`ಒಂದ್  ಪುಳಿಮುಂಚಿ', `ಒಂದ್ ನೀರ್ದೋಸೆ', `ಒಂದ್ ಕಾಣೆ', `ಮರ್ವಾಯಿ', `ಒಂದು ಫಿಶ್ಕರಿ ರೈಸೂ...' ಅಂತ ಒಬ್ಬೊಬ್ಬ `ಮಾಣಿ'ಗಳೂ ಒಂದೊಂದು ಧಾಟಿಯಲ್ಲಿ ಕೂಗಿ ಹೇಳುವ ಭರ ಎಷ್ಟಿತ್ತೆಂದರೆ ಹನುಮಂತನಗರದ ಮಾರುತಿ ವೃತ್ತದ ಬಳಿ ಬಸ್ಗೆ ಕಾದು ನಿಂತವರ ಕಿವಿಗೂ ಸ್ಪಷ್ಟ ಕೇಳಿಸಬೇಕು.

`ನ್ಯೂ ತ್ರಿಲೋಕ್ ಫ್ಯಾಮಿಲಿ ರೆಸ್ಟೋರೆಂಟ್'ನ ಅಡುಗೆ ಮನೆಯಲ್ಲಿ ಏನೇನು ಬೇಯುತ್ತಿದೆ ಎಂದು ಊಹಿಸಲು ಸರ್ವರ್ಗಳ ಈ ಕೂಗೇ ಬೇಕಾಗಿಲ್ಲ. ಹೋಟೆಲ್ನಿಂದ ಐವತ್ತು ಅಡಿ ದೂರದಲ್ಲಿ ನಿಂತವರ ಮೂಗನ್ನೂ ಅರಳಿಸಬಲ್ಲ ಬಗೆಬಗೆಯ ಸುವಾಸನೆಯೇ ಸಾಕು. ಥೇಟ್ ಕರಾವಳಿ ಸೊಗಡಿನ ಸುವಾಸನೆ!

`ನ್ಯೂ ತ್ರಿಲೋಕ್' ದಶಕದಿಂದಲೂ ತನ್ನ ಹಳೆಯ ಗ್ರಾಹಕರನ್ನು ಯಥಾವತ್ ಹಿಡಿದಿಟ್ಟಿರುವ ಗುಟ್ಟೂ ಈ ಕರಾವಳಿ ಸೊಗಡಿನಲ್ಲೇ ಅಡಗಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಮಂಗಳೂರು, ಉಡುಪಿ, ಕುಂದಾಪುರ, ಕಾರವಾರದ ಜನ ನಮ್ಮ ಹೋಟೆಲ್ ಹುಡುಕಿಕೊಂಡು ಬರುತ್ತಾರೆ. ಕುಳಿತುಕೊಳ್ಳಲು ಜಾಗ ಸಾಕಾಗದೆ ರಸ್ತೆಯಲ್ಲೆಲ್ಲ ಜನ ನಿಲ್ಲುತ್ತಿದ್ದರು. ಅದಕ್ಕೆ ಆರು ತಿಂಗಳ ಹಿಂದೆ ಮರು ವಿನ್ಯಾಸ ಮಾಡಲೆಂದು ಮುಚ್ಚಿದ್ದೆವು. ಈಗ ಮತ್ತೆ ಓಪನ್ ಮಾಡಿದ್ದೇವೆ.

ತ್ರಿಲೋಕ್ ಎಂಬ ಹೆಸರನ್ನು `ನ್ಯೂ ತ್ರಿಲೋಕ್' ಎಂದು ಬದಲಾಯಿಸಿದೆವು. ಬೆಂಗ್ಳೂರಲ್ ಎಂತ ಸಿಗ್ತದೆ? ಎಂತ ಮಾಡಿದ್ರೂ ಅದ್ಕೆ ಅಷ್ಟು ಎಣ್ಣಿ ಸುರ್ದು ಟೇಸ್ಟ್ ಹಾಳ್ಮಾಡ್ ಹಾಕ್ತಾರೆ ಮಾರ್ರೆ. ನಮ್ದು ಹಾಗಲ್ಲ. ಎಲ್ಲಾ ಊರ್ನೋರೇ ಬರೋದಲ್ದಾ? ತೆಂಗಿನೆಣ್ಣಿ ಎಷ್ಟು ಬೇಕಾ ಅಷ್ಟೇ ಹಾಕ್ತೇವೆ. ತಿಂಬಕ್ಕೂ ಲಾಯಕ್ ಹೊಟ್ಟಿಗೂ ಲಾಯಕ್ ಎಂದು ಕುಂದಾಪುರ ಮತ್ತು ಮಂಗಳೂರು ಕನ್ನಡ ಬೆರೆಸಿ ತಮ್ಮ ಹೋಟೆಲ್ನ ವೈಶಿಷ್ಟ್ಯವನ್ನು ಸರಳ ಮಾತಲ್ಲಿ ಕಟ್ಟಿಕೊಟ್ಟರು ಮಾಲೀಕ ನಾಗೇಂದ್ರ ಶೆಟ್ರು.

