ಶನಿವಾರ, ಮೇ 28, 2022
22 °C

ನ್ಯಾಯಾಧೀಶರ ಗೈರು: 26/11ರ ಪಾಕ್ ವಿಚಾರಣೆ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): 26/11ರ ಮುಂಬೈ ದಾಳಿ ಆರೋಪಿಗಳ ವಿಚಾರಣೆ ಶನಿವಾರ ಪಾಕಿಸ್ತಾನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶರ ಗೈರುಹಾಜರಿಯಿಂದಾಗಿ ಈ ತಿಂಗಳ 23ಕ್ಕೆ ಮುಂದೂಡಲ್ಪಟ್ಟಿದೆ.ಈ ಮೊದಲು ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾಯಾಧೀಶ ಶಾಹೀದ್ ರಫೀಕ್ ಪಂಜಾಬ್ ಪ್ರಾಂತ್ಯದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ವರ್ಗಾವಣೆಯಾಗ್ದ್ದಿದ್ದಾರೆ. ಈ ಜಾಗಕ್ಕೆ ಇದುವರೆಗೂ ಬೇರೆ ನ್ಯಾಯಾಧೀಶರು ನೇಮಕವಾಗದ ಕಾರಣ ಪ್ರಕರಣದ  ವಿಚಾರಣೆಯನ್ನು ಮುಂದೂಡಲಾಗಿದೆ. ಈವರೆಗೆ ಐದು ಬಾರಿ ಈ ವಿಚಾರಣೆ ಮುಂದೂಡಿಕೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.