ಪಂಚಾಮೃತ ಸುಗಮ ಸಂಗೀತ ಅಕಾಡೆಮಿಯ ಆವರಣದಲ್ಲಿ ಇತ್ತೀಚೆಗೆ ನಡೆದ ‘ಭಕ್ತಿಭಾವ ಸಿಂಚನ’ ಕಲಾಸಕ್ತರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.

ಯುವ ಗಾಯಕಿ ವಿಭಾಶ್ರೀ ಅವರ ಕಂಠಸಿರಿಯಲ್ಲಿ ‘ಭಕ್ತಿಭಾವ ಸಿಂಚನ’ದ ಗೀತೆಗಳು ಕಾರ್ಯಕ್ರಮದಲ್ಲಿ ಮೂಡಿ ಬಂದಿತು. ವಿಘ್ನೇಶ್ವರನ ಕೃತಿ ‘ಭಜ ಮಾನಸ ವಿಘ್ನೇಶ್ವರ ಮನೀಶಂ’, ‘ಶ್ರೀಹರಿವಲ್ಲಭೆ ಮಾಂಪಾಹಿ’,‘ರಾಮಕೃಷ್ಣರು ಮನೆಗೆ ಬಂದರು’, ‘ಬಂದನೇನೆ ರಂಗ ಬಂದನೇ’, ‘ಮಹಾದೇವ ಶಿವ ಶಂಭೋ’, ‘ಜೀವವೊಂದು ಏನೋ ಒಂದು’, ‘ದಾಸನ ಮಾಡಿಕೋ ಎನ್ನ ಸ್ವಾಮಿ’, ‘ಸಾಮಗಾನ ಲೋಲೆ’, ‘ಈ ಆಗಸ ಈ ತಾರೆ ಝುಳು ಝುಳುನೇ ಹರಿವ ಜಲ ಧಾರೆ’ (ಭಾವಗೀತೆ), ಬಾ ಕೃಷ್ಣನೇ ಬಾರೋ ಬೇಗ ಬಾರೋ, ‘ಪವಡಿಸು ಪರಮಾತ್ಮನೇ ಸ್ವಾಮಿ’, ‘ಮುರಳಿಯ ನಾದವ ಕೇಳಿ’ ಮುಂತಾದ ಗೀತೆಗಳು ಕೇಳುಗರಿಗೆ ಇಂಪು ನೀಡಿದವು.

ಹಿರಿಯ ಗಾಯಕ ಮತ್ತು ತಬಲಾ ವಾದಕ ಶಂಕರ ಶಾಸ್ತ್ರಿ ಕಾರ್ಯಕ್ರಮ ಉದ್ಘಾಟಿಸಿದರು.

ಗಮಕಿ ನಾರಾಯಣ್ ಯುವ ಗಾಯಕಿ ವೀಣಾ, ಸಂಸ್ಥೆಯ ಪೋಷಕ ಚಂದ್ರಶೇಖರ್, ಮನು ಭಾರದ್ವಾಜ್ ಹಾಗೂ ಹಲವಾರು ಕಲಾಸಕ್ತರು ಉಪಸ್ಥಿತರಿದ್ದರು, ಹಾರ್ಮೋನಿಯಂನಲ್ಲಿ ಶ್ರೀವತ್ಸ, ತಬಲಾದಲ್ಲಿ ಗಿರೀಶ್ ಸಹಕರಿಸಿದರು. v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.