ಮಂಗಳವಾರ, ಮೇ 11, 2021
27 °C

ಪರಿಸರ ದಿನಕ್ಕೆ ಬ್ಯಾನರ್ ಪ್ರದರ್ಶನ

ಆರ್.ಕೆ. Updated:

ಅಕ್ಷರ ಗಾತ್ರ : | |

ಜಾಗತಿಕ ತಾಪಮಾನ ಹೆಚ್ಚಳದಿಂದ ಪರಿಸರದ ಮೇಲೆ ಅನೇಕ ದುಷ್ಪರಿಣಾಮ ಗಳಾಗುತ್ತಿವೆ. ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ನಾಶಪಡಿಸಲಾಗುತ್ತಿದೆ. ಇದರಿಂದಾಗಿ ಪರಿಸರ ಅಸಮತೋಲನಕ್ಕೆ ದಾರಿಯಾಗುತ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಪ್ರತಿ ವರ್ಷ ನಡೆಯುತ್ತಲೇ ಇದೆ.

 

ಆದರೂ ಜನರಲ್ಲಿ ಪರಿಸರ ಕಾಳಜಿ ಕಡಿಮೆಯಾಗುತ್ತಿದೆ. ಈ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಜೆಸಿಐ ಇಂಡಿಯಾ (ಜೂನಿಯರ್ ಛೇಂಬರ್ ಇಂಟರ್‌ನ್ಯಾಷನಲ್) 100 ಕಿ.ಮೀ. ಹತ್ತಿ ಬಟ್ಟೆಯ ಬ್ಯಾನರ್ ಪ್ರದರ್ಶನ ಮಾಡುವ ಉದ್ದೇಶ ಹೊಂದಿದೆ.  ಜೂನ್ 5ರ ವಿಶ್ವ ಪರಿಸರ ದಿನಾಚರಣೆಯಂದು ವಿಶ್ವದ ಅತ್ಯಂತ ಉದ್ದವಾದ ಬ್ಯಾನರ್ ಪ್ರದರ್ಶಿಸಿ ಗಿನ್ನೆಸ್ ದಾಖಲೆ ಮಾಡುವ ಉದ್ದೇಶ ಹೊಂದಿದೆ. ಪರಿಸರ ಸಂರಕ್ಷಣೆ ಕುರಿತು ವಿಶ್ವದ ಗಮನ ಸೆಳೆಯುವ ಹಾಗೂ ಜಾಗತಿಕ ಮಟ್ಟದಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶ ಸಂಸ್ಥೆಯದ್ದು.44 ಇಂಚು ಎತ್ತರ ಮತ್ತು ಕನಿಷ್ಠ 10 ಮೀಟರ್ ಅಗಲದ ಹತ್ತಿ ಬಟ್ಟೆಯ ಬ್ಯಾನರ್ ಮೇಲೆ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಸಂದೇಶ, ಘೋಷಣೆ, ಚಿತ್ರಗಳು ಹಾಗೂ ಪ್ರಮಾಣ ವಚನವನ್ನು ಬರೆದಿರಬೇಕು. ಭೂಮಿ, ನೀರು, ಗಾಳಿ, ಬೆಳಕು ಹಾಗೂ ಶಬ್ದ ಮಾಲಿನ್ಯ ತಡೆಗಟ್ಟುವ ಕುರಿತ ಕ್ರಿಯಾತ್ಮಕ ರಚನೆಗೂ ಅವಕಾಶವಿದೆ.    ಸಾರ್ವಜನಿಕರು, ಕಾರ್ಪೊರೇಟ್ ಕಂಪೆನಿಗಳು ಈ ಕಾರ್ಯದಲ್ಲಿ ಕೈಜೋಡಿಸಬಹುದು. ತಾವು ಬರೆದ ಅಥವಾ ಬರೆಸಿದ ಈ ಬ್ಯಾನರ್‌ಅನ್ನು ತಮ್ಮ ಮನೆಗಳ ಹಾಗೂ ನಗರಗಳಲ್ಲಿ ಪ್ರದರ್ಶಿಸಬಹುದು. ನಂತರ ಆ ಬ್ಯಾನರನ್ನು ಜೆಸಿಐ ಕಚೇರಿಗೆ ಕಳುಹಿಸಬೇಕು.   ಬ್ಯಾನರ್ ಕಳುಹಿಸುವವರು ಬ್ಯಾನರ್‌ನ ಕೆಳ ಭಾಗದಲ್ಲಿ ತಮ್ಮ ಸಂಸ್ಥೆ ಜಾಹೀರಾತು ಅಥವಾ ವಿವರಗಳನ್ನು ಬರೆಯಬಹುದು. ಪರಿಸರಕ್ಕೆ ಪೂರಕವಾದ ಭಾಷೆ, ಕಲಾಕೃತಿಗಳಿಗೂ ಅವಕಾಶ ಕಲ್ಪಿಸಲಾಗಿದೆ.

 

ಈ ರೀತಿ ಬರೆದು ಕಳುಹಿಸಿದ ಬ್ಯಾನರ್‌ಗಳನ್ನು ಜೂನ್1ರಂದು ನೈಸ್ ರಸ್ತೆಯ ಎರಡು ಬದಿಯಲ್ಲಿ ಪ್ರದರ್ಶಿಸಲಾಗುತ್ತದೆ. ನಂತರ ಆ ಬ್ಯಾನರ್‌ಗಳನ್ನು ಅನಾಥಾಶ್ರಮಗಳಿಗೆ ನೀಡಲಾಗುತ್ತದೆ ಎನ್ನುತ್ತಾರೆ ವಿಶ್ವ ಪರಿಸರ ಅಭಿಯಾನದ ಅಧ್ಯಕ್ಷ ಶಂಕರ್ ಬಿ. ಪಾಟೀಲ್.    ಬ್ಯಾನರ್‌ಗಳನ್ನು ಕಳುಹಿಸಿದವರಿಗೆ ಕೊನೆಗೆ ಅಭಿನಂದನಾ ಪತ್ರ ನೀಡಲಾಗುತ್ತದೆ. ಅತ್ಯಂತ ಉದ್ದ, ಆಕರ್ಷಕ ಬ್ಯಾನರ್‌ಗಳಿಗೂ ವಿಶೇಷ ಪುರಸ್ಕಾರವಿದೆ. ಬ್ಯಾನರ್ ಬರೆದು ಕಳುಹಿಸಲು ಆಗದವರು ಜೆಸಿಐನಿಂದಲೇ ರೆಡಿಮೆಡ್ ಬ್ಯಾನರ್‌ಅನ್ನು ಪಡೆದು ಕಳುಹಿಸಬಹುದು. ಏ.20ರ ಒಳಗೆ ಬ್ಯಾನರ್‌ಗಳನ್ನು ಕಳುಹಿಸಬೇಕು. `ಇರುವುದೊಂದೆ ಭೂಮಿ ಬನ್ನಿ ಸಂರಕ್ಷಿಸೋಣ...~ ಎಂಬ ಧ್ಯೇಯ ವಾಕ್ಯದೊಂದಿಗೆ ಅಭಿಯಾನ ಆರಂಭಿಸಿರುವ ಜೆಸಿಐ ಇಂಡಿಯಾದ ಈ ಕೈಂಕರ್ಯಕ್ಕೆ ಕೈ ಜೋಡಿಸಿ.

ಮಾಹಿತಿಗೆ 94486 14351, 23148816

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.