ಮಂಗಳವಾರ, ಮೇ 11, 2021
24 °C
ಕ್ರಿಕೆಟ್: ಮಾಜಿ ಚಾಂಪಿಯನ್ನರಿಗೆ ಅಗ್ನಿಪರೀಕ್ಷೆ

ಪಾಕ್‌ಗೆ ವಿಂಡೀಸ್ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಒಂದು ಸಲ ಚಾಂಪಿಯನ್ ಹಾಗೂ ಎರಡು ಸಲ ರನ್ನರ್ ಅಪ್ ಆಗಿರುವ ವೆಸ್ಟ್ ಇಂಡೀಸ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ `ಬಿ' ಗುಂಪಿನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ವಿಂಡೀಸ್ ಮಿಸ್ಬಾ ಉಲ್ ಹಕ್ ನಾಯಕತ್ವದ ಪಾಕ್‌ಗೆ ಸವಾಲೊಡ್ಡುವ ವಿಶ್ವಾಸದಲ್ಲಿದೆ. ಈ ತಂಡವು 2004ರ ಟೂರ್ನಿಯಲ್ಲಿ ಮೊದಲ ಸಲ ಟ್ರೋಫಿ ಎತ್ತಿ ಹಿಡಿದಿತ್ತು. 1998 ಮತ್ತು 2006ರ ಟೂರ್ನಿಯಲ್ಲಿ ರನ್ನರ್ ಅಪ್ ಆಗಿತ್ತು. ಆದರೆ, ಎದುರಾಳಿ ಪಾಕ್ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ.ಭಾರತದಲ್ಲಿ ನಡೆದ ಐಪಿಎಲ್‌ನಲ್ಲಿ ವಿಂಡೀಸ್‌ನ ಕೆಲ ಆಟಗಾರರು ಆಡಿದ್ದಾರೆ. ಕ್ರಿಸ್ ಗೇಲ್, ಡರೆನ್ ಸಮಿ, ಸ್ಯಾಮುಯೆಲ್ಸ್, ಕೀರನ್ ಪೊಲಾರ್ಡ್, ಕೆಮರ್ ರೋಚ್ ಅವರು ಉತ್ತಮ ಪ್ರದರ್ಶನ ತೋರಿದ್ದಾರೆ. ಈ ತಂಡದಲ್ಲಿ ವೇಗವಾಗಿ ರನ್ ಕಲೆ ಹಾಕಬಲ್ಲ ಬ್ಯಾಟ್ಸ್‌ಮನ್‌ಗಳ ಸಂಖ್ಯೆ ಹೆಚ್ಚಿದೆ.ಚಾಂಪಿಯನ್ಸ್ ಟೂರ್ನಿಯಲ್ಲಿ ಒಟ್ಟು ಗರಿಷ್ಠ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ದೈತ್ಯ ಆಟಗಾರ ಗೇಲ್‌ಗೆ ಅಗ್ರಸ್ಥಾನ. ಆದ್ದರಿಂದ ಶುಕ್ರವಾರದ ಪಂದ್ಯದಲ್ಲಿ ವಿಂಡೀಸ್ ಗೆಲುವು ಪಡೆಯುವ ನೆಚ್ಚಿನ ತಂಡ ಎನಿಸಿದೆ. ಈ ಟೂರ್ನಿಯಲ್ಲಿ ವಿಂಡೀಸ್ ಹೆಚ್ಚು ಪಂದ್ಯಗಳಲ್ಲಿ (12) ಗೆಲುವು ಪಡೆದ ತಂಡ ಎನ್ನುವ ಕೀರ್ತಿ ಹೊಂದಿದೆ.ಮಿಸ್ಬಾ ನಾಯಕತ್ವದ ಪಾಕ್ ಸಹ ಎದುರಾಳಿ ಬೌಲರ್‌ಗಳಿಗೆ ಸವಾಲಾಗಬಲ್ಲ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಗಾಯಗೊಂಡಿರುವ ವೇಗಿ ಗುಲ್ ಈ ಪಂದ್ಯದಲ್ಲಿ ಆಡುತ್ತಿಲ್ಲ.ತಂಡಗಳು ಇಂತಿವೆ:

ವೆಸ್ಟ್ ಇಂಡೀಸ್: ಡ್ವೇನ್ ಬ್ರಾವೊ (ನಾಯಕ), ದಿನೇಶ್ ರಾಮ್ದಿನ್, ಟಿನೊ ಬಿಸ್ಟ್, ಡರೆನ್ ಬ್ರಾವೊ, ಜಾನ್ಸನ್ ಚಾರ್ಲೆಸ್, ಕ್ರಿಸ್ ಗೇಲ್, ಜಾಸನ್ ಹೋಲ್ಡರ್, ಸುನಿಲ್ ನಾರಾಯಣ್, ಕೀರನ್ ಪೊಲಾರ್ಡ್, ರವಿ ರಾಂಪಾಲ್, ಕೆಮರ್ ರೋಚ್, ಡರೆನ್ ಸಮಿ, ಸ್ಯಾಮುಯೆಲ್ಸ್, ರಾಮನರೇಶ್ ಸರವಣ್ ಮತ್ತು ಡೆವೊನ್ ಸ್ಮಿತ್.ಪಾಕಿಸ್ತಾನ: ಮಿಸ್ಬಾ ಉಲ್ ಹಕ್ (ನಾಯಕ), ನಾಸೀರ್ ಜೆಮ್‌ಷೀದ್, ಮಹಮ್ಮದ್ ಹಫೀಜ್, ಇಮ್ರಾನ್ ಫರ‌್ಹಾತ್, ಕಮ್ರನ್ ಅಕ್ಮಲ್, ಶೊಯಬ್ ಮಲೀಕ್, ಅಸಾದ್ ಶಫೀಕ್, ಸಯೀದ್ ಅಜ್ಮಲ್, ಜುನೈದ್ ಖಾನ್, ಮಹಮ್ಮದ್ ಇರ್ಫಾನ್, ಅಸದ್ ಅಲಿ, ವಹಾಬ್ ರಿಯಾಜ್, ಉಮರ್ ಅಮಿನ್, ಅಬ್ದುಲ್ ರೆಹಮಾನ್ ಹಾಗೂ ಈಶನ್ ಆದಿಲ್.

ಆರಂಭ: ಮಧ್ಯಾಹ್ನ 3ಕ್ಕೆ

(ಭಾರತೀಯ ಕಾಲಮಾನ).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.