ಲಾಹೋರ್ (ಪಿಟಿಐ): ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ಬುಕ್ಕಿಯನ್ನು ಅಪರಿಚಿತ ಬಂದೂಕುಧಾರಿಯೊಬ್ಬ ಹತ್ಯೆಗೈದ ಘಟನೆ ಲಾಹೋರ್ನಲ್ಲಿ ನಡೆದಿದೆ. ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಬಳಿಕ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಮ್ಮದ್ ಶೌಕತ್ ಎಂಬ ಹೆಸರಿನ `ಬುಕ್ಕಿ~ಯನ್ನು ಆತನ ಮನೆಯಲ್ಲೇ ಹತ್ಯೆಗೈಯಲಾಗಿದೆ. ಆ ಮನೆಯಲ್ಲಿ ಡೈರಿಯೊಂದು ದೊರೆತಿದ್ದು, ಅದರಲ್ಲಿ ಹಲವರು ಹೆಸರು ಮತ್ತು ದೂರವಾಣಿ ಸಂಖ್ಯೆಗಳು ಇವೆ. ಅದರ ಜೊತೆಗೆ ನಗದು ಹಣವೂ ಪೊಲೀಸರಿಗೆ ದೊರೆತಿದೆ. ಈ ಕಾರಣ ಶೌಕತ್ ಒಬ್ಬ ಬುಕ್ಕಿ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ.

ಭಾರತ - ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಈ ಘಟನೆಗೂ ಸಂಬಂಧ ಇದೆಯೇ ಎಂಬುದನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯದ ವೇಳೆ ಬೆಟ್ಟಿಂಗ್ `ಮಾರುಕಟ್ಟೆ~ಯಲ್ಲಿ ಭಾರಿ ವ್ಯವಹಾರ ನಡೆಯುವುದು ವಾಡಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.