ಬೆಂಗಳೂರು: ಕರ್ನಾಟಕದ ಎನ್. ಸುಬ್ರಹ್ಮಣ್ಯ ಅವರು ತಂಜಾವೂರಿನಲ್ಲಿ ನಡೆದ ಸೀನಿಯರ್ ದಕ್ಷಿಣ ಭಾರತ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ 110 ಕೆ.ಜಿ. ವಿಭಾಗದಲ್ಲಿ ‘ಬೆಳ್ಳಿ’ದ ಪದಕ ಪಡೆದರು.
ಶ್ರೀಗುರು ಮಾರುತಿ ವ್ಯಾಯಾಮ ಶಾಲೆಯಲ್ಲಿ ಎಂ. ಲೋಲನಾಥ್ ಅವರ ಮಾರ್ಗದರ್ಶನದಲ್ಲಿ ಸ್ಪರ್ಧಾ ಜೀವನ ಆರಂಭಿಸಿದ್ದ ಸುಬ್ರಹ್ಮಣ್ಯ ಅವರು ಈ ಚಾಂಪಿಯನ್‌ಷಿಪ್‌ನಲ್ಲಿ ಸ್ವಲ್ಪದರಲ್ಲಿ ಸ್ವರ್ಣ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದರು.
ಅವರು ಸ್ಕ್ವಾಟ್ (242.5ಕೆ.ಜಿ.), ಬೆಂಚ್ ಪ್ರೆಸ್ (182.5 ಕೆ.ಜಿ.) ಮತ್ತು ಡೆಡ್ ಲಿಫ್ಟ್ (280 ಕೆ.ಜಿ.) ಸೇರಿದಂತೆ ಒಟ್ಟು 675 ಕೆಜಿ ಭಾರವನ್ನು ಎತ್ತುವುದರ ಮೂಲಕ ಎರಡನೇ ಸ್ಥಾನದ ಗೌರವಕ್ಕೆ ಪಾತ್ರರಾದರು.
ಕರ್ನಾಟಕದ ಇನ್ನೊಬ್ಬ ಸ್ಪರ್ಧಿ ಸುರೇಶ್ ಪಡುಕೋಣೆ 82.5 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದರು. ಇವರು ಸ್ಕ್ವಾಟ್ (220ಕೆ.ಜಿ.), ಬೆಂಚ್ ಪ್ರೆಸ್ (120 ಕೆ.ಜಿ.) ಮತ್ತು ಡೆಡ್ ಲಿಫ್ಟ್ (220 ಕೆ.ಜಿ.) ಸೇರಿದಂತೆ ಒಟ್ಟು 560ಕೆಜಿ ಭಾರ ಎತ್ತಿ ನಾಲ್ಕನೇ ಸ್ಥಾನವನ್ನು ತಮ್ಮದಾಗಿಸಿಕೊಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.