ಹುಬ್ಬಳ್ಳಿ: ಪ್ರಸಕ್ತ ಸಾಲಿನ ಪ್ರಥಮ ಡಿಪ್ಲೊಮಾ ಪ್ರವೇಶ ಪ್ರಕ್ರಿಯೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದ್ದು ಇದೇ 5ರಂದು ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಿಸಲಾಗುತ್ತಿದೆ. ಕೌನ್ಸೆಲಿಂಗ್ ಜೂನ್ 12ರಿಂದ ಆರಂಭಗೊಳ್ಳಲಿದೆ.

ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿಗೆ ಸಂಬಂಧಿಸಿದಂತೆ ಪರಿಷ್ಕರಣೆ ತಿದ್ದುಪಡಿಗೆ ನಿಗದಿಪಡಿಸಿದ ಆನ್ಲೈನ್ ಅರ್ಜಿ ಸಲ್ಲಿಕೆ, ದಾಖಲಾತಿ ಪರಿಶೀಲನಾ ಕೇಂದ್ರಗಳಲ್ಲಿ ಖುದ್ದಾಗಿ ಮೂಲ ದಾಖಲಾತಿಗಳೊಂದಿಗೆ ಮನವಿ ಸಲ್ಲಿಸುವ ಅಂತಿಮ ದಿನಾಂಕ ಜೂನ್ 7. ಹಾಗೆಯೇ ಅಂತಿಮ ಮೆರಿಟ್ ಪಟ್ಟಿ ಜೂನ್ 10ರಂದು ಪ್ರಕಟಿಸಲಾಗುತ್ತದೆ. ಮೆರಿಟ್ ನಂ.11601ರಿಂದ ಕೊನೆಯ ಮೆರಿಟ್ ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯ ಜೂನ್ 20ರಂದು ಪ್ರಕಟವಾಗಲಿದೆ.

ಡಿಪ್ಲೊಮಾ ಸೀಟು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅರ್ಹ ಅಭ್ಯರ್ಥಿಗಳಿಗೆ ಅವರುಗಳ ಮೆರಿಟ್ ಮತ್ತು ಮೀಸಲಾತಿಗೆ ಅನುಗುಣವಾಗಿ ಸಂಬಂಧಪಟ್ಟ ಪಾಲಿಟೆಕ್ನಿಕ್ಗಳಲ್ಲಿ ಸೀಟುಗಳ ಲಭ್ಯತೆ ಇರುವ ಷರತ್ತಿಗೆ ಒಳಪಟ್ಟು ಹಂಚಿಕೆ ಮಾಡಲಾಗುತ್ತದೆ.

ಆನ್ಲೈನ್ ಸೀಟುಗಳಿಗೆ ಸಂಬಂಧಿಸಿದಂತೆ ಆನ್ಲೈನ್ ಇಂಟರಾಕ್ಟೀವ್ ಕೌನ್ಸೆಲಿಂಗ್ ದಿನಾಂಕ ಮತ್ತು ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಿಗದಿಪಡಿಸಿದ ಆನ್ಲೈನ್ ಇಂಟರಾಕ್ಟೀವ್ ಪ್ರವೇಶ ಘಟಕಗಳಿಂದ ಹಾಗೂ ತಾಂತ್ರಿಕ ಇಲಾಖೆ ವೆಬ್ಸೈಟ್ ಡಿಡಿಡಿ.ಠಿಛಿಚ್ಟ್ಞಠಿ.ಜ್ಞಿ, ಡಿಡಿಡಿ.ಜಿಟ್ಝಟಞಞಜಿಜಿಟ್ಞ.ಜ್ಞಿ - ಡಿಡಿಡಿ.ಠಿಛಿ.ಚ್ಟ.್ಞಜ್ಚಿ.ಜ್ಞಿ ಗಳಿಂದ ಮಾಹಿತಿ ಪಡೆದು ಖಚಿತಪಡಿಸಿಕೊಳ್ಳಬೇಕು. ಎಲ್ಲ ವಿಶೇಷ ಗುಂಪಿನಲ್ಲಿ ಬರುವ ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ಆಯಾ ದಿನಾಂಕಗಳಂದು ಕೌನ್ಸೆಲಿಂಗ್ಗೆ ಹಾಜರಾಗಬೇಕು.
ಸ್ಕೌಟ್ಸ್/ಗೈಡ್ಸ್, ಹೊರನಾಡ ಕನ್ನಡಿಗ ಅಭ್ಯರ್ಥಿಗಳ ಸೀಟು ಆಯ್ಕೆ ಪ್ರಕ್ರಿಯೆಯನ್ನು ಬೆಂಗಳೂರಿನ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ, ತಾಂತ್ರಿಕ ಭವನ, ಅರಮನೆ ರಸ್ತೆ ಇಲ್ಲಿ ಜೂನ್ 12 ರಂದು ಬೆಳಿಗ್ಗೆ 11 ಗಂಟೆಗೆ ನಡೆಸಲಾಗುತ್ತದೆ.

ಎನ್ಸಿಸಿ ಕೋಟಾದ ಪ್ರವೇಶ ಪ್ರಕ್ರಿಯೆ ಬೆಂಗಳೂರಿನ ಎಸ್ಜೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜೂನ್ 13ರಂದು, ಕ್ರೀಡಾ ಕೋಟಾದ ಪ್ರವೇಶ ಪ್ರಕ್ರಿಯೆಗಳನ್ನು ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜೂನ್ 13ರಂದು ಮತ್ತು ಜೆಒಸಿ/ಐಟಿಐ ಕೋಟಾದ ಪ್ರವೇಶ ಪ್ರಕ್ರಿಯೆಗಳನ್ನು ಬೆಂಗಳೂರಿನ ಸರ್ಕಾರಿ ಜೆಆರ್ ಐಸಿಪಿ ಪಾಲಿಟೆಕ್ನಿಕ್ನಲ್ಲಿ ಜೂನ್ 13ರಂದು ಬೆ.11 ಗಂಟೆಗೆ ನಡೆಸಲಾಗುತ್ತಿದೆ. ಜೂನ್ 17ರಿಂದ ಮೆರಿಟ್ ಕೋಟಾದ ಕೌನ್ಸೆಲಿಂಗ್ ಆರಂಭಗೊಳ್ಳಲಿದೆ ಎಂದು ಹುಬ್ಬಳ್ಳಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.