ಗುರುವಾರ , ಏಪ್ರಿಲ್ 22, 2021
25 °C

ಪಹಣಿ ದೋಷ ಸರಿಪಡಿಸಲು ತುರ್ತು ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮಟಾ: ಸುಮಾರು 30 ವರ್ಷಗಳಿಂದ ಸರಕಾರದ ವಿವಿಧ ಯೋಜನೆಗಳಲ್ಲಿ ನಿವೇಶನ ಪಡೆದ ತಾಲ್ಲೂಕಿನ ನಾಡುಮಾಸ್ಕೇರಿ ಪಂಚಾಯಿತಿಯ 120 ಜನರಿಗೆ ಮಂಜೂರಾದ ನಿವೇಶನದ ಪಹಣಿ ತಿದ್ದುಪಡಿ ಮಾಡಿ ಫಲಾನುಭವಿಗಳಿಗೆ ಮಾಲೀಕತ್ವದ ಹಕ್ಕು ನೀಡುವ ಬಗ್ಗೆ  ಶಾಸಕ ದಿನಕರ ಶೆಟ್ಟಿ ಅವರ ನೇತೃತ್ವದಲ್ಲಿ ಬುಧವಾರ ಅಧಿಕಾರಿಗಳ ತುರ್ತು ಸಭೆ ನಡೆಸಲಾಯಿತು.`1975ರಲ್ಲಿ 25 ಜನರಿಗೆ ಹಾಗೂ 1995ರಲ್ಲಿ 95 ಜನರಿಗೆ ಆಶ್ರಯ ಯೋಜನೆಯಡಿ ಸರಕಾರದಿಂದ ನಿವೇಶನ ಮಂಜೂರಾಗಿತ್ತು. ಆದರೆ ಪಹಣಿ ಪತ್ರಿಕೆಯ 9 ನೇ ನಂಬರ್ ಕಾಲಂನಲ್ಲಿ ಮಾಲೀಕತ್ವದ ಹಕ್ಕು ನಮೂದಿಲ್ಲದಿರುವುದು  ನಾಡುಮಾಸ್ಕೇರಿ ಪಂಚಾಯಿತಿಯಲ್ಲಿ  ಗ್ರಾಮ ವಾಸ್ತವ್ಯ ನಡೆಸಿದ ಸಂದರ್ಭದಲ್ಲಿ ಗಮನಕ್ಕೆ ಬಂದಿತು. ಅದೇ ರೀತಿ ಅಲ್ಲಿ ಸರಕಾರದ ಬೆಳ್ಳಿ-ಬೆಳಕು ಯೋಜನೆಯ ಸುಮಾರು 22 ಪಲಾನುಭವಿಗಳ ಪ್ರಕರಣದಲ್ಲೂ ಇದೇ ರೀತಿ ಆಗಿದೆ~ ಎಂದರು.ಸಭೆಯಲ್ಲಿ ಉಪಸ್ಥಿತರಿದ್ದ ತಹಶೀಲ್ದಾರ ವಿ.ಬಿ. ಫರ್ನಾಂಡಿಸ್ ಅವರು, `ಪಹಣಿ ತಿದ್ದುಪಡಿಗಾಗಿ ಪ್ರಕರಣದ ಪ್ರಸ್ತಾವನೆಯನ್ನು ಉಪವಿಭಾಗಾಧಿಕಾರಿ ಅವರಿಗೆ ಕಳಿಸುವುದಾಗಿ ತಿಳಿಸಿದರು.`ಬೆಳ್ಳಿ-ಬೆಳಕು ಯೋಜನೆಯ ಫಲಾನುಭವಿಗಳ ಪಹಣಿಯಲ್ಲಿ 15 ವರ್ಷಗಳ ವರೆಗೆ ಭೂಮಿ ಪರಾಧೀನ ಮಾಡಬಾರದೆಂಬ ಸರಕಾರದ ಷರತ್ತು ಇದೆ. ಈಗಾಗಲೇ 12 ವರ್ಷಗಳು ಕಳೆದಿದ್ದು, ಜಿಲ್ಲಾಧಿಕಾರಿಗಳು ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪಹಣಿ ದುರಸ್ತಿಗೆ ಆದೇಶ ಮಾಡಬಹುದಾಗಿದೆ~ ಎಂದು ಶಾಸಕರು ಹೇಳಿದರು.ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಂ. ಎಸ್. ಮೇಟಿ, ಜಿ.ಪಂ. ಸದಸ್ಯ ಪ್ರದೀಪ ನಾಯಕ, ಅಧಿಕಾರಿಗಳಾದ ಕಿರಣ ಪೆಡ್ನೇಕರ್, ಎಂ.ಎಸ್. ನಾಯ್ಕ, ಕಿರಣ ಗೌರಯ್ಯ ಮೊದಲಾದವರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.