ಶಿವಮೊಗ್ಗ: `ಪಠ್ಯಪುಸ್ತಕಗಳಲ್ಲಿ ಕೇಸರೀಕರಣ ಮುಂದುವರಿಸಿ; ಹಾಗೆಯೇ, ಶಾಲೆಗಳಲ್ಲಿ ಹಸಿರೀಕರಣವನ್ನೂ ನಡೆಸಿ~ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸಲಹೆ ನೀಡಿದರು.

ನಗರದಲ್ಲಿ ಭಾನುವಾರ ನಗರಸಭೆ ಹಮ್ಮಿಕೊಂಡಿದ್ದ `ಶಿವಮೊಗ್ಗ ನಗರ ಹಸಿರೀಕರಣ ಆಂದೋಲನ~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

`ಪಠ್ಯಪುಸ್ತಕಗಳಲ್ಲಿ ಧರ್ಮ, ಸಂಸ್ಕೃತಿ ಹೆಸರಿನಲ್ಲಿ ಕೇಸರೀಕರಣ ಮಾಡಿದ್ದಾರೆಂಬ ಆಪಾದನೆ ಕಾಗೇರಿ ಅವರ ಮೇಲಿತ್ತು. ಈಗ ಅವರು ಶಾಲೆಗಳ ಪರಿಸರವನ್ನು ಹಸಿರೀಕರಣಗೊಳಿಸುವ ಸಂಕಲ್ಪ ತೊಟ್ಟಿದ್ದಾರೆ. ಧರ್ಮ, ಸಂಸ್ಕೃತಿ ರಕ್ಷಣೆ ಕೆಲಸ ಬಹಳ ಮಹತ್ವದ್ದ. ಯಾರು ಏನೇ ಆಪಾದನೆ ಮಾಡಿದರೂ ಅವರು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ~ ಎಂದರು.

`ಗಿಡ ನೆಡುವುದನ್ನೂ ಕೆಲವರು ಕೇಸರೀಕರಣ ಎನ್ನಬಹುದು. ಗಿಡ-ಮರಗಳನ್ನೂ ದೇವರೆಂದು ಪೂಜಿಸಲಾಗುತ್ತದೆ~ ಎಂದು ಈಶ್ವರಪ್ಪ ನುಡಿದರು.

ಶಾಲಾವನ ನಿರ್ಮಾಣ: ಇದಕ್ಕೂ ಮುನ್ನ ಶಾಲಾವೃಕ್ಷ ಯೋಜನೆ ಉದ್ಘಾಟನೆ ಮಾತನಾಡಿದ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, `ರಾಜ್ಯದ ಎಲ್ಲ 70 ಸಾವಿರ ಶಾಲೆಗಳಲ್ಲಿ ಶಾಲಾವನ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ ಎಂದರು. ಶಾಲೆಯ ಶೈಕ್ಷಣಿಕ ಪ್ರಗತಿಗೆ ಶಾಲೆಯ ಪರಿಸರವೂ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಹಸಿರೀಕರಣ ಮಾಡುವುದು ಅಗತ್ಯ. ಇದಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.