ಮಂಗಳೂರು: ‘ಈ ನ್ಯೂಜಿಲೆಂಡ್ ತಂಡದಲ್ಲಿ ಹಲವು ಮಂದಿ ಯುವ ಆಟಗಾರರು. ತಂಡ ಕಟ್ಟುವ ಹಂತದಲ್ಲಿ ಅನುಭವದ ಕೊರತೆಯಿಂದ ಆಸ್ಟ್ರೇಲಿಯ ವಿರುದ್ಧ ಹೀಗೆ ಆಡಿದ್ದಾರೆ. ಈ ತಂಡದ ಹೆಚ್ಚಿನವರು ಮುಂದಿನ ವಿಶ್ವಕಪ್ ತಂಡದಲ್ಲೂ ಆಡುವ ಅವಕಾಶ ಹೊಂದಿರುವವರು. ಅವರು ತಾಳ್ಮೆ ವಹಿಸಬೇಕು’.....

-ಹೀಗೆ ವಿಶ್ಲೇಷಿಸಿ ಕಿವಿಮಾತು ಹೇಳಿದವರು ನ್ಯೂಜಿಲೆಂಡ್ ತಂಡದ ಮಾಜಿ ಆಲ್ರೌಂಡರ್ ಕ್ರಿಸ್ ಕೇರ್ನ್ಸ್. ಮಂಗಳೂರು ಸಮೀಪದ ಪಣಂಬೂರಿನಲ್ಲಿ ಕ್ರಿಸ್ ಕೇರ್ನ್ಸ್ ಫೌಂಡೇಷನ್ ವತಿಯಿಂದ ಶುಕ್ರವಾರ ಮಂಗಳೂರು ವಾರಿಯರ್ಸ್ ವಿರುದ್ಧ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಆಡಲು ಬಂದಿದ್ದ ಅವರು, ಪತ್ರಕರ್ತರ ಜತೆ ಮಾತನಾಡಿದರು.

ಪಣಂಬೂರಿನ ಎನ್ಎಂಪಿಟಿ ಮೈದಾನಕ್ಕೆ ಅವರು ಬಂದಾಗ ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲೆಂಡ್ಗೆ ಕಡಿವಾಣ ಹಾಕಿದ್ದ ಆಸ್ಟ್ರೇಲಿಯ ಗೆಲುವಿನ ಹಾದಿಯಲ್ಲಿತ್ತು.

ಪಾಕ್ ಡಾಕ್ಹಾರ್ಸ್: ಬಹುತೇಕ ಹಿರಿಯ ಆಟಗಾರರಂತೆ ನ್ಯೂಜಿಲೆಂಡ್ನ ಕ್ರಿಸ್ ಕೇನ್ಸ್ ಪ್ರಕಾರ ‘ಭಾರತ ಅಥವಾ ಶ್ರೀಲಂಕಾ ವಿಶ್ವಕಪ್ ಗೆಲ್ಲುವ ಫೆವರೀಟ್ ತಂಡ. ಆದರೆ ಪಾಕಿಸ್ತಾನ ಈ ವಿಶ್ವಕಪ್ನ ಡಾರ್ಕ್ಹಾರ್ಸ್. ಅದು ಅಪಾಯಕಾರಿ ತಂಡ.’

ಮಂಗಳೂರಿನಲ್ಲಿ ಟರ್ಫ್ ಪಿಚ್ ಹೊಂದಿರುವ ಕ್ರಿಕೆಟ್ ಕ್ರೀಡಾಂಗಣ ಆದರೆ ಕ್ರಿಕೆಟ್ನಲ್ಲಿ ಭವಿಷ್ಯ ಅರಸುವ ಎಳೆಯ ಮಕ್ಕಳಿಗೆ ಅನುಕೂಲವಾಗಬಹುದು ಎನ್ನುತ್ತಾರೆ ಅವರು.

ಕೇರ್ನ್ಸ್ 215 ಏಕದಿನ ಹಾಗೂ 62 ಟೆಸ್ಟ್ ಪಂದ್ಯಗಳನ್ನು ಆಡಿದ ಅನುಭವಿ. ಎನ್ಎಂಪಿಟಿ ಕ್ರೀಡಾಂಗಣದಲ್ಲಿ ಶುಕ್ರವಾರ ಅವರೇ ಪ್ರಮುಖ ಆಕರ್ಷಣೆ. ಕ್ರಿಕೆಟ್ ಪ್ರಿಯರನ್ನು ನಿರಾಸೆಗೊಳಿಸದ ಕ್ರಿಸ್, 27 ಎಸೆತಗಳಲ್ಲಿ 62 ರನ್ ಚಚ್ಚಿದರು.

ಆದರೂ ಅವರ ಕೇರ್ನ್ಸ್ ಇಲೆವೆನ್ ತಂಡ, ಕಿರಿಯ ಆಟಗಾರರಿದ್ದ ಮಂಗಳೂರು ವಾರಿಯರ್ಸ್ಗೆ 84 ರನ್ಗಳಿಂದ ಶರಣಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.