ಸೋಮವಾರ, ಏಪ್ರಿಲ್ 12, 2021
29 °C

ಪಣಂಬೂರು ಕಡಲತೀರ ಇನ್ನು ಡಾಲ್ಫಿನ್ ಸಫಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಪಶ್ಚಿಮ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಪಣಂಬೂರು ಬೀಚ್ ಸಂಸ್ಥೆ ‘ಡಾಲ್ಫಿನ್ ಸಫಾರಿ’ ಆರಂಭಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಲು ಮುಂದಾಗಿದೆ.

ಸಮುದ್ರ ತೀರದಿಂದ 100 ಕಿ.ಮೀ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಡಾಲ್ಫಿನ್‌ಗಳನ್ನು ಪ್ರವಾಸಿಗರಿಗೆ ತೋರಿಸುವ ನಿಟ್ಟಿನಲ್ಲಿ ಡಾಲ್ಫಿನ್ ಸಫಾರಿ ಆರಂಭಿಸಲಾಗಿದ್ದು, ದೋಣಿಯಲ್ಲಿ ತೆರಳಿ ಡಾಲ್ಫಿನ್ ವೀಕ್ಷಿಸಲು ಒಬ್ಬರಿಗೆ ರೂ. 3ಸಾವಿರ ಶುಲ್ಕ ನಿಗದಿಗೊಳಿಸಿದೆ.ಸಂಸ್ಥೆಯ ನೂತನ ಯೋಜನೆ ಹಿನ್ನೆಲೆಯಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳನ್ನು ಸ್ಥಳಕ್ಕೆ ಕರೆದೊಯ್ದಿದ್ದ ಪಣಂಬೂರು ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆಯ ಸಿಇಒ ಯತೀಶ್ ಬೈಕಂಪಾಡಿ, ಸಫಾರಿಗೆ ತೆರಳಿದಾಗ ಡಾಲ್ಫಿನ್ ಕಂಡು ಬರದಿದ್ದಲ್ಲಿ ಶೇ. 50ರಷ್ಟು ಹಣ ವಾಪಸ್ ಮಾಡಲಾಗುವುದು ಎಂದರು.ಪಣಂಬೂರು ಬೀಚ್‌ನಿಂದ ಮುಂಜಾನೆ 7ಕ್ಕೆ ತಣ್ಣೀರುಬಾವಿಯತ್ತಹೊರಟ ದೋಣಿಯಲ್ಲಿ ಪ್ರಯಾಣ ಮಾಡಿದ ಮಾಧ್ಯಮ ಪ್ರತಿನಿಧಿಗಳಿಗೆ 20 ನಿಮಿಷ ನಂತರ ಮೊದಲ ಡಾಲ್ಫಿನ್ ಕಂಡು ಬಂದಿತು. ವಾಪಸಾಗುವಾಗ ನವ ಮಂಗಳೂರು ಬಂದರಿನ ಬಳಿ ಆಗ ತಾನೆ ಕಂಟೈನರ್ ಹೊತ್ತ ಬೃಹತ್ ವ್ಯಾಪಾರಿ ಹಡಗು ಹೊರಟಿತ್ತು. ಹಡಗಿನಿಂದ ಆಹಾರ ಪದಾರ್ಥ ಹೊರಗೆ ಎಸೆಯಬಹುದೆಂಬ ಧಾವಂತದಲ್ಲಿ ಡಾಲ್ಫಿನ್‌ಗಳ ದೊಡ್ಡ ಗುಂಪು ಅದರ ಹಿಂದೆ ತೆರಳುತ್ತಿರುವುದು ಕಂಡು ಬಂದಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.