ಶುಕ್ರವಾರ, ಮೇ 14, 2021
25 °C

ಪರಿಶ್ರಮದಿಂದ ಯಶಸ್ಸು ಸುಲಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: `ವಿಸ್ತಾರವಾಗಿರುವ ಸ್ಪರ್ಧಾ ಜಗತ್ತಿನಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಹಿರಿದಾದ ಕನಸುಗಳನ್ನು ಹೆಣೆದುಕೊಂಡು ಆ ಉನ್ನತ ಗುರಿ ಸಾಧನೆಗೆ ಕಠಿಣ ಪರಿಶ್ರಮ ಪಡಬೇಕು. ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಲು ಪರಿಶ್ರಮಕ್ಕೆ ಪರ್ಯಾಯವೇ ಇಲ್ಲ~ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಪ್ರೊ.ಪಿ.ವಿ. ಶಿವಪುಲ್ಲಯ್ಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ಪಟ್ಟಣದ ಕೆಎಲ್‌ಇ ಸಂಸ್ಥೆಯ ಕೆ.ಎಲ್.ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಎರಡು ದಿನಗಳ ರಾಷ್ಟ್ರಮಟ್ಟದ ತಾಂತ್ರಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲಿ ಗೊಂದಲಗಳಿಗೆ ಈಡಾಗದೇ, ಭವಿಷ್ಯತ್ತಿನ ಕುರಿತು ಸ್ಪಷ್ಟ ನಿರ್ಧಾರ ಹೊಂದಿರಬೇಕು. ಆಯ್ದುಕೊಂಡ ಕ್ಷೇತ್ರದಲ್ಲಿ ವಿಶಿಷ್ಟವಾದ ಸಾಧನೆಯನ್ನು ಮಾಡಿ ತೋರಿಸಲು ಸತತ ಪರಿಶ್ರಮ ವಹಿಸಬೇಕು. ವಿಷಯವನ್ನು ಆಳವಾಗಿ ಅಧ್ಯಯನಗೈದು ನೂತನ ಅವಿಷ್ಕಾರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕೆ.ಎಲ್.ಇ ಸ್ವಾಯತ್ತ ವಿಶ್ವವಿದ್ಯಾಲಯದ ಕುಲಪತಿ ಡಾ. ಚಂದ್ರಕಾಂತ ಕೋಕಾಟೆ ಅವರು, ವಿದ್ಯಾರ್ಥಿಗಳು ಸವಾಲುಗಳನ್ನು ಸ್ವೀಕರಿಸಿದಾಗಲೇ ಸಾಮರ್ಥ್ಯ ವೃದ್ದಿಯಾಗುತ್ತದೆ. ಸೋಲುಗಳನ್ನು ನಿರಾಶಾಭಾವದಿಂದ ಕಾಣದೇ ಸೋಲನ್ನೇ ಸವಾಲಾಗಿ ಪರಿಗಣಿಸಿ ಗೆಲುವಿನತ್ತ ಚಿಂತನೆ ಹರಿಸಬೇಕು ಎಂದು ಹೇಳಿದರು.ಪ್ರಾಚಾರ್ಯ ಡಾ. ಬಸವರಾಜ ಕಟಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಾದ ಕೇಶವ ಮುತಾಲಿಕ, ಕೇಶವ, ದೀನಾನಾಥ ಕುಲಕರ್ಣಿ, ಪ್ರಕಾಶ ಬಂಧಾರೆ, ಶಾಂಭವಿ ಅನಿಸಿಕೆಗಳನ್ನು ಹಂಚಿಕೊಂಡರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.ಸಂಯೋಜಕರಾದ ಪ್ರೊ.ಬಿ.ಪಿ. ಹಲಗಲಿ, ಪ್ರೊ. ಪ್ರಭು ಚೌಧರಿ, ಪ್ರೊ.ವೀರಭದ್ರ, ಪ್ರೊ.ಪಿ.ಬಿ. ಮುತಾಲಿಕದೇಸಾಯಿ, ಪ್ರೊ.ದರ್ಶನ ಬಿಳ್ಳೂರ, ಪ್ರೊ. ಸುನೀಲ ಹೆಬ್ಬಾಳೆ, ಪ್ರೊ. ಎನ್.ಎಂ. ಗಿರೀಶ, ಪ್ರೊ. ಚಂದ್ರಶೇಖರ ಸುಳ್ಳದ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ದೀಪಾ ಕುರೇರ ಸ್ವಾಗತಿಸಿದರು. ವಿನಯಾ ಕುಡತರಕರ ಮತ್ತು ರಾಮಕೃಷ್ಣನ್ ನಿರೂಪಿಸಿದರು. ಸಂಯೋಜಕರಾದ ಎಚ್. ಮುರುಗೇಶ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.