ಸೋಮವಾರ, ಜನವರಿ 20, 2020
20 °C

ಪಾಕ್ ವಿ.ವಿಯಲ್ಲಿ ಕಾಶ್ಮೀರ ವಿದ್ಯಾರ್ಥಿಗೆ ಕಿರುಕುಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಸಾರ್ಕ್ ದೇಶಗಳ ಶೈಕ್ಷಣಿಕ ಕಾರ್ಯಕ್ರಮಗಳ ವಿನಿಮಯ ಯೋಜನೆ­­ಯಡಿ ಪಾಕಿಸ್ತಾನದ ಕ್ವಾದಿಅಜಂ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡಲು ತೆರಳಿರುವ ಕಾಶ್ಮೀರದ ಇಶ್ರತ್ ನವೀದ್‌ ಅವರು ತಮ್ಮ ಮಾರ್ಗ­ದರ್ಶಿ ಪ್ರಾಧ್ಯಾಪಕ­ರಿಂದಲೇ ತೀವ್ರ ಕಿರುಕುಳಕ್ಕೆ ಒಳಗಾಗಿ­ರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.ಜೈವಿಕ  ತಂತ್ರಜ್ಞಾನದಲ್ಲಿ ಪಿಎಚ್‌ಡಿ ಪ್ರವೇಶ ಪಡೆದ ನಂತರ  ಡಾ. ತಾರಿಕ್‌ ಮೊಹಮದ್‌ ಮಾರ್ಗದರ್ಶಕ­ರಾ­ದರು ಎಂದು ತಿಳಿಸಿರುವ ಇಶ್ರತ್‌, ಈ ಪ್ರಾಧ್ಯಾ­ಪಕರು ಸಂಶೋಧನೆ ಸಂದರ್ಭ­ದಲ್ಲಿ ನೀಡಿದ ಕಿರುಕುಳ­ ವರ್ಣಿ­ಸಲು ಸಾಧ್ಯವಿಲ್ಲ ಎಂದು ಶ್ರೀನಗರದ  ‘ಪ್ರಜಾವಾಣಿ’ ವರದಿಗಾರ­ರಿಗೆ ಕಳುಹಿಸಿ­ರುವ ಇ–ಮೇಲ್‌ ಸಂದೇಶ­ದಲ್ಲಿ ತಿಳಿಸಿದ್ದಾರೆ‘ಪ್ರಾಧ್ಯಾಪಕರು ತನ್ನನ್ನು ಭಾರತದ ಗೂಢಚಾರ ಎಂದು ಸಂಶಯ­ದಿಂದ ನೋಡಿ­ದ್ದಲ್ಲದೆ, ತನ್ನೆಲ್ಲಾ ಸಂಶೋ­ಧನಾ ಮಾದರಿಯನ್ನು ಕದ್ದು ತಮ್ಮ ಆಪ್ತ ವಿದ್ಯಾರ್ಥಿಗಳಿಗೆ ಹಂಚಿದ್ದಾರೆ’ ಎಂದು ಇಶ್ರತ್‌ ಆಪಾದಿಸಿದ್ದಾರೆ. ಸಾರ್ಕ್‌ ವಿನಿಮಯ ಯೋಜನೆ­ಯಂತೆ ಮಂಜೂರಾಗಿರುವ ` 95 ಲಕ್ಷ (ಪಾಕಿಸ್ತಾನ ಕರೆನ್ಸಿ) ಸಂಶೋ­ಧನಾ ಶಿಷ್ಯವೇತನವನ್ನು ಕಬಳಿಸುವ ಉದ್ದೇಶ­ದಿಂದ ಪ್ರಾಧ್ಯಾಪಕ ಡಾ.­ತಾರಿಕ್‌ ಮೊಹಮದ್‌ ಅವರು ಪಿಎಚ್‌ಡಿ ಮುಗಿ­ಸಿರುವ ಬಗ್ಗೆ ಪ್ರಮಾಣಪತ್ರ ನೀಡುತ್ತಿಲ್ಲ ಮತ್ತು ಕಾಶ್ಮೀರಕ್ಕೆ ಮರಳಲು ಅನುಮತಿ ನೀಡು­ತ್ತಿಲ್ಲ ಎಂದು ಇಶ್ರತ್‌ ದೂರಿದ್ದಾರೆ.ಈ  ಬಗ್ಗೆ ವಿವಿ ಕುಲ­ಪತಿ­ಗಳಿಗೆ ಮತ್ತು ಉನ್ನತ ಶಿಕ್ಷಣ ಆಯೋಗಕ್ಕೆ  ದೂರು ನೀಡಿದ್ದರೂ ಇದುವರೆಗೆ ಕ್ರಮ ತೆಗೆದುಕೊಂಡಿಲ್ಲ. 2011ರ ಡಿಸೆಂಬರ್‌­ನಲ್ಲಿಯೇ ಪ್ರಬಂಧ ಸಲ್ಲಿಸಿ­ದ್ದರೂ ತನ್ನನ್ನು ಬಿಡುಗಡೆ ಮಾಡಿಲ್ಲ. ಶ್ರೀನಗರದಲ್ಲಿ ಸಹೋದರಿ ಹೃದಯ ಕಾಯಿಲೆ­ಯಿಂದ ನರಳುತ್ತಿದ್ದಾಗ ನೋಡಲು ಬರಲು ಸಾಧ್ಯವಾಗಲಿಲ್ಲ. ಕೊನೆಗೆ ಸಹೋದರಿ ಆಸ್ಪತ್ರೆಯಲ್ಲಿ ತೀರಿ­ಕೊಂಡ ವಿಚಾರ ಗೊತ್ತಾಯಿತು ಎಂದು ಇಶ್ರತ್‌ ನೋವು ತೋಡಿಕೊಂಡಿದ್ದಾರೆ.ವಿವಿ ಕುಲಪತಿಯನ್ನು ಇ–ಮೇಲ್‌ ಮೂಲಕ ಸಂಪರ್ಕಿಸಲು ಯತ್ನಿದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ. ಪಾಕಿಸ್ತಾನಕ್ಕೆ ಉನ್ನತ ಶಿಕ್ಷಣ ಪಡೆಯಲು ಹೋದ ಇಶ್ರತ್‌ ಅವರದು ನೋವಿನ ಕಥೆಯಾ­ದರೆ, ಪಾಕ್‌ನಿಂದ ಕಾಶ್ಮೀರಕ್ಕೆ ಪಿಎಚ್‌ಡಿ ಮಾಡಲು ಬಂದ ನಾಡಿಯಾ ಮೆಹರದಿನ್‌ ಅವರು ಈಗ ಖುಷಿಯಿಂದ ಪಾಕ್‌ಗೆ ಮರಳುತ್ತಿದ್ದಾರೆ.

ಪ್ರತಿಕ್ರಿಯಿಸಿ (+)