ಪರಪ್ಪನ ಅಗ್ರಹಾರದಲ್ಲಿ ಜಯಲಲಿತಾ ವಿಚಾರಣೆ

7

ಪರಪ್ಪನ ಅಗ್ರಹಾರದಲ್ಲಿ ಜಯಲಲಿತಾ ವಿಚಾರಣೆ

Published:
Updated:

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆಗೆ ಗುರಿಯಾಗಿರುವ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಅರ್ಜಿಯ ವಿಚಾರಣೆಯು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಇರುವ ಕೋರ್ಟ್ ಸಭಾಂಗಣದಲ್ಲಿ ನಡೆಯಲಿದೆ.ಇದೇ 20ರಿಂದ ವಿಚಾರಣೆ ನಡೆಯಲಿದೆ. ಜಯಲಲಿತಾ ಖುದ್ದು ಹಾಜರು ಆಗುವಂತೆ ಕೋರ್ಟ್ ನಿರ್ದೇಶಿಸಿರುವ ಕಾರಣ ಅಂದು ಅವರು ಹಾಜರು ಇರಲಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಟಿಯಿಂದ ಪ್ರಕರಣದ ವಿಚಾರಣೆಯನ್ನು ಪರಪ್ಪನ ಅಗ್ರಹಾರದಲ್ಲಿ ಇರುವ ವಿಶೇಷ ಕೋರ್ಟ್‌ನಲ್ಲಿ ನಡೆಸಲಾಗುವುದು.ಇಲ್ಲಿಯವರೆಗೆ ನಗರ ಸಿವಿಲ್ ಕೋರ್ಟ್ ಆವರಣದಲ್ಲಿ ವಿಶೇಷ ಕೋರ್ಟ್ ಕಾರ್ಯ ನಿರ್ವಹಿಸುತ್ತಿತ್ತು. ಅಲ್ಲಿ ಭದ್ರತೆಗೆ ಕೊರತೆ ಇರುವ ಕಾರಣ ಕೋರ್ಟ್ ಅನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry