ಧಾರವಾಡ: ಸುಮಾರು 169 ವರ್ಷಗಳ ಇತಿಹಾಸವಿರುವ ಕನ್ನಡ ಪತ್ರಿಕೋದ್ಯಮವು ಇದೀಗ ಅತಿರಂಜಿತ ವರದಿಗಳನ್ನು ಪ್ರಕಟಿಸುವ ಮೂಲಕ ಅಪಮೌಲ್ಯಕ್ಕೀಡಾಗುತ್ತಿದೆ ಎಂದು ಹಿರಿಯ ಪತ್ರಕರ್ತ ಪಿ.ರಾಮಯ್ಯ ವಿಷಾದಿಸಿದರು.

ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲ ಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ಡಿಜಿಟ ಲೀಕರಣಕ್ಕೆಂದು ಪಡೆದಿದ್ದ ಡಾ. ಪಾಟೀಲ ಪುಟ್ಟಪ್ಪ ಅವರ ಸಂಪಾದಕ ತ್ವದ ಪ್ರಪಂಚ ಪತ್ರಿಕೆಗಳ ಹಸ್ತಾಂತರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶುಕ್ರವಾರ ಮಾತನಾಡಿದ ಅವರು, ಪತ್ರಿಕಾ ಧರ್ಮದ ಚೌಕಟ್ಟಿನಲ್ಲಿ ಹೋಗಬೇಕಾಗಿದ್ದ ಈ ಸಂದರ್ಭದಲ್ಲಿ ಪತ್ರಿಕೋದ್ಯಮ ಅಪಮೌಲ್ಯಕ್ಕೀಡಾ ಗುತ್ತಿದೆ. ವೃತ್ತಿ ಪಾವಿತ್ರ್ಯವನ್ನು ಉಳಿಸ ಬೇಕಾದ ಜವಾಬ್ದಾರಿ ಯುವ ಪತ್ರ ಕರ್ತರ ಮೇಲಿದೆ. ಅತಿರಂಜಕತೆ ಮಾಡು ವ ಬದಲು ವಸ್ತುನಿಷ್ಠ ಸುದ್ದಿಯನ್ನು ಕೊಡುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.

ಪತ್ರಿಕೆಗಳನ್ನು ಸ್ವೀಕರಿಸಿ ಮಾತನಾಡಿದ ಪತ್ರಿಕೆಯ ಪ್ರಧಾನ ಸಂಪಾದಕ ಡಾ.ಪಾಟೀಲ ಪುಟ್ಟಪ್ಪ, ಅಮೆರಿಕ ದಿಂದ ಬಂದ ಬಳಿಕ ಫ್ರೀ ಪ್ರೆಸ್ ಜರ್ನಲ್ನಲ್ಲಿ ಕೆಲಸ ಮಾಡಿ ಹುಬ್ಬಳ್ಳಿಗೆ ಮರಳಿದೆ. ಕೈಯಲ್ಲಿ ಪತ್ರಿಕೆಆರಂಭಿಸುವಷ್ಟು ಹಣ ಇಲ್ಲದಿದ್ದರೂ ಹಿರಿಯ ಪತ್ರಕರ್ತ ಮೊಹರೆ ಹನುಮಂತರಾಯರ ಒತ್ತಾ ಸೆಗೆ ಮಣಿದು ಪ್ರಪಂಚ ಪತ್ರಿಕೆಯನ್ನು ಆರಂಭಿಸಿದೆ. ಕೇವಲ 20 ತಿಂಗಳಲ್ಲೇ ಅಂದು ಅತಿ ಹೆಚ್ಚು ಪ್ರಸಾರ ಹೊಂದಿದ `ಪ್ರಜಾಮತ~ವನ್ನೂ ಪ್ರಪಂಚ ಹಿಂದಿ ಕ್ಕಿತು ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ.ಎಚ್.ಬಿ.ವಾಲೀಕಾರ, ವಿಶ್ವವಿದ್ಯಾ ಲಯದಲ್ಲಿ ಸಂಶೋಧನೆ ಗಳಿಗೆ ಹಣದ ಕೊರತೆ ಇಲ್ಲ. ಸೂಕ್ತ ಯೋಜನೆಯನ್ನು ವಿ.ವಿ.ಗೆ ಸಲ್ಲಿಸಿದರೆ ಹಣ ಮಂಜೂರು ಮಾಡುತ್ತೇವೆ ಎಂದರು.
ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಎಂ.ಗಂಗಾಧರಪ್ಪ ಪ್ರಾಸ್ತಾವಿಕ ವಾಗಿ ಮಾತನಾಡಿದರು. ವಿಭಾಗ ಮುಖ್ಯಸ್ಥ ಡಾ.ಎ.ಎಸ್. ಬಾಲ ಸುಬ್ರಹ್ಮಣ್ಯ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.