ಶುಕ್ರವಾರ, ಏಪ್ರಿಲ್ 23, 2021
31 °C
ಮೀರಾ ನಾಯರ್‌ಗೆ ಶತಮಾನೋತ್ಸವ ಪ್ರಶಸ್ತಿ

ಪಂಜಾಬಿ ಚಿತ್ರಕ್ಕೆ ಸ್ವರ್ಣಕಮಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಣಜಿ (ಪಿಟಿಐ): ಶುಕ್ರವಾರ ಇಲ್ಲಿ ಮುಕ್ತಾಯಗೊಂಡ 43ನೇ ಭಾರತ ಅಂತರರಾಷ್ಟ್ರೀಯ ಚಲನ ಚಿತ್ರೋ ತ್ಸವದಲ್ಲಿ (ಐಎಫ್‌ಎಫ್‌ಐ) ಪಂಜಾಬಿ ಚಿತ್ರ `ಅನ್ಹೆ ಘೋರೆಯ್ ದಾ ದಾನ್' (ಕುರುಡು ಕುದುರೆಗೆ ದಾನ ನೀಡಿ) ಪ್ರತಿಷ್ಠಿತ ಸ್ವರ್ಣಮಯೂರ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್‌ಎಫ್‌ಡಿಸಿ) ಈ ಚಿತ್ರ ನಿರ್ಮಿಸಿದ್ದು, ಗುರವಿಂದರ್ ಸಿಂಗ್ ಇದನ್ನು ನಿರ್ದೇಶಿಸಿದ್ದಾರೆ. ಚಿತ್ರಕಥೆ ಪಂಜಾಬಿ ಸಾಹಿತಿ ಗುರ್ದಿಯಾಲ್ ಸಿಂಗ್ ಅವರ ಕಾದಂಬರಿಯನ್ನು ಆಧರಿಸಿದೆ.

ಹಲವು ವರ್ಷಗಳ ಅಧೀನತೆ ಕಷ್ಟ ಜೀವಿಗಳ ಮೇಲೆ ಯಾವ ಪರಿಣಾಮ ಬೀರಲಿದೆ. ತಮ್ಮ ನಿಯಂತ್ರಣ ಮೀರಿದ ಘಟನೆಗಳಿಂದ ಹೇಗೆ ಅವರು ತಾಪ ಅನುಭವಿಸುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

`ಅನ್ಹೆ ಘೋರೆಯ್ ದಾ ದಾನ್' ಈಗಾಗಲೇ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

ವರ್ಣರಂಜಿತ `ಐಎಫ್‌ಎಫ್‌ಐ' ಸಮಾರೋಪ ಸಮಾರಂಭದಲ್ಲಿ `ಅನ್ಹೆ ಘೋರೆಯ್ ದಾ ದಾನ್' ನಿರ್ದೇಶಕ ಗುರವಿಂದರ್ ಸಿಂಗ್ ಸ್ವರ್ಣಮಯೂರ ಸ್ಮರಣಿಕೆ ಮತ್ತು 20 ಲಕ್ಷ ರೂಪಾಯಿ ನಗದು ಸ್ವೀಕರಿಸಿದರು. ಅಮೆರಿಕದ ನಿರ್ದೇಶಕಿ ಲೂಸಿ ಮಲೊಯ್ ಅವರ ಸ್ಪಾನಿಷ್ ಚಿತ್ರ `ಉನಾ ನೋಚೆ'ಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಲಭಿಸಿದ್ದು, ಅವರಿಗೆ ರಜತಮಯೂರ ಮತ್ತು 15 ಲಕ್ಷ ರೂ ನಗದು ನೀಡಿ ಗೌರವಿಸಲಾಗಿದೆ.

ಭಾರತೀಯ ಚಿತ್ರರಂಗ ಈ ವರ್ಷ ಶತಮಾನ ಪೂರೈಸಿರುವ ಹಿನ್ನೆಲೆಯಲ್ಲಿ ಮೀರಾ ನಾಯರ್ ಅವರ `ದಿ ರಿಲಕ್ಟಂಟ್ ಫಂಡಮೆಂಟಲಿಸ್ಟ್' ಚಿತ್ರಕ್ಕೆ ಶತಮಾನೋತ್ಸವ ಪ್ರಶಸ್ತಿ ನೀಡಲಾಗಿದೆ.

`ದಿ ವೇಟ್' ಚಿತ್ರದ ನಿರ್ದೇಶಕ ದಕ್ಷಿಣ ಕೊರಿಯಾದ  ಕ್ಯು-ಹಾನ್ ಜಿಯೋನ್ ಅತ್ಯುತ್ತಮ ನಿರ್ದೇಶಕ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಸಿಂಹಳ -ತಮಿಳು ಚಿತ್ರ `ವಿತ್ ಯು ವಿದೌಟ್ ಯು' ನಾಯಕಿ ಅಂಜಲಿ ಪಾಟೀಲ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ, ಪೋಲೆಂಡ್- ರಷ್ಯಾ- ಜರ್ಮನಿಯ ಚಿತ್ರ `ರೋಸ್'ನ ನಾಯಕ ಮಾರ್ಸಿನ್ ಡೊರ್ಸಿನ್ಸ್ಕಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.