ಈಗ ಎರಡು ಮಹಡಿಗೆ ವಿಸ್ತರಣೆಗೊಂಡಿರುವ `ನ್ಯೂ ತ್ರಿಲೋಕ್'ನ ಪ್ರತಿ ಗ್ರಾಹಕನೂ ಮುಂದಿಟ್ಟುಕೊಂಡು ಕುಳಿತಿದ್ದ ಐಟಂಗಳ ಮೇಲೆ ಕಣ್ಣು ಹಾಯಿಸಿದರೆ ಶೆಟ್ರ ಮಾತಿನಲ್ಲಿ ಸುಳ್ಳಿಲ್ಲ ಎಂಬುದು ಖಾತರಿಯಾಯಿತು. ಮಂಗಳವಾರ ಮಧ್ಯಾಹ್ನ ಅಲ್ಲಿ ಹಾಗೆ ಊಟ ಮಾಡುತ್ತಿದ್ದವರನ್ನು, `ಊಟ ಹ್ಯಾಂಗಿತ್? ಉಪ್ಪು ಹುಳಿ ಖಾರ ಎಲ್ಲಾ ಸಮ ಇತ್ತಾ? ಎಂತಾದ್ರೂ ಹೆಚ್ಚು ಕಮ್ಮಿ ಮಾಡುದಾ?' ಎಂದು ಅಕ್ಕರೆಯಿಂದ ವಿಚಾರಿಸಿದ ಶೆಟ್ರಿಗೆ, `ಮೀನು ಸಾರಿಗೆ ಉಪ್ಪು ಸ್ವಲ್ಪ ಜಾಸ್ತಿ ಆಯ್ತು ಮಾರಾಯ್ರೆ ಕಮ್ಮಿ ಆಗಿದ್ರೆ ಚಂದ ಆಗ್ತಿತ್ತು' ಎಂದು ಸಲಹೆ ನೀಡುವುದೂ ಕಂಡುಬಂತು.

ಭಯಂಕರ ರುಚಿ ಮಾರಾಯ್ರೆ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಾಂಸಾಹಾರಗಳಿಗೆ ಬಳಸುವ ಮಸಾಲೆಗಳು ಮುತ್ತಜ್ಜಿ ಕಾಲದಿಂದಲೂ ಬದಲಾಗಿಲ್ಲ. ನಾಟಿ ಕೋಳಿಗೇ ಬೇರೆ. ಹೈಬ್ರಿಡ್ ಕೋಳಿಗೇ ಬೇರೆ. ಬೂತಾಯಿ/ಬಂಗುಡೆಗೆ ತೆಗೆಯುವ ಮಸಾಲೆಯೂ ವಿಭಿನ್ನ. ಮಾಂಜಿ ಮೀನು ಸಾರಿಗಿಂತ ಫ್ರೈಗೇ ಸೂಕ್ತ. ಅಂಜಲ್ಗೆ ಉಪ್ಪು ಮತ್ತು ಹುಳಿ ಖಡಕ್ ಹಾಕಿ ಖಾರ ಸ್ವಲ್ಪ ಕಡಿಮೆ ಮಾಡಿದ್ರೆ ರೋಗಿಗಳೂ ಹೊಟ್ಟೆ ತುಂಬಾ ಊಟ ಮಾಡಿಯಾರು. ಹೀಗೆ, ಒಂದೊಂದು `ಪದಾರ್ಥ' (ಸಾರು/ಸಾಂಬಾರು)ಗಳಿಗೆ ಒಂದೊಂದು ನಿಯಮ.

ಅಲ್ಲಿಂದ ಬೆಂಗಳೂರಿಗೆ ಬಂದು ಹೋಟೆಲ್ ನಡೆಸುವ ಕೆಲವರು ಇಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವುದೂ ಇಂತಹ ಪರಂಪರಾಗತ ಮಸಾಲೆಗಳ ಬಳಕೆಯಿಂದಲೇ.`ನ್ಯೂ ತ್ರಿಲೋಕ್'ನಲ್ಲಿ ಮಾಂಜಿ ಫ್ರೈ, ಬಂಗುಡೆ ಫ್ರೈ, ಕೋಳಿ ಸುಕ್ಕದ ಸವಿ ನೋಡುತ್ತಿದ್ದರೆ ಅಜ್ಜಿ ಮತ್ತು ಅಮ್ಮ ನೆನಪಾದುದು ಸಹಜವೇ.

