ಶುಕ್ರವಾರ, ಜೂನ್ 25, 2021
30 °C

ನೈಸ್‌ ಸಂಸ್ಥೆಗೆ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇಂದ್ರ ಸರ್ಕಾರದ ಯೋಜನಾ ಆಯೋಗ ಹಾಗೂ ನಿರ್ಮಾಣ ಉದ್ದಿಮೆಯಿಂದ ಸ್ಥಾಪಿತ­ವಾದ ‘ನಿರ್ಮಾಣ ಉದ್ದಿಮೆ ಅಭಿವೃದ್ಧಿ ಸಮಿತಿ’ (ಸಿಐಡಿಸಿ)ಯು ದೇಶದಲ್ಲಿ ಅತ್ಯುತ್ತಮ ನಿರ್ಮಾಣ ಯೋಜನೆ-ಗಾಗಿ ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೈಸಸ್‌ ಸಂಸ್ಥೆಗೆ (ನೈಸ್‌ ಸಂಸ್ಥೆ) ‘ಕನ್‌ಸ್ಟ್ರಕ್ಷನ್‌ ಆಫ್‌ ರಿಜಿಡ್‌ ಪೇವ್‌ಮೆಂಟ್‌’ ಪ್ರಶಸ್ತಿ ನೀಡಿದೆ.ನವದೆಹಲಿಯಲ್ಲಿ ಈಚೆಗೆ ನಡೆದ ಸಿಐಡಿಸಿ 18ನೇ ವಾರ್ಷಿಕೋತ್ಸವದಲ್ಲಿ ನೈಸ್ ಸಂಸ್ಥೆಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ನೈಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಪ್ರಶಸ್ತಿ ಸ್ವೀಕರಿಸಿದರು. ನೈಸ್‌ ನಿರ್ಮಾಣ ಯೋಜನೆಗೆ ಇಂಡಿಯನ್ ಕಾಂಕ್ರೀಟ್ ಇನ್‌ಸ್ಟಿ­ಟ್ಯೂಟ್‌ನ ಬೆಂಗಳೂರು ಘಟಕವು 2013ರಲ್ಲಿ ‘ಔಟ್‌ಸ್ಟ್ಯಾಂಡಿಂಗ್‌ ಕಾಂಕ್ರೀಟ್‌ ಸ್ಟ್ರಕ್ಚರ್‌ ಆಫ್‌ ಕರ್ನಾಟಕ–2013’ ಪ್ರಶಸ್ತಿ ನೀಡಿ ಗೌರವಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.