ಮಡಿಕೇರಿ: ಕೊಡಗಿನ ಅರಣ್ಯ ಪ್ರದೇಶವನ್ನು ವಿಶ್ವಪಾರಂಪರಿಕ ತಾಣವಾಗಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಗುರುವಾರ ನಡೆದ ಕೊಡಗು ಬಂದ್ ಜಿಲ್ಲೆಯಾದ್ಯಂತ ಯಶಸ್ವಿಯಾಗಿದ್ದು, ಸಹಕರಿಸಿದ ಎಲ್ಲರಗೂ ಬಿಜಿಪಿ ಮುಖಂಡರು ಕೃತಜ್ಞತೆ ಸಲ್ಲಿಸಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ಮಾತನಾಡಿ, ಜಿಲ್ಲೆಯಾದಂತ್ಯ ಕೊಡಗು ಬಂದ್ಗೆ ಸ್ವಯಂ ಪ್ರೇರಿತರಾಗಿ ಸಹಕಾರ ನೀಡಿದ ಎಲ್ಲಾ ಪಕ್ಷದವರಿಗೆ ಹಾಗೂ ಸಂಘ-ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಶಾಸಕರು ಸಕರಾತ್ಮಕವಾಗಿ ಸ್ಪಂದಿಸಲಿದ್ದು, ಶೀಘ್ರವೇ ಸಮಸ್ಯೆ ಬಗೆ ಹರಿಯಲಿದೆ ಎಂದು ತಿಳಿಸಿದರು.

ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ ನೀಡಿರುವದಕ್ಕೆ ಅವರು ಬಿಜೆಪಿಯ ಹಿರಿಯ ಧುರೀಣರಿಗೆ ಅಭಿನಂದಿಸಿದರು.

ಮುನು ಮುತ್ತಪ್ಪ ಮಾತನಾಡಿ, ಜಿಲ್ಲೆಯ ಇತರೆ ರಾಜಕೀಯ ಪಕ್ಷಗಳು ಜಿಲ್ಲೆಯ ಅಭಿವೃದ್ಧಿಗಾಗಿ ಹೋರಾಟ ನಡೆಸುವುದಾಗಿ ಪತ್ರಿಕಾ ಹೇಳಿಕೆ ನೀಡುತ್ತವೆ. ಆದರೆ ಹೋರಾಟದ ವೇಳೆ ಕಣ್ಮರೆಯಾಗುತ್ತಿದ್ದು, ಅವರಿಗೆ ಹೋರಾಟದ ಅರಿವಿಲ್ಲ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಪಕ್ಷದ ಕೆಲವರು ಜಿಲ್ಲೆಯ ಶಾಸಕರು ರಾಜೀನಾಮೆ ನೀಡಬೇಕೆಂದು ಪತ್ರಿಕಾ ಹೇಳಿಕೆ ನೀಡಿರುವುದನ್ನು ಅವರು ಖಂಡಿಸಿದರು.

ಜಿಲ್ಲೆಯ ಪರಿಸರವಾದಿಗಳು ಹಣದಾಸೆಯಿಂದ ಜಿಲ್ಲೆಗೆ ಮಾರಕವಾಗುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಬೆಂಬಲವಾಗಿ ನಿಂತರೆ ಅವರ ವಿರುದ್ಧ ಹೋರಾಟ ನಡೆಸುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಜನತ ಬಜಾರ್ನ ಅಧ್ಯಕ್ಷ ರವಿ ಬಸಪ್ಪ ಹಾಜರಿದ್ದರು.

ಬಂದ್: ಮಾತಿನ ಚಕಮಕಿ
ವಿರಾಜಪೇಟೆ: ದೊಡ್ಡಟ್ಟಿ ಚೌಕಿ ಹಾಗೂ ಮೂರ್ನಾಡು ರಸ್ತೆ ಜಂಕ್ಷನ್ನಲ್ಲಿ ಯಾವುದೇ ಖಾಸಗಿ ವಾಹನ, ಜೀಪು, ದ್ವಿಚಕ್ರ ವಾಹನಗಳು ಸಂಚರಿಸದಂತೆ ಕಾರ್ಯಕರ್ತರು ತಡೆಯುತ್ತಿದ್ದರು.

ಕಾಂಗ್ರೆಸ್ ಕಾರ್ಯಕರ್ತ ರವಿ ಎಂಬುವರ ದ್ವಿಚಕ್ರ ವಾಹನವನ್ನು ಮೂರ್ನಾಡು ರಸ್ತೆ ಜಂಕ್ಷನ್ನಿಂದ ಮುಂದೆ ಹೋಗದಂತೆ ತಡೆದಾಗ ವಾಗ್ವಾದ ಆರಂಭವಾಯಿತು. ನಗರ ಪೊಲೀಸ್ ಠಾಣೆಯ ಸಬ್ ಇನ್ಪೆಕ್ಟರ್ ಅನೂಪ್ ಮಾದಪ್ಪ ಸ್ಥಳಕ್ಕೆ ಬಂದು ವಾತಾವರಣ ತಿಳಿಗೊಳಿಸಿ ದ್ವಿಚಕ್ರ ವಾಹನವನ್ನು ಮುಂದೆ ಚಲಿಸಲು ಅವಕಾಶ ನೀಡಿದರು. ಪ್ರಯಾಣಿಕರನ್ನು ಸಾಗಿಸುತ್ತಿದ್ದ ಆಟೋ ರಿಕ್ಷಾ, ಜೀಪುಗಳನ್ನೂ ತಡೆಯಲಾಯಿತು.

ವಾಹನ ತಡೆ, ರಸ್ತೆತಡೆಯ ಸಣ್ಣ ಪುಟ್ಟ ವಾಗ್ವಾದ ಹೊರತು ಪಡಿಸಿದರೆ ಅಹಿತಕರ ಘಟನೆಗಳು ನಡೆಯಲಿಲ್ಲ.
ಸಹಕಾರ ಬ್ಯಾಂಕ್ ಸೇರಿದಂತೆ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ಗಳೂ ಕಾರ್ಯ ನಿರ್ವಹಿಸಲಿಲ್ಲ. ಬುಧವಾರವೇ ರಜೆ ಘೋಷಿಸಿದ್ದರಿಂದ ಇಲ್ಲಿಯ ಶಾಲೆ-ಕಾಲೇಜುಗಳು ಮುಚ್ಚಿದ್ದವು. ಎಲ್ಲ ಸರ್ಕಾರಿ ಕಚೇರಿಗಳೂ ಮುಚ್ಚಿದ್ದವು.

ಖಾಸಗಿ ಬಸ್ ನಿಲ್ದಾಣ ಹಾಗೂ ರಾಜ್ಯ ಸಾರಿಗೆ ಸಂಸ್ಥೆಯ ನಿಲ್ದಾಣದಿಂದ ಯಾವುದೇ ಬಸ್ಗಳು ಬೇರೆ ಊರುಗಳಿಗೆ ಹೊರಡಲಿಲ್ಲ. ಬಸ್ ನೌಕರರು ತಿಂಡಿ, ಆಹಾರ ಪದಾರ್ಥಗಳಿಗಾಗಿ ಪರದಾಡಬೇಕಾಯಿತು. ಆಟೋ ರಿಕ್ಷಾಗಳು, ಟ್ಯಾಕ್ಷಿಗಳು ಸಂಚರಿಸದೇ ಬಂದ್ಗೆ ಬೆಂಬಲ ನೀಡಿದವು.

ದೆಹಲಿಯ ಕೇಂದ್ರ ವಕೀಲರ ಸೂಚನೆ ಮೇರೆಗೆ ವಿರಾಜಪೇಟೆ ಸಮುಚ್ಚಯ ನ್ಯಾಯಾಲಯದಲ್ಲಿ ಬುಧವಾರದಿಂದಲೇ ಮುಷ್ಕರ ನಡೆಯುತ್ತಿದ್ದು, ಆ ಮುಷ್