ಕೆಜಿಎಫ್: ಎಲ್ಲೆಡೆ ವಿಶ್ವ ಮಹಿಳಾ ದಿನಾಚರಣೆಯನ್ನು ಗುರುವಾರ ವಿಜೃಂಭಣೆಯಿಂದ ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಯುವಕನ ಮಾತಿಗೆ ಮರುಳಾದ ಯುವತಿಯೊಬ್ಬಳು ಪೊಲೀಸರಿಂದ ನ್ಯಾಯ ಸಿಗುತ್ತದೆಯೇ ಎಂದು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾಳೆ.

ಚಾಂಪಿಯನ್ ರೀಫ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಇಟಿ ಬ್ಲಾಕ್ ನಿವಾಸಿ ನಂದಿನಿ ಎಂಬ ಯುವತಿ ಆರು ವರ್ಷದಿಂದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಾಳೆ. ಆದರೆ ಮದುವೆ ಆಗುವುದಾಗಿ ಮಾತು ನೀಡಿದ ಆತ, ದೈಹಿಕ ಸುಖ ಅನುಭವಿಸಿದ ಮೇಲೆ ನಂದಿನಿ ಜೊತೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾನೆ.

ಅಷ್ಟೇ ಅಲ್ಲ, ಚೆನ್ನೈನ ಯುವತಿಯೊಬ್ಬಳನ್ನು ವಿವಾಹವಾಗಲು ಸಿದ್ಧತೆ ನಡೆಸಿದ್ದಾನೆ. ಇಷ್ಟು ವರ್ಷಗಳ ಕಾಲ ತೆರೆಮರೆಯಲ್ಲೆ ನಡೆಯುತ್ತಿದ್ದ ಪ್ರೇಮ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ.
ಆದರೆ ಯುವತಿಯ ದೂರಿಗೆ ಚಾಂಪಿಯನ್ರೀಫ್ಸ್ ಪೊಲೀಸರು ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಲಾಗಿದೆ. ಕೇಂದ್ರ ವಲಯದ ಐಜಿಪಿಗೆ ದೂರು ನೀಡಿದ ಮೇಲಷ್ಟೆ ಯುವತಿ ನೀಡಿದ ದೂರನ್ನು ದಾಖಲಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಇಟಿ ಬ್ಲಾಕ್ನ ನಂದಿನಿ ಅದೇ ಬಡಾವಣೆಯ ಯುವಕ ಕಾರ್ತಿಬನ್ (23) ಎಂಬಾತನನ್ನು ಪ್ರೇಮಿಸುತ್ತಿದ್ದಳು. ಆತ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ರಜಕ್ಕೆ ಊರಿಗೆ ಬಂದಾಗ ನಂದಿನಿಯ ಜೊತೆ ಪ್ರೇಮ ಸಲ್ಲಾಪ ನಡೆಸುತ್ತಿದ್ದ. ನಂತರ ಮುದುವೆ ಆಗುವುದಾಗಿ ದೈಹಿಕ ಸಂಪರ್ಕ ಕೂಡ ಪಡೆದ. ನಂತರ ಕಳೆದ ಫೆ.14ರಂದು ನಂದಿನಿ ಮನೆಗೆ ಹೋಗಿ ತಿರುಪತಿಯಲ್ಲಿ ಮದುವೆ ಆಗೋಣ ಎಂದು ಕರೆದಿದ್ದಾನೆ.

ಆದರೆ ಕುಡಿದ ಮತ್ತಿನಲ್ಲಿದ್ದ ಆತನ ಮಾತನ್ನು ನಂಬುವ ಸ್ಥಿತಿಯಲ್ಲಿ ಯುವತಿಯ ಮನೆಯವರು ಇರಲಿಲ್ಲ. ನಂತರ ಆತನಿಗೆ ಬೇರೊಬ್ಬ ಹುಡುಗಿ ಜೊತೆಗೆ ವಿವಾಹವಾಗಲು ಸಿದ್ಧತೆ ನಡೆಯುತ್ತಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಫೆ. 27 ರಂದು ನಂದಿನಿ ದೂರು ನೀಡಿದಳು.

ಆ ಸಮಯದಲ್ಲಿ ಬಡಾವಣೆಯಲ್ಲಿಯೇ ಇದ್ದ ಯುವಕ ಮತ್ತು ಆತನ ತಂದೆ ಈಗ ತಪ್ಪಿಸಿಕೊಂಡಿದ್ದಾರೆ. ನನಗೆ ಆತನೊಂದಿಗೆ ಮದುವೆ ಮಾಡಿಸಿ, ಇಲ್ಲವೇ ಆತನ ಮೇಲೆ ಕ್ರಮ ಕೈಗೊಳ್ಳಿ ಎಂದು ನಂದಿನಿ ಮೊರೆಯಿಡುತ್ತಿದ್ದಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.