ವಿಜಾಪುರ: ಜೈಪುರದ ಖ್ಯಾತ ಮೋಹನವೀಣಾ ಮಾಂತ್ರಿಕ ಪಂ.ವಿಶ್ವಮೋಹನ್ ಭಟ್ ಅವರಿಗೆ ಗುರುವಾರ ಇಲ್ಲಿ `ಪುಟ್ಟರಾಜ ಸಮ್ಮಾನ್-2012~ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಧಾರವಾಡದ ಡಾ.ಪುಟ್ಟರಾಜ ಗವಾಯಿ ಪ್ರತಿಷ್ಠಾನದಿಂದ ನೀಡಲಾದ ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು, ಸ್ಮರಣಿಕೆ ಒಳಗೊಂಡಿದೆ.

`ಪುಟ್ಟರಾಜ ಗವಾಯಿಗಳ ಪ್ರಶಸ್ತಿ ಪಡೆದ ನಾನು ಧನ್ಯ. ಕರ್ನಾಟಕದ ಅತಿ ದೊಡ್ಡ ಪ್ರಶಸ್ತಿ ಇದು ಎಂದು ನಾನು ಭಾವಿಸಿದ್ದೇನೆ. ಗ್ರ್ಯಾಮಿ ಪ್ರಶಸ್ತಿಗೂ ನಾನು ಪಾತ್ರನಾಗಿದ್ದೇನೆ. ನಮ್ಮ ದೇಶದಲ್ಲಿ ದೊರೆತ ಈ ಪ್ರಶಸ್ತಿ ಆ ಗ್ರ್ಯಾಮಿ ಪ್ರಶಸ್ತಿಗಿಂತ ಕಡಿಮೆ ಅಲ್ಲ ಎಂಬುದು ನನ್ನ ಭಾವನೆ ಎಂದು ವಿಶ್ವಮೋಹನ್ ಭಟ್ ಹೇಳಿದರು. `ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವು ಹೊಸ ಪ್ರಯೋಗಗಳ ಮೂಲಕ ವಿಶ್ವಮಾನ್ಯತೆ ಪಡೆದಿದೆ~ ಎಂದು ಅವರು ನುಡಿದರು

ಪ್ರತಿಷ್ಠಾನದ ಅಧ್ಯಕ್ಷ ಸದಾನಂದ ಕನವಳ್ಳಿ, `ಗಿಟಾರನ್ನು ಹಿಂದೂಸ್ತಾನಿ ಸಂಗೀತ ವಾದ್ಯಕ್ಕೆ ಅಳವಡಿಸಿರುವುದು ಪಂ.ವಿಶ್ವಮೋಹನ ಭಟ್ ಸಾಧನೆ~ ಎಂದರು. ಸ್ಥಳೀಯ ಸುರ್ಸಿಂಗಾರದ ಭೋಜಣ್ಣ ಬೀಳಗಿ ಅಧ್ಯಕ್ಷತೆ ವಹಿಸಿದ್ದರು. ಅಲ್-ಅಮೀನ್ ವೈದ್ಯಕೀಯ ಕಾಲೇಜಿನ ಡೀನ್ ಡಾ.ಬಿ.ಎಸ್.ಪಾಟೀಲ ಮುಖ್ಯ ಅತಿಥಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.