ಶುಕ್ರವಾರ, ಜನವರಿ 17, 2020
22 °C

ಪಂಚಾಯತ್‌ ರಾಜ್‌ ತಿದ್ದುಪಡಿಗೆ ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಸ್ತುತ ಜಾರಿಯಲ್ಲಿರುವ 1993ರ ಕರ್ನಾಟಕ ಪಂಚಾಯತ್‌­ರಾಜ್‌ ಕಾಯ್ದೆಗೆ ಸಮಗ್ರವಾಗಿ ತಿದ್ದು­ಪಡಿ ತರುವ ಸಂಬಂಧ ವಿಧಾನಸಭೆಯ ಮಾಜಿ ಸ್ಪೀಕರ್‌ ಕೆ.ಆರ್‌. ರಮೇಶ್‌­ಕುಮಾರ್‌ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಲಾಗಿದೆ.ಪಂಚಾಯತ್‌ರಾಜ್‌ ಕಾಯ್ದೆಯನ್ನು ಇನ್ನಷ್ಟು ಬಲಪಡಿಸುವ ಮತ್ತು ಪಂಚಾ­ಯತ್‌ರಾಜ್ ಸಂಸ್ಥೆಗಳನ್ನು ಕ್ರಿಯಾಶೀಲ­ಗೊಳಿಸುವ ಉದ್ದೇಶದಿಂದ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ­ಯತ್ ರಾಜ್‌ ಸಚಿವ ಎಚ್.ಕೆ.ಪಾಟೀಲ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಆರು ತಿಂಗಳು: ಈಗಿರುವ ಮೂರು ಹಂತದ ಪಂಚಾಯತ್ ರಾಜ್‌ ವ್ಯವಸ್ಥೆ­ಯನ್ನೇ ಮುಂದುವರಿಸಬೇಕೇ ಅಥವಾ ಎರಡು ಹಂತದ ವ್ಯವಸ್ಥೆ ಜಾರಿಗೆ ತರುವ ಅಗತವಿದೆಯೇ ಎಂಬ ಬಗ್ಗೆಯೂ ವರದಿಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ರಮೇಶ್ ಕುಮಾರ್‌ ಹೇಳಿದರು.ಸಮಿತಿಯಲ್ಲಿರುವ ಸದಸ್ಯರು

ಶಾಸಕ ಅಲ್ಲಮಪ್ರಭು ಪಾಟೀಲ, ಮಾಜಿ ಸಂಸದರಾದ ಸಿ.ನಾರಾ­ಯ­ಣ­­ಸ್ವಾಮಿ, ಅಮರ್‌ಸಿಂಗ್ ಪಾಟೀಲ, ಮಾಜಿ ಶಾಸಕ ಡಿ.ಆರ್.­ಪಾಟೀಲ, ಕೊಪ್ಪಳ ಜಿಲ್ಲಾ ಪಂಚಾ­ಯತ್ ಅಧ್ಯಕ್ಷ ಜನಾ­ರ್ದನ, ಬಳ್ಳಾರಿ ಜಿ.ಪಂ. ಮಾಜಿ ಅಧ್ಯಕ್ಷ ವೆಂಕಟ­ರಾವ್‌ ಘೋರ್ಪಡೆ, ನಿವೃತ್ತ ಐಎಎಸ್‌ ಅಧಿಕಾರಿ ಟಿ.­ಆರ್.­ರಘು­ನಂದನ್, ಮಾಜಿ ಶಾಸಕ ಖಾಜಿ ಅರ್ಷದ್‌ ಅಲಿ, ಡಾ.ಬಿ.­ಆರ್‌.­ಅಂಬೇಡ್ಕರ್‌ ಪ್ರತಿ­ಷ್ಠಾನದ ಉಪಾಧ್ಯಕ್ಷ ಎಫ್‌.­ಎಚ್‌.­­ಜಕ್ಕಪ್ಪ­ನವರ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ ನಿರ್ದೇಶಕ ಜಾರ್ಜ್ ಮ್ಯಾಥ್ಯೂ, ಧಾರವಾಡ ಜಿ.ಪಂ. ಮಾಜಿ ಅಧ್ಯಕ್ಷೆ ಶಾಂತವ್ವ ಗುಜ್ಜಲ, ಕಾನೂನು ತಜ್ಞರಾದ ಸಂದೀಪ್‌ ಬೆಳಗಲಿ, ಎಚ್‌.ಡಿ.ಅಮರನಾಥ್‌, ದಕ್ಷಿಣಾ ಮೂರ್ತಿ (ಸದಸ್ಯ ಕಾರ್ಯದರ್ಶಿ).

ಪ್ರತಿಕ್ರಿಯಿಸಿ (+)