ಡಾರ್ಕೆಲ್ 4-0-32-0, ಅರುಲ್ ಸುಪ್ಪಯ್ಯ 1-0-30-0.

ಸಾಮರ್ಸೆಟ್: 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 164

ಕ್ರಿಸ್ ಜೋನ್ಸ್ ಸಿ ತಿವಾರಿ ಬಿ ಇಕ್ಬಾಲ್ ಅಬ್ದುಲ್ಲಾ  06

ಪೀಟರ್ ಟ್ರೆಗೊ ರನೌಟ್  28

ರೆಲೋಫ್ ವಾನ್ ಡರ್ ಮೆರ್ವ್ ಸಿ ಮತ್ತು ಬಿ ಶಕೀಬ್  73

ಜೇಮ್ಸ ಹಿಲ್ಡ್ರೆಟ್ ಸಿ ಬಿಸ್ಲಾ ಬಿ ರಜತ್ ಭಾಟಿಯಾ  00

ನಿಕ್ ಕಾಂಪ್ಟನ್ ಔಟಾಗದೆ  19

ಅರುಲ್ ಸುಪ್ಪಯ್ಯ ಬಿ ರಜತ್ ಭಾಟಿಯಾ  15

ಸ್ಟೀವ್ ಸ್ನೆಲ್ ಔಟಾಗದೆ  06

ಇತರೆ: (ಬೈ-4, ಲೆಗ್‌ಬೈ-8, ವೈಡ್-5)  17

ವಿಕೆಟ್ ಪತನ: 1-15 (ಜೋನ್ಸ್; 1.1), 2-120 (ಟ್ರೆಗೊ; 13.1), 3-121 (ಮೆರ್ವ್; 13.5), 4-123 (ಹಿಲ್ಡ್ರೆತ್; 14.1), 5-141 (ಸುಪ್ಪಯ್ಯ; 16.5)

ಬೌಲಿಂಗ್: ಬ್ರೆಟ್ ಲೀ 4-0-27-0, ಇಕ್ಬಾಲ್ ಅಬ್ದುಲ್ಲಾ 4-0-29-1, ಶಕೀಬ್ ಅಲ್ ಹಸನ್ 4-0-30-1, ಲಕ್ಷ್ಮೀಪತಿ ಬಾಲಾಜಿ 3-0-23-0, ಜಾಕ್ ಕಾಲಿಸ್ 1-0-16-0, ರಜತ್ ಭಾಟಿಯಾ 3.4-0-27-2

ಫಲಿತಾಂಶ: ಸಾಮರ್ಸೆಟ್‌ಗೆ 5 ವಿಕೆಟ್ ಜಯ; ಪಂದ್ಯಶ್ರೇಷ್ಠ: ವಾನ್ ಡರ್ ಮೆರ್ವ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.