ಬುಧವಾರ, ಮಾರ್ಚ್ 3, 2021
23 °C

ಪಕ್ಷನಿಷ್ಠೆ ಕಲಿಸಿದ ಶಂಕರಮೂರ್ತಿ: ದತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಕ್ಷನಿಷ್ಠೆ ಕಲಿಸಿದ ಶಂಕರಮೂರ್ತಿ: ದತ್ತ

ಬೆಂಗಳೂರು: ‘ಡಿ.ಎಚ್.ಶಂಕರಮೂರ್ತಿ ಅವರಿಂದ ಪಕ್ಷನಿಷ್ಠಯನ್ನು ಕಲಿತಿದ್ದೇನೆ’ ಎಂದು ಶಾಸಕ ವೈ.ಎಸ್‌.ವಿ.ದತ್ತ ಹೇಳಿದರು.

ಸಮಾಜದ ಮುತ್ತು ಮಾಸ ಪತ್ರಿಕೆಯು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಡಿ.ವಿ.ಗೋವಿಂದರಾಜಲು ಅವರ ‘ವೇದಮಾತೆ ಗಾಯತ್ರಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಡಿ.ಎಚ್.ಶಂಕರಮೂರ್ತಿ ಅವರು ತಪಕ್ಷಾಂತರ ಮಾಡದೆ ಪಕ್ಷ ನಿಷ್ಠೆ­ಯನ್ನು ಕಾಪಾಡಿಕೊಂಡು ಬಂದಿದ್ದಾರೆ. ನಮ್ಮ ಪಕ್ಷಗಳು ಬೇರೆ ಬೇರೆಯಾ­ಗಿದ್ದರೂ ಅವರಿಂದ ನಿಷ್ಠೆಯನ್ನು ಕಲಿತಿದ್ದೇನೆ ಎಂದು ಹೇಳಿದರು.ವಿಧಾನಪರಿಷತ್‌ ಸಭಾಪತಿ ಡಿ.ಎಚ್.­­ಶಂಕರಮೂರ್ತಿ ಮಾತನಾಡಿ, ಗೋವಿಂದರಾಜಲು ಅವರು ತಮ್ಮ ಇಳಿ ವಯಸ್ಸಿನಲ್ಲಿಯೂ ಪುಸ್ತಕ ಬರೆದು ಬಿಡುಗಡೆ  ಮಾಡುತ್ತಿದ್ದಾರೆ. ಅದು ಅವರ ಕ್ರಿಯಾಶೀಲತೆಗೆ ಸಾಕ್ಷಿ ಎಂದು ಶ್ಲಾಘಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.