ಆರ್ಡರ್ ಮಾಡಿ ಐದೇ ನಿಮಿಷದಲ್ಲಿ ಸರ್ವರ್ ಶಿವರಾಮ ತಂದಿಡುತ್ತಿದ್ದ ಚಿಕನ್ ಕರಿ, ಮರ್ವಾಯಿ ಪುಳಿಮುಂಚಿ, ಕಾಣೆ/ಮಾಂಜಿ/ಅಂಜಲ್/ಬಂಗುಡೆ ಫ್ರೈ, ಚಿಕನ್ ಸುಕ್ಕದ ಮೂಳೆಗಳನ್ನೂ ಬಿಡದೆ ಸವಿ ಎಳೆಯುತ್ತಿದ್ದ ಕಿಶೋರ್, ಭಯಂಕರ ರುಚಿ ಮಾರಾಯ್ರೆ! ಆದ್ರೆ ಮರ್ವಾಯಿ ಸ್ವಲ್ಪ ಕಾರ ಆಯ್ತು' ಅಂದ್ರು.

`ನಮ್ಮಲ್ಲಿಗೆ ಮೀನು ಪದಾರ್ಥ, ಫ್ರೈ ತಿನ್ನಲೆಂದೇ ಬರುವವರಿದ್ದಾರೆ. ಯಾಕೆಂದರೆ ನಾವು ಕುಂದಾಪುರದಿಂದಲೇ ತರಿಸ್ತೇವೆ. ಐಸ್ನಲ್ಲಿಟ್ಟದ್ದು, ತಿಂಗಳ ಹಿಂದಿನದು ಅಲ್ಲ. ಹಿಂದಿನ ಸಂಜೆ ಹಿಡಿದ ಮೀನುಗಳನ್ನು ಮರುದಿನ ಅಲ್ಲಿಂದ ಬಸ್ನಲ್ಲಿ ತರಿಸಿಕೊಳ್ಳುತ್ತೇವೆ. ಅಷ್ಟು ತಾಜಾ ಸಿಗ್ತದೆ ಅಂತಾನೇ ಇಲ್ಲಿಗೆ ಬೆಂಗಳೂರಿನ ಎಲ್ಲೆಲ್ಲಿಂದಲೋ ಜನ ಬರ್ತಾರೆ. ಕುಂದಾಪುರದವರೇ ಅಡುಗೆಗೂ ಇರೋದು.

ಹಾಗಾಗಿ ಕೋಳಿ ಸುಕ್ಕ ಅಂದ್ರೆ ಊರಲ್ಲಿ ಅಮ್ಮನೋ ಅತ್ತೆನೋ ಮಾಡಿದ ಹಾಗೆ ಇರ್ತದೆ' ಎಂದು ವಿವರಿಸುತ್ತಾರೆ ನಾಗೇಂದ್ರ ಶೆಟ್ಟಿ.
`ಚಿಕನ್, ಮಟನ್, ಫಿಶ್ಗೆ ಊರಿನ ಹಾಗೇ ಪ್ರತಿಯೊಂದು ಸಂಬಾರ ಪದಾರ್ಥವನ್ನೂ ಬಾಣಲೆಗೆ ಎಣ್ಣೆ ಹನಿಸಿ ಹುರಿದುಕೊಂಡೇ ರುಬ್ಬೋದು. ಸುಕ್ಕಕ್ಕೆ ಹೀಗೆ ಹುರಿದು ರುಬ್ಬಿದ ಮಸಾಲೆಯನ್ನು ಮತ್ತೊಮ್ಮೆ ಒಗ್ಗರಣೆಯಲ್ಲೂ ಹುರಿದುಕೊಳ್ಳುತ್ತೇವೆ. ಆಗಲೇ ಒರಿಜಿನಲ್ ಟೇಸ್ಟ್ ಬರೋದು' ಅಂತ ನಕ್ಕರು ಅವರು.

ಥೇಟ್ ಕರಾವಳಿಯ ಮಾಂಸಾಹಾರ ಸವಿಯುವ ಆಸೆಯಿದ್ದರೆ `ನ್ಯೂ ತ್ರಿಲೋಕ್' ಉತ್ತಮ ಆಯ್ಕೆ. ಕೈಗಟಕುವ ದರದಲ್ಲಿ ಅಸಲಿ ರುಚಿಯನ್ನು ಸವಿಯಬಹುದು. ಅಂದಂದಿನ ವಿಶೇಷ ಮೆನು ತಿಳಿಯಲು ಕರೆಮಾಡಿ: 94485 22042.
-ರೋಹಿಣಿ ಮುಂಡಾಜೆ
ಚಿತ್ರಗಳು: ಕಿಶೋರ್ ಬೋಳಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.