ಸೋಮವಾರ, ಆಗಸ್ಟ್ 10, 2020
24 °C

ಪಾಂಡವಪುರ: ಕನ್ನಡ ಜಾತ್ರಾ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರ: ಕನ್ನಡ ಜಾತ್ರಾ ಸಂಭ್ರಮ

ಪಾಂಡವಪುರ: ಪಟ್ಟಣದಲ್ಲಿ ಶನಿವಾರ ನಡೆದ 4ನೇ ತಾಲ್ಲೂಕು ಕನ್ನಡ ಸಾಹಿತ್ಯಳನದ ವೇದಿಕೆಗೆ ಸಮ್ಮೇಳನಾಧ್ಯಕ್ಷ ಪ್ರೊ.ಬಿ. ನಾರಾಯಣಗೌಡ ಅವರನ್ನು ಸಾಂಸ್ಕೃತಿಕ ಕಲಾ ಮೇಳಗಳ ಅದ್ದೂರಿ ಮೆರವಣಿಗೆಯೊಂದಿಗೆ ಕರೆತರಲಾಯಿತು.ಬೆಳಿಗ್ಗೆ 8.30ರಲ್ಲಿ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ರಾಷ್ಟ್ರಧ್ವಜಾರೋಹಣವನ್ನು, ಜಿಲ್ಲಾ ಕಸಾಪ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಪರಿಷತ್ತಿನ ಧ್ವಜಾರೋಹಣವನ್ನು ಹಾಗೂ ತಾಕಸಾಪ ಅಧ್ಯಕ್ಷ ಎಚ್.ಆರ್. ಧನ್ಯಕುಮಾರ್ ನಾಡ ಧ್ವಜರೋಹಣನವನ್ನು ನೆರವೇರಿಸಿದರು.ಬೆಳಿಗ್ಗೆ 9.00 ಗಂಟೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ಎಂ. ರಾಮಕೃಷ್ಣ ಅವರು ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಶಾಲೆಯ ಮಕ್ಕಳ ಸೇವಾದಳ, ಕನ್ನಲಿ ಗ್ರಾಮದ ತಮಟೆ, ನಗಾರಿ ಮೇಳ. ಹೆಗ್ಗಡಹಳ್ಳಿಯ ಪಟಕುಣಿತ, ಲಕ್ಷ್ಮಿಸಾಗರದ ಗೊಂಬೆಕುಣಿತ, ಜಾಂಜ್‌ಮೇಳ, ಕೆನ್ನಾಳು ಗ್ರಾಮದ ಮದಕರಿ ನಾಯಕ ಸಂಘದ ದೊಣ್ಣೆ, ಕತ್ತಿವರಸೆ, ಅಂಗನವಾಡಿ ಕಾರ್ಯಕರ್ತೆಯರ ಪೂರ್ಣ ಕುಂಭ ಮೇಳ ಮೆರವಣಿಗೆಗೆ ಮೆರಗು ನೀಡಿದವು.ಶೃಂಗರಿಸಲಾಗಿದ್ದ ಎತ್ತಿನಗಾಡಿಯಲ್ಲಿ ಸಮ್ಮೇಳನಾಧ್ಯಕ್ಷ  ಪ್ರೊ.ಬಿ. ನಾರಾಯಣಗೌಡ, ಶಾಸಕ ಕೆ.ಎಸ್. ಪುಟ್ಟಣ್ಣಯ್ಯ, ಮೀರಾ ಶಿವಲಿಂಗಯ್ಯ, ಎಚ್.ಆರ್. ಧನ್ಯಕುಮಾರ್ ಕುಳಿತು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಸಮ್ಮೇಳನದ ವೇದಿಕೆಯನ್ನು ತಲುಪಿತು. ಸಾಂಸ್ಕೃತಿ ಕಲಾ ಮೇಳವನ್ನು ನೋಡಿದ ಪ್ರೇಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.