ಹ್ಯಾಮಿಲ್ಟನ್: ವೆರ್ನಾನ್ ಫಿಲ್ಯಾಂಡರ್ (49ಕ್ಕೆ3) ಹಾಗೂ ಡೇಲ್ ಸ್ಟೇಯ್ನ (49ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ದಾಳಿ ಕಾರಣ ನ್ಯೂಜಿಲೆಂಡ್ ತಂಡದವರು ಗುರುವಾರ ಇಲ್ಲಿ ಆರಂಭವಾದ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿದಿದ್ದಾರೆ.

ಸೆಡ್ಡಾನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದ ತನ್ನ ಮೊದಲ ಇನಿಂಗ್ಸ್ನಲ್ಲಿ ನ್ಯೂಜಿಲೆಂಡ್ 61.2 ಓವರ್ಗಳಲ್ಲಿ 185 ರನ್ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಕೂಡ ಆರಂಭಿಕ ಆಘಾತ ಅನುಭವಿಸಿದೆ.

ಮೊದಲ ದಿನದ ಆಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 11 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿದೆ. ಈ ಎರಡೂ ವಿಕೆಟ್ಗಳನ್ನು ಕ್ರಿಸ್ ಮಾರ್ಟಿನ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್ ಮೊದಲ ಇನಿಂಗ್ಸ್: 61.2 ಓವರ್ಗಳಲ್ಲಿ 185 (ಬ್ರೆಂಡನ್ ಮೆಕ್ಮಿಲನ್ 61, ರಾಸ್ ಟೇಲರ್ 44, ಮಾರ್ಕ್ ಗಿಲೆಸ್ಪಿ 27; ವೆರ್ನಾನ್ ಫಿಲ್ಯಾಂಡರ್ 49ಕ್ಕೆ3, ಡೇಲ್ ಸ್ಟೇಯ್ನ 49ಕ್ಕೆ3, ಇಮ್ರಾನ್ ತಾಹೀರ್ 12ಕ್ಕೆ2); ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್: 11 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 27 (ಗ್ರೇಮ್ ಸ್ಮಿತ್ 13; ಕ್ರಿಸ್ ಮಾರ್ಟಿನ್ 18ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.