ಭಾನುವಾರ, ಜನವರಿ 19, 2020
28 °C

ಪಾದಚಾರಿ ರಸ್ತೆಯಲ್ಲಿರುವ ಕಟ್ಟೆ ತೆಗೆಯಲು ಮನವಿ

–ಗಿರಿನಗರ ನಿವಾಸಿಗಳು. Updated:

ಅಕ್ಷರ ಗಾತ್ರ : | |

ಪಾದಚಾರಿ ರಸ್ತೆಯಲ್ಲಿರುವ ಕಟ್ಟೆ ತೆಗೆಯಲು ಮನವಿ

ಸವನಗುಡಿ ವಿಧಾನಸಭಾ ಕ್ಷೇತ್ರದ ಗಿರಿನಗರ ವಾರ್ಡ್‌ಗೆ ಸೇರಿದ ನೆಹರೂ ರಸ್ತೆಯ ಅದೇ ಹೆಸರಿನ ವೃತ್ತದ ಆಟೊ ನಿಲ್ದಾಣದ ಬಳಿ ಮೂಲೆಯ ಖಾಲಿ ನಿವೇಶನಕ್ಕೆ ಹೊಂದಿಕೊಂಡಂತೆ ಕಟ್ಟೆಯೊಂದು ಇದ್ದು, ರಸ್ತೆಯಲ್ಲಿ ಸಂಚರಿಸುವ ದಾರಿಹೋಕರು ಈ ಕಟ್ಟೆ ಏರಿ ಮೂಲೆಯ ಖಾಲಿ ನಿವೇಶನದಲ್ಲಿ  ಮಲ–ಮೂತ್ರಗಳನ್ನು ವಿಸರ್ಜಿಸಿರುತ್ತಾರೆ.

ಇದರಿಂದ ಈ ರಸ್ತೆಯಲ್ಲಿ ವಾಸನೆ ಹೆಚ್ಚಾಗಿದ್ದು, ಸೊಳ್ಳೆಗಳ ತವರು ಇದಾಗಿದೆ. ದಯವಿಟ್ಟು ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳು, ನಗರಸಭಾ ಸದಸ್ಯರು ಈ ವೃತ್ತಕ್ಕೆ ಭೇಟಿ ನೀಡಿ, ಈ ಕಟ್ಟೆಯಿಂದ ನಾಗರಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.

–ಗಿರಿನಗರ ನಿವಾಸಿಗಳು.

ಪ್ರತಿಕ್ರಿಯಿಸಿ (+)