ಮಂಗಳವಾರ, ಜೂನ್ 15, 2021
21 °C

ಪಂ. ಪುಟ್ಟರಾಜರ ಹೆಸರಿನಲ್ಲಿ ಐವರಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಪುಟ್ಟರಾಜ ಕವಿ ಗವಾಯಿ ಗಳವರ ಜಯಂತ್ಯುತ್ಸವದ ಅಂಗವಾಗಿ ಪುಟ್ಟರಾಜರ ಹೆಸರಿನಲ್ಲಿಯೇ ನೀಡ ಲಾಗುವ ಗಾನಶ್ರೀ, ವಾದ್ಯಶ್ರೀ, ಕೀರ್ತನಶ್ರೀ, ನಾಟ್ಯಶ್ರೀ ಹಾಗೂ ಸಾಹಿತ್ಯಶ್ರೀ ಪ್ರಶಸ್ತಿಗೆ ಐದು ಜನ ಸಾಧಕರನ್ನು ಆಯ್ಕೆಮಾಡಲಾಗಿದೆ.ಪ್ರಶಸ್ತಿಗೆ ಕಲಾವಿದ ಪ್ರೊ. ಎಂ. ವೆಂಕಟೇಶಕುಮಾರ, ವಾದಕ ಬಾಪು ಪದ್ಮನಾಭ. ಕೀರ್ತನಕಾರ ಬಸವಯ್ಯ ಶಾಸ್ತ್ರಿ  ಹಿರೇಮಠ, ರಂಗ ಕರ್ಮಿ ವಿರೂ ಪಾಕ್ಷಯ್ಯ ಬೆನಹಾಳ ಹಾಗೂ ಉಪನ್ಯಾಸಕ ಪ್ರೊ. ಡಾ. ಶರಣ ಬಸವ ವೆಂಕಟಾಪುರ ಆಯ್ಕೆಯಾಗಿದ್ದಾರೆ.ತಾಲ್ಲೂಕಿನ ದೇವಗಿರಿಯ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿ ಗಳವರ ಸಂಗೀತ ಪಾಠಶಾಲೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರ ಹಾಗೂ ಗದುಗಿನ ಗಾನ ಗಂಧರ್ವ ಕಲಾ ಟ್ರಸ್ಟ್ ಆಶ್ರಯದಲ್ಲಿ ಮಾ. 3ರಂದು ಪುಟ್ಟರಾಜ ಕವಿ ಗವಾಯಿಗಳವರ ಹುಟ್ಟುರಾದ ದೇವಗಿರಿಯಲ್ಲಿ ನಡೆಯ ಲಿರುವ ಸಮಾರಂಭದಲ್ಲಿ ಸಾಧಕರಿಗೆ ಈ ಪ್ರಶಸ್ತಿಗಳ ಪ್ರದಾನ ಮಾಡಲಾಗು ತ್ತಿದ್ದು, ಪ್ರತಿ ಪ್ರಶಸ್ತಿಯೂ 5 ಸಾವಿರ ರೂ. ನಗದು ಹಾಗೂ ನೆನೆಪಿನ ಫಲಕಗಳನ್ನು ಒಳಗೊಂಡಿದೆ.ಪ್ರಶಸ್ತಿ ಪುರಸ್ಕೃತರು: `ಗಾನಶ್ರೀ~ ಪ್ರಶಸ್ತಿಗೆ ಬಳ್ಳಾರಿ ಜಿಲ್ಲೆಯ ಲಕ್ಷ್ಮಿ ಪುರದಕ ಲಾವಿದ ಪ್ರೊ.ಎಂ ವೆಂಕಟೇಶ ಕುಮಾರ ಅವರನ್ನು ಆಯ್ಕೆ ಮಾಡಲಾಗಿದೆ. ವೆಂಕಟೇಶ ಕುಮಾರ ಅವರು ಧಾರವಾಡದ ಸಂಗೀತ ಮಹಾ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಆಕಾಶವಾಣಿಯ `ಎ~ ಗ್ರೇಡ್ ಕಲಾವಿದರಾಗಿದ್ದಾರೆ.`ವಾದ್ಯಶ್ರೀ~ ಪ್ರಶಸ್ತಿಗೆ ಖ್ಯಾತ ಬಾನ್ಸುರಿ ವಾದಕ ಬಾಪು ಪದ್ಮನಾಭ ಅವರು ಆಯ್ಕೆಯಾಗಿದ್ದು, ಮೂಲತಃ ಎಂಜಿನಿಯರಿಂಗ್ ಪದವಿಧರರಾದ ಬಾಪು ಅವರು ಗುರು ಚೌರಾಸಿಯಾರ ಅವರಲ್ಲಿ ಸಂಗೀತ ಶಿಕ್ಷಣ ಪಡೆದು ಆಧ್ಯಾತ್ಮಿಕತೆಗೆ ಸಂಬಂಧಿಸಿದ ಅಂತರ ರಾಷ್ಟ್ರೀಯ ಮಟ್ಟದ ಧ್ವನಿ ಮುದ್ರಿಕೆ ಗಳನ್ನು ಹೊರ ತಂದಿದ್ದಾರೆ.`ಕೀರ್ತನಶ್ರೀ~ ಪ್ರಶಸ್ತಿಯನ್ನು ಹಾವೇರಿ ಜಿಲ್ಲೆಯ ಬಸವನಕಟ್ಟಿ ಗ್ರಾಮದ ಬಸವಣ್ಣೆಯ್ಯಶಾಸ್ತ್ರಿ ಹಿರೇ ಮಠ ಅವರಿಗೆ ನೀಡಲಾಗಿದೆ. ಪುಟ್ಟ ರಾಜ ಕವಿ ಗವಾಯಿಗಳ ನೆಚ್ಚಿನ ಶಿಷ್ಯರ ್ಲಲೊಬ್ಬರಾದ ಬಸವಣ್ಣೆಯ್ಯ ಶಾಸ್ತ್ರೀ ಗಳು ನಾಟಕ ಅಭಿನಯದಲ್ಲಿ ಪರಿಣಿತಿ ಪಡೆದವರು. ರಾಜ್ಯದ ನಾನಾ ಭಾಗ ಗಳಲಿ ್ಲಕೀರ್ತನ ಪುರಾಣ ಪಠಿಸಿದ ಇವರಿಗೆ ಈವರೆಗೂ ಹಲವಾರು ಬಿರುದುಗಳು ಲಭಿಸಿವೆ.

 

`ನಾಟ್ಯಶ್ರೀ~ ಪ್ರಶಸ್ತಿಗೆ ಖ್ಯಾತ ರಂಗಕರ್ಮಿ ವಿರೂ ಪಾಕ್ಷಯ್ಯ ಬೆನಹಾಳ ಅವರನ್ನು ಆಯ್ಕೆ ಮಾಡಲಾಗಿದೆ. ವಿರೂಪಾಕ್ಷಯ್ಯ ಅವರು ವಿರೇಶ್ವರ ಪುಣ್ಯಾಶ್ರಮದ ನಾಟಕ ಕಂಪೆನಿಯಲ್ಲಿ ಸುಮಾರು 50 ವರ್ಷಗಳ ಕಾಲ ಸೇವೆ ಸಲ್ಲಿಸಿ ದ್ದಾರೆ. `ಸಾಹಿತ್ಯಶ್ರೀ~ ಪ್ರಶಸ್ತಿಗೆ ಗದಗ ತಾಲ್ಲೂಕು ಹೊಸಳ್ಳಿ ಗ್ರಾಮದ ಡಾ. ಎಸ್.ಎಚ್. ವೆಂಕಟಾಪುರ  ಆಯ್ಕೆ ಯಾಗಿದಾರೆ. ವೆಂಕಟಾ ಪುರ ಅವರು `ಡಾ.ಪಂಡಿತ ಪುಟ್ಟರಾಜ ಗವಾಯಿ ಗಳು~ ಎಂಬ ಜೀವನ ಸಾಹಿತ್ಯ ಸಂಶೋ ಧನಾ ಮಹಾ ಪ್ರಭಂದಕ್ಕೆ ಡಾಕ್ಟರೆಟ್ ಪದವಿ ಪಡೆದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.