ಸೋಮವಾರ, ಮೇ 17, 2021
28 °C

ಪಾಕ್‌ನ ಮಾಜಿ ಅಧ್ಯಕ್ಷ ಮುಷರಫ್ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರನ್ನು ಅಕ್ಬರ್ ಬುಕ್ತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಪೊಲೀಸರು ಗುರುವಾರ ಅಧಿಕೃತವಾಗಿ ಬಂಧಿಸಿದ್ದಾರೆ.2006ರಲ್ಲಿ ನಡೆದಿದ್ದ ಅಕ್ಬರ್ ಬುಕ್ತಿ ಎಂಬುವರ ಹತ್ಯೆ ಪ್ರಕರಣದಲ್ಲಿ ಮುಷರಫ್ ಅವರ ಮೇಲೆ  ಪ್ರಮುಖ ಆರೋಪವಿರುವುದರಿಂದ ಬಲೂಚಿಸ್ತಾನದ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಮನವಿಯ ಮೇರೆಗೆ ಭಯೋತ್ಪಾದನ ನಿಗ್ರಹ  ನ್ಯಾಯಾಲಯ ಮುಷರಫ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಭದ್ರತೆಯ ದೃಷ್ಟಿಯಿಂದ ಇಸ್ಲಾಮಾಬಾದ್‌ನ ಹೊರ ವಲಯದಲ್ಲಿರುವ ಮುಷರಫ್ ಅವರ ಫಾರ್ಮ್ ಹೌಸ್ ಅನ್ನು ಉಪ ಬಂಧಿಖಾನೆಯನ್ನಾಗಿ ಪರಿವರ್ತಿಸಲಾಗಿದೆ.ಭಯೋತ್ಪಾದನ ನಿಗ್ರಹ  ನ್ಯಾಯಾಲಯವು ಬುಧವಾರ ಮುಷರಫ್ ಅವರಿಗೆ ಜಾಮೀನು ನೀಡಲು ನಿರಾಕರಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.