ನ್ಯಾಯ ಬೆಲೆ ಅಂಗಡಿಯಲ್ಲಿ ಅನ್ಯಾಯ: ಪ್ರತಿಭಟನೆ
ಮದ್ದೂರು: ತಾಲ್ಲೂಕಿನ ಚಾಮನ ಹಳ್ಳಿ ನ್ಯಾಯ ಬೆಲೆ ಅಂಗಡಿಯಲ್ಲಿ `ಅನ್ನಭಾಗ್ಯ ಯೋಜನೆ'ಯ ಅಕ್ಕಿಯನ್ನು ನಿಗದಿತ ದರಕ್ಕಿಂತ ಹೆಚ್ಚು ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮದ ಜಯಂತಿ ನಗರದ ನಿವಾಸಿಗಳು ಪ್ರತಿಭಟನೆ ಮಾಡಿದರು.
ಮುಖಂಡ ಶಿವಕುಮಾರ್ ಮಾತನಾಡಿ, ರಾಜ್ಯ ಸರ್ಕಾರದಿಂದ 30ಕೆ.ಜಿ ಅಕ್ಕಿಗೆ ರೂ.1ರಂತೆ 30ರೂಪಾಯಿ ಪಡೆಯಬೇಕಾದ ಮಾಲೀಕರು, ಪ್ರತಿಯೊಬ್ಬರಿಂದ 38ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದರೆ ಬೇಕಾದರೆ ತೆಗೆದುಕೊಳ್ಳಿ ಇಲ್ಲದಿದ್ದರೆ ಹೊರಡಿ ಎಂದು ಬಡಜನರಿಗೆ ಬೆದರಿಕೆವೊಡ್ಡುತ್ತಾರೆ ಎಂದು ಆರೋಪಿಸಿದರು.
ಮುಖಂಡರಾದ ಭೈರವ, ವೆಂಕಟರಾಮು, ಪುಟ್ಟಮ್ಮ, ಯಶೋದಮ್ಮ, ಚಂದ್ರಮ್ಮ, ತಾಯಮ್ಮ, ಭಾಗ್ಯಮ್ಮ, ಕರಿಯಮ್ಮ, ಶಶಿಕಲಾ, ಶೃತಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಆಗ್ರಹ: ಇದೇ ಸಂದರ್ಭದಲ್ಲಿ ಮಹಿಳೆಯರು ತಮ್ಮ ಕಾಲೋನಿಯಲ್ಲಿ ಹಲವು ದಿನಗಳಿಂದ ಕೆಟ್ಟಿರುವ ಕೈಪಂಪ್ ಅನ್ನು ದುರಸ್ತಿಗೊಳಿಸಲು ಕೂಡಲೇ ಗ್ರಾಮ ಪಂಚಾಯಿತಿ ಮುಂದಾಗಬೇಕೆಂದು ಆಗ್ರಹಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.