ಶನಿವಾರ, ಜೂನ್ 19, 2021
26 °C

ಪರೀಕ್ಷಾ ಶುಲ್ಕ ಹೆಚ್ಚಳಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಬೆಂಗಳೂರು ವಿಶ್ವ ವಿದ್ಯಾಲಯವು ಪದವಿ ಪರೀಕ್ಷೆಗಳ ಪರೀಕ್ಷಾ ಶುಲ್ಕ ಏರಿಕೆ ಮಾಡಿರು­ವು­ದನ್ನು ವಿರೋಧಿಸಿ ವಿದ್ಯಾರ್ಥಿಗಳು ಎಬಿ­ವಿಪಿ ನೇತೃತ್ವದಲ್ಲಿ ಗುರುವಾರ ನಗರ­ದಲ್ಲಿ ಪ್ರತಿಭಟಿಸಿ, ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ನಗರದ ಮಹಿಳಾ ಕಾಲೇಜಿನ ನೂರಾರು ವಿದ್ಯಾರ್ಥಿನಿಯರು ಕಾಲೇಜಿ­ನಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿ­ಭಟನಾ ಮೆರವಣಿಗೆ ನಡೆಸಿ, ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿದರು ನಡೆಸಿದರು. ಬೆಂಗ­ಳೂರು ವಿಶ್ವವಿದ್ಯಾನಿಲಯ ಮತ್ತು ಸರ್ಕಾ­­­­ರದ ವಿರುದ್ಧ ಘೋಷಣೆ ಕೂಗುತ್ತಾ, ಪರೀಕ್ಷಾ ಶುಲ್ಕ ಏರಿಕೆ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ­ದರು.ಪದವಿ ಕಾಲೇಜುಗಳ 2, 4 ಮತ್ತು 6ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡು­ತ್ತಿರುವ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ­ವನ್ನು ₨ 187ರಿಂದ ₨ 613ಕ್ಕೆ ಏರಿಸ­ಲಾಗಿದೆ. ಈ ಹಿಂದೆ ವಾರ್ಷಿಕ ₨ 11 ಸಾವಿರ­ಕ್ಕಿಂತ ಕಡಿಮೆ ಆದಾಯ ಹೊಂದಿರುವ ಎಲ್ಲ ವರ್ಗದ ವಿದ್ಯಾರ್ಥಿ­ಗಳಿಗೆ ಬಿ.ಎಸ್‌.ಸಿ, ಬಿ.ಕಾಂಗೆ ₨187, ಬಿ.ಬಿ.ಎಂ ₨320 ಶುಲ್ಕ ನಿಗದಿ­ಯಾ­ಗಿತ್ತು. ಇದೀಗ ವಿ.ವಿ. ಪರೀಕ್ಷಾ ಶುಲ್ಕ­ವನ್ನು ಮೂರ್ನಾಲ್ಕು ಪಟ್ಟು ಹೆಚ್ಚಿ­ಸಿದೆ ಎಂದು ಎಬಿವಿಪಿ ಜಿಲ್ಲಾ ಘಟಕದ ಸಂಚಾಲಕ ಮಂಜುನಾಥರೆಡ್ಡಿ ಟೀಕಿಸಿದರು.ಬಿ.ಎ. ತರಗತಿಯ 2, 4, 6ನೇ ಸೆಮಿಸ್ಟರ್‌ ಶುಲ್ಕವನ್ನು ₨ 187ರಿಂದ ₨ 472ಕ್ಕೆ ಏರಿಸಲಾಗಿದೆ. ಸಸಡುವ ಬಹುತೇಕ ವಿದ್ಯಾರ್ಥಿಗಳು ಕೃಷಿ, ಕೂಲಿ ಕಾರ್ಮಿ­ಕ ಕುಟುಂಬ­ಗಳಿಗೆ ಸೇರಿದವ­ರಾಗಿದ್ದಾರೆ. ಶುಲ್ಕ ಏರಿಕೆ­ಯಿಂದ ವಿದ್ಯಾರ್ಥಿಗಳಿಗೆ ತೊಂದರೆ­ಯಾಗಿದೆ ಎಂದು ದೂರಿದರು.ವಿದ್ಯಾರ್ಥಿಗಳು ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಸಾಂಕೇತಿಕವಾಗಿ ಧರಣಿ ನಡೆಸಿದರು. ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಗ್ರೇಡ್‌–2 ತಹಶೀಲ್ದಾರ್‌ ಶ್ರೀನಿವಾಸಶೆಟ್ಟಿ ಮನವಿ ಸ್ವೀಕರಿಸಿ ಸರ್ಕಾರ ಮತ್ತು ವಿಶ್ವವಿದ್ಯಾಲಯಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದರು.ವಿದ್ಯಾರ್ಥಿ ಮುಖಂಡರಾದ ಸುರೇಶ್‌, ನವಾಜ್‌, ಆರ್ಶಿಯಾ, ಲಾವಣ್ಯ, ಶ್ವೇತಾ, ಸೌಮ್ಯ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.