ಬೆಂಗಳೂರು: `ಪ್ರಜಾವಾಣಿ~ ಹಾಗೂ `ಡೆಕ್ಕನ್ ಹೆರಾಲ್ಡ್~ ಪ್ರಾಯೋಜಕತ್ವದ `ಡೆಕ್ಕನ್ ಅಥ್ಲೆಟಿಕ್ ಕ್ಲಬ್~ ಆಶ್ರಯದಲ್ಲಿ ನವೆಂಬರ್ 6ರಿಂದ 27ರ ವರೆಗೆ 23ನೇ ವಾರಾಂತ್ಯದ ಅಥ್ಲೆಟಿಕ್ ಕ್ರೀಡಾಕೂಟ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.

ಬಾಲಕರ 13 ಹಾಗೂ 16 ವರ್ಷದೊಳಗಿನವರು ಮತ್ತು ಬಾಲಕಿಯರ 12 ಮತ್ತು 15 ವರ್ಷದೊಳಗಿನ ಅಥ್ಲೀಟ್ಗಳು ಈ ಕೂಟದಲ್ಲಿ ಪಾಲ್ಗೊಳ್ಳಬಹುದು. ನ. 6, 13, 20 ಹಾಗೂ 27ರಂದು ಸ್ಪರ್ಧೆಗಳು ನಡೆಯಲಿವೆ. ಮೊದಲ ಮೂರು ವಾರ ಅರ್ಹತಾ ಸುತ್ತಿನ ಸ್ಪರ್ಧೆಗಳು ನಡೆಯಲಿವೆ. ಕೊನೆಯ ದಿನ (ನ. 27) ರಂದು ಫೈನಲ್ ಸ್ಪರ್ಧೆಗಳು ಜರುಗಲಿವೆ. ಇದರಲ್ಲಿ ಪಾಲ್ಗೊಳ್ಳುವ ಉಚಿತ ಪ್ರವೇಶವಿದೆ.

ಪ್ರತಿ ವಿಭಾಗದ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮೊದಲ ಮೂರು ಅಥ್ಲೀಟ್ಗಳಿಗೆ ನಗದು ಬಹುಮಾನ, ಪದಕ ಹಾಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರತ್ಯೇಕವಾಗಿ ಟ್ರೋಫಿ ಕೊಡಲಾಗುತ್ತದೆ ಎಂದು ಡೆಕ್ಕನ್ ಅಥ್ಲೆಟಿಕ್ಸ್ ಕ್ಲಬ್ನ ಸಂಘಟನಾ ಕಾರ್ಯದರ್ಶಿ ಅನಂತರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕೂಟದಲ್ಲಿ ಪಾಲ್ಗೊಳ್ಳಲು ಆಸಕ್ತಿವುಳ್ಳವರು ದಾಖಲಾತಿಗಾಗಿ ಈ ವಿಳಾಸವನ್ನು ಸಂಪರ್ಕಿಸಬಹುದು. ಅನಂತರಾಜು, ಸಂಘಟನಾ ಕಾರ್ಯದರ್ಶಿ, ಡೆಕ್ಕನ್ ಅಥ್ಲೆಟಿಕ್ ಕ್ಲಬ್, ನಂ: 39/137, ಐ `ಡಿ~ ಕ್ರಾಸ್, 6ನೇ ಮುಖ್ಯ ರಸ್ತೆ, ಆರ್ಇಎಂಸಿಒ ಲೇ ಔಟ್, ವಿಜಯನಗರ, ಬೆಂಗಳೂರು-560040.

ಹೆಚ್ಚಿನ ಮಾಹಿತಿಗೆ ದೂರವಾಣಿ 080-22275656 ಸಂಖ್ಯೆಯನ್ನು ಅಕ್ಟೋಬರ್ 29ರ ಒಳಗೆ ಸಂಪರ್ಕಿಸಬೇಕು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.