ಬುಧವಾರ, ಏಪ್ರಿಲ್ 14, 2021
31 °C

ನ್ಯಾ.ಸದಾಶಿವ ವರದಿ ಜಾರಿಗೊಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಡಗಿ : ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಯಥಾ ವತ್ತಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ತಾಲ್ಲೂಕು ಮಾದಿಗ ಹೋರಾಟ ಸಮಿತಿ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿತು.ಅಂಬೇಡ್ಕರ ಭವನದಿಂದ ಆರಂಭ ವಾದ ಪ್ರತಿಭಟನಾ ಮೆರವಣೆಗೆ ಪಟ್ಟಣದ ಮುಖ್ಯ ರಸ್ತೆಯ ಮೂಲಕ ಹಾಯ್ದು ತಹಶೀಲ್ದಾರ ಕಾರ್ಯಾಲ ಯದ ಆವರಣ ತಲುಪಿತು. ದಾರಿ ಯುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿಲ್ಲಾ ಮುಖಂಡ ವಾಸುದೇವ ಬಸವನವರ ಮಾತನಾಡಿ, ರಾಜಕೀಯ ಲಾಭ ಪಡೆಯಲು ಎಲ್ಲದಕ್ಕೂ ಸಮ್ಮತಿ ವ್ಯಕ್ತಪಡಿಸುವ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಬೆರಳೆಣಿಕೆಯಷ್ಟಿದ್ದ ಪರಿಶಿಷ್ಟ ಜಾತಿಗೆ 103 ಜಾತಿಗಳನ್ನು ಸೇರ್ಪಡೆ ಮಾಡಿರುವುದರಿಂದ  ಮಾದಿಗ ಜನಾಂಗಕ್ಕೆ ಅನ್ಯಾಯವಾಗಿದೆ. ಅಸ್ಪೃಶ್ಯ ರೆಂದು ಗುರುತಿಸಲಾಗಿದ್ದ ಮಾದಿಗ ಜನಾಂಗವನ್ನು ಸಂಪೂರ್ಣ ವಾಗಿ ಕಡೆಗಣಿಸಲಾಗಿದೆ. ಅಲ್ಲದೆ ಪರಿಶಿಷ್ಟರ ಪಟ್ಟಿಯಲ್ಲಿದ್ದ ಮೂಲ ಜಾತಿಗಲೇ ಇಂದು ಸೌಲಭ್ಯ ವಂಚಿತರಾಗುತ್ತಿವೆ ಎಂದು ಆರೋಪಿಸಿದರು.ಮೀಸಲಾತಿ ಪಟ್ಟಿಯಿಂದಲೇ ಮಾದಿಗ ಜನಾಂಗವನ್ನು ಹೊರಗಿಡುವ ಹುನ್ನಾರ ಗಳು ನಡೆದಿದ್ದು ಶೋಷಿತ ಮಾದಿಗ ಜನಾಂಗ ಎಚ್ಚೆತ್ತುಕೊಂಡು ಸಂಘಟಿತ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದರು.ದಲಿತ ಮುಖಂಡ ಸುರೇಶ ಆಸಾದಿ ಮಾತನಾಡಿ ಸದಾಶಿವ ಆಯೋಗದ ವರದಿಯಯಂತೆ ಮಾದಿಗರಿಗೆ ಪ್ರತ್ಯೇಕವಾಗಿ ಶೇ 6, ಹೊಲೆಯರಿಗೆ ಶೇ 5 ಹಾಗೂ ಪರಿಶಿಷ್ಟ ವರ್ಗದಲ್ಲಿರುವ ಅಸ್ಪೃಶ್ಯರಲ್ಲದವರಿಗೆ ಶೇ 3ರಷ್ಟು ಮೀಸಲಾತಿ ಸೌಲಭ್ಯಗಳನ್ನು ನೀಡುವಂತೆ ತಿರ್ಮಾನಿಸಿರುವುದನ್ನು ಯಥಾವತ್ತಾಗಿ ಜಾರಿಗೆ ತರುವಂತೆ ಆಗ್ರಹಿಸಿದರು.    ಪುರಸಭಾ ಸದಸ್ಯ ದುರ್ಗೇಶ ಗೋಣೆಮ್ಮನವರ ಮಾತನಾಡಿದರು.

ಪ್ರತಿಭಟನೆಯಲ್ಲಿ ಶಿವಪ್ಪ ಚಿಕ್ಕಣ್ಣ ನವರ, ಮಾಲತೇಶ ಹಾವನೂರ, ನಾಗೇಶ ಪೂಜಾರ, ಮಾಲತೇಶ ಯಲ್ಲಾಪುರ, ಸೋಮಣ್ಣ ಮಾಳಗಿ, ಚಿಕ್ಕಪ್ಪ ಚಿಕ್ಕಣ್ಣನವರ, ಚಂದ್ರು ಗಟ್ಟಿಮನಿ, ಬಸವರಾಜ ತಡಸದ, ಜಗದೀಶ ಹರಿಜನ, ಗುತ್ತೆಪ್ಪ ಪೂಜಾರ, ಮಾಲತೇಶ ಹುಣಸಿಮರದ, ಗುತ್ತೆಪ್ಪ ಚಿಕ್ಕಣ್ಣನವರ, ನಾಗೇಶ ಕೊಪ್ಪದ, ಗೋಣಿಬಸಪ್ಪ ಹೊನ್ನಮ್ಮನವರ  ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.