ಗುರುವಾರ , ಮೇ 6, 2021
27 °C

ಪರಿಸರ ನಾಶ ತಡೆಗೆ ಪ್ರಾಮಾಣಿಕ ಪ್ರಯತ್ನ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಗೇರಿ: `ಪರಿಸರ ನಾಶ ತಡೆಗೆ ಪ್ರಾಮಾಣಿಕ ಪ್ರಯತ್ನ ನಡೆಸದೇ ಇದ್ದರೆ ಅದರ ಪರಿಣಾಮವನ್ನು ಎಲ್ಲರೂ ಅನುಭವಿಸಬೇಕಾಗುತ್ತದೆ~ ಎಂದು ನಟ, ಪರಿಸರವಾದಿ ಸುರೇಶ್ ಹೆಬ್ಳೀಕರ್ ಎಚ್ಚರಿಕೆ ನೀಡಿದರು.ಕುಂಬಳಗೋಡಿನ ಡಾನ್‌ಬಾಸ್ಕೊ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಸ್ಮಯ್- 2012~ರ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ನಗರೀಕರಣದಿಂದಾಗಿ ಕೃಷಿ ಕ್ಷೇತ್ರ ಬಿಕ್ಕಟ್ಟಿಗೆ ಒಳಗಾಗಿದೆ. ಹಳ್ಳಿಗಳೆಲ್ಲ ಬರಿದಾಗುತ್ತಿವೆ. ಆಹಾರ ಧಾನ್ಯ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಆಹಾರ ಪದಾರ್ಥಗಳ ಕೊರತೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಅವುಗಳ ಬೆಲೆ ಗಗನಕ್ಕೆ ಏರುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಎಷ್ಟು ಹಣ ಕೊಟ್ಟರೂ ಆಹಾರ ಪದಾರ್ಥ ಸಿಗದೇ ಹೋಗುವ ಅಪಾಯವಿದೆ~ ಎಂದು ಅವರು ಹೇಳಿದರು.ಚಿತ್ರ ನಿರ್ಮಾಪಕ ಬಿ.ಕೆ.ಶ್ರೀನಿವಾಸ್, ಚಿತ್ರ ನಟ ದಿಗಂತ್, ಉದ್ಯಮಿ ದಿನೇಶ್, ಪ್ರಾಂಶುಪಾಲ ಡಾ.ಮುರಳೀಧರ್, ಉಪನ್ಯಾಸಕರಾದ ಜಿ.ವಿನಯ್‌ಕುಮಾರ್, ರುದ್ರೇಶ್, ಎಂ.ವಿನಯ್‌ಕುಮಾರ್, ಸಂಘಟನೆಯ ವಿದ್ಯಾರ್ಥಿಗಳಾದ ಅಕ್ಷಭ, ಅನುಶ್ರೀ ಇತರರು ಹಾಜರಿದ್ದರು. ಪರಿಸರ ಸಂರಕ್ಷಣೆಯ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಚಾಲನೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.