ಮಂಗಳವಾರ, ಜೂನ್ 22, 2021
22 °C

ಪತ್ನಿಗೆ ರೂ 10 ಲಕ್ಷ ಸಾಲ ನೀಡಿದ ಅನಂತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ­ಕುಮಾರ್‌ ಅವರು ತಮ್ಮ ಪತ್ನಿ ತೇಜಸ್ವಿನಿ ಅವರಿಗೆ ₨ 10 ಲಕ್ಷ ಸಾಲ ನೀಡಿದ್ದಾರೆ. ಬುಧವಾರ ನಾಮಪತ್ರ ಜತೆ ಸಲ್ಲಿಸಿರುವ ಆಸ್ತಿ ಪ್ರಮಾಣಪತ್ರದಲ್ಲಿ ಈ ವಿವರ ನೀಡಿದ್ದಾರೆ.ಆದರೆ, ಒಟ್ಟಾರೆ ಆಸ್ತಿಯಲ್ಲಿ ಅನಂತಕುಮಾರ್‌ ಅವರಿಗಿಂತ ಪತ್ನಿ ತೇಜಸ್ವಿನಿ ಅವರೇ ಶ್ರೀಮಂತರಾಗಿದ್ದಾರೆ. ಅನಂತಕುಮಾರ್‌  ಸುಮಾರು ₨ 1.13 ಕೋಟಿ ಆಸ್ತಿಯ ಒಡೆಯರಾಗಿದ್ದರೆ ತೇಜಸ್ವಿನಿ ಅನಂತಕುಮಾರ್‌ ಅವರು ₨ 4.95 ಕೋಟಿ ಆಸ್ತಿ ಹೊಂದಿದ್ದಾರೆ.ಅನಂತಕುಮಾರ್‌ ಅವರು ₨75 ಸಾವಿರ ಮೌಲ್ಯದ ರೇವಾ ಎಲೆಕ್ಟ್ರಿಕ್‌ ಕಾರ್‌ ಮಾತ್ರ ಹೊಂದಿದ್ದರೆ, ತೇಜಸ್ವಿನಿ ಅವರು ಹುಂಡೈ, ಇನ್ನೋವಾ, ಟಾಟಾ ಮಾಂಝಾ ಕಾರುಗಳನ್ನು ಹೊಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.