ನೌಕಾಪಡೆಯಿಂದ 20 ಮಂದಿ ರಕ್ಷಣೆ

ಮುಂಬೈ (ಪಿಟಿಐ): ಮುಂಬೈ ಬಂದರಿಂದ 40 ನಾಟಿಕಲ್ ಮೈಲ್ಸ್ ದೂರದ ಅರಬ್ಬಿ ಸಮುದ್ರದಲ್ಲಿ ಮುಳುಗುತ್ತಿದ್ದ ಸರಕು ಸಾಗಾಣಿಕೆ ಹಡಗೊಂದರಿಂದ ಭಾರತೀಯ ನೌಕಾಪಡೆ ಸಿಬ್ಬಂದಿ ಕೊನೆಯ ಕ್ಷಣದಲ್ಲಿ ಚುರುಕಿನ ಕಾರ್ಯಾಚರಣೆ ನಡೆಸಿ ಪವಾಡ ಸದೃಶ್ಯ ರೀತಿಯಲ್ಲಿ 20 ಮಂದಿಯನ್ನು ರಕ್ಷಿಸಿದ್ದಾರೆ.
‘ಜಿಂದಾಲ್ ಕಾಮಾಕ್ಷಿ’ ಹೆಸರಿನ ಈ ಹಡಗು ಪಲ್ಘರ್ ಜಿಲ್ಲೆಯ ಸಮೀಪ ಅರಬ್ಬಿ ಸಮುದ್ರದಲ್ಲಿ ಮುಳುಗುತ್ತಿರುವ ಕುರಿತು ಭಾನುವಾರ ತಡರಾತ್ರಿ ಸೂಚನೆ ಬಂತು. ತಕ್ಷಣವೇ ರಕ್ಷಣೆಗೆ ಧಾವಿಸಿದೆವು. ಸೋಮವಾರ ಬೆಳಗಿನ ಜಾವ 20 ಮಂದಿಯನ್ನು ಹೆಲಿಕಾಫ್ಟರ್ ಮೂಲಕ ಸುರಕ್ಷಿತವಾಗಿ ಮೇಲೆತ್ತಲಾಯಿತು. ಸ್ವಲ್ಪ ತಡವಾಗಿದ್ದರೂ ಇವರೆಲ್ಲರು ಹಡಗಿನ ಜತೆಗೆ ಜಲಸಮಾಧಿಯಾಗುತ್ತಿದ್ದರು’ ಎಂದು ರಕ್ಷಣಾ ಸಚಿವಾಲಯದ ವಕ್ತಾರರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಸರಕು ತುಂಬಿಕೊಂಡ ಈ ಹಡಗು ವಸಾಯಿ ಕರಾವಳಿಯಿಂದ ಮುಂಬೈ ಬಂದರಿಗೆ ಬರುತ್ತಿತ್ತು. ಹಡಗು ಮುಳುಗಲು ಕಾರಣವೇನು ಎನ್ನುವುದು ಇದುವರೆಗೂ ಖಚಿತಗೊಂಡಿಲ್ಲ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.