ಮಂಗಳವಾರ, ಮೇ 24, 2022
23 °C

ಪಶುವೈದ್ಯಾಧಿಕಾರಿ ವಿರುದ್ಧ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಸಿಂಹರಾಜಪುರ: ಪಶುವೈದ್ಯಾಧಿಕಾರಿ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಜೆ.ಜಿ.ನಾಗರಾಜ್ ಹಾಗೂ ಕೃಷಿಕ ಸಮಾಜದ ಅಧ್ಯಕ್ಷ ನಿಲೇಶ್ ಸೋಮ ವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಯಲ್ಲಿ ನಡೆದ ಕೆಡಿಪಿ ಸಭೆ ತೀವ್ರ ಆಸಮಾಧಾನ ವ್ಯಕ್ತಪಡಿಸಿದರು. ತಾಳೆ ಬೆಳೆಯೋಜನೆಯಡಿ ಬೆಳೆಗಾರ ರಿಗೆ ಕೊಳವೆ ಬಾವಿ ಹಾಗೂ ತೆರೆದ ಬಾವಿ ತೆಗೆಯಲು, ಮಿಶ್ರ ಬೆಳೆ ಬೆಳೆಯಲು, ಸಮಗ್ರ ಪೋಷಕಾಂಶ ಮತ್ತು ಕೀಟ ನಿರ್ವಹಣೆ,ಬಸಿ ಕಾಲುವೆ ನಿರ್ಮಾಣ, ಸೌರ ಬೇಲಿ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತದೆ ಎಂದು ಸಹಾಯಕ ತೋಟಗಾರಿಕಾ ನಿರ್ದೇಶಕಿ ವಾಸಂತಿ  ಸಭೆಗೆ ಮಾಹಿತಿ ನೀಡಿದರು.ಇದೇ 18ರಂದು ಉಚಿತ ಕಣ್ಣು ಶಸ್ತ್ರಚಿಕಿತ್ಸಾ ಶಿಬಿರ ಇದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ತಿಳಿಸಿದರು. ಅಲ್ಲದೆ ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿ ತಡೆಗೋಡೆ ನಿರ್ಮಿಸುವಂತೆ ಸಭೆಯನ್ನು ಕೋರಿದರು.ಅಳಲಗೆರೆ ಗ್ರಾಮದ ವ್ಯಾಪ್ತಿಯಲ್ಲಿ ಓಲ್ಟೇಜ್ ಸಮಸ್ಯೆ ಇದ್ದು ಇದನ್ನು ಸರಿ ಪಡಿಸಲು ತಾಂತ್ರಿಕ ಸಮಸ್ಯೆಯಿದ್ದು ಮುಂ ದಿನ ದಿನಗಳಲ್ಲಿ ಸರಿ ಪಡಿಸಲಾಗುವುದು. ವಿದ್ಯುತ್ ಕಡಿತದ ಬಗ್ಗೆ ಇದುವರೆಗೆ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಮೆಸ್ಕಾಂ ಎಂಜಿನಿಯರ್ ಸಭೆಗೆ ಮಾಹಿತಿ ನೀಡಿದರು. ತಾಲ್ಲೂಕಿಗೆ ಒಟ್ಟು 5800ಟನ್ ಗೊಬ್ಬರಕ್ಕೆ ಬೇಡಿಕೆ ಇತ್ತು,ಇದುವರೆಗೆ 5728 ಟನ್ ರಸಗೊಬ್ಬರ ಪೂರೈಸ ಲಾಗಿದೆ ಎಂದು ಕೃಷಿ ಅಧಿಕಾರಿ ತಿಳಿಸಿದರು.ತಾಲ್ಲೂಕಿನ 14 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 16846 ಪಡಿತರ ಚೀಟಿಗಳಿದ್ದು ಇದರಲ್ಲಿ ತೆರಿಗೆ ಇಲ್ಲದ ಮನೆಯಲ್ಲಿ ವಾಸಿಸುತ್ತಿರುವವರ ಕಾರ್ಡ್‌ಗಳು 305, ಪಡಿತರ ಚೀಟಿ ಇದ್ದು ಕುಟುಂಬ ಇಲ್ಲದ ಸಂಖ್ಯೆ 721 ಹಾಗೂ ಕುಟುಂಬ ಇದ್ದು ಪಡಿತರ ಚೀಟಿ ಇಲ್ಲದ 921ಇದ್ದು ಇದನ್ನು ಗ್ರಾಮ ಪಂಚಾ ಯಿತಿಯವರು ಸರಿಯಾಗಿ ಪರಿಶೀಲಿಸಿ ಪಂಚತತಂತ್ರ ಸಾಪ್ಟ್‌ವೆರ್‌ನಲ್ಲಿ ನಮೂದಿ ಸಬೇಕೆಂದು ತಹಸೀಲ್ದಾರ್ ತಿಳಿಸಿದರು.

 

ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರಿಗೆ ಇದೇ 12ರಿಂದ ತರಬೇತಿ ನೀಡಲಾ ಗುವುದು ಎಂದು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಾಳಮ್ಮನವರ್ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.