ಪಾಕಿಸ್ತಾನ ಉಗ್ರರ ಸ್ವರ್ಗ: ಅಮೆರಿಕ

7

ಪಾಕಿಸ್ತಾನ ಉಗ್ರರ ಸ್ವರ್ಗ: ಅಮೆರಿಕ

Published:
Updated:

ವಾಷಿಂಗ್ಟನ್(ಪಿಟಿಐ):   ಅಫ್ಘಾನಿಸ್ತಾನದ ವಿಚಾರದಲ್ಲಿ ಪಾಕಿಸ್ತಾನದ ನಡೆ ಸಂಶಯಕ್ಕೆ ಕಾರಣವಾಗಿದೆ ಎಂದು ಆರೋಪಿಸಿರುವ ಅಮೆರಿಕ, ಉಗ್ರರ ದಮನಕ್ಕೆ, ಅದರಲ್ಲೂ ಪ್ರಮುಖವಾಗಿ ಹಖಾನಿ ಉಗ್ರರ ಜಾಲವನ್ನು ನಿಯಂತ್ರಿಸಲು ಅದು ವಿಫಲವಾಗಿದೆ ಎಂದು ದೂರಿದೆ.ಪಾಕಿಸ್ತಾನ ಉಗ್ರರ ಸ್ವರ್ಗವಾಗಿದೆ. ಅಲ್ಲಿಂದ ಕಾರ್ಯಚಟುವಟಿಕೆ ನಡೆಸುವ ಭಯೋತ್ಪಾದಕ ಸಂಘಟನೆಗಳು ಮುಖ್ಯವಾಗಿ ಆಫ್ಘಾನಿಸ್ತಾನ ಭದ್ರತೆಯನ್ನು ಹಾಳು ಮಾಡುತ್ತಿವೆ. ಅಲ್ಲದೇ ಅಂತರ ರಾಷ್ಟ್ರೀಯ ನೆರವು ಪಡೆಗಳಿಗೆ ಬೆದರಿಕೆಯನ್ನು ಒಡ್ಡುತ್ತಿವೆ ಎಂದು ಅಮೆರಿಕ ಆಕ್ಷೇಪಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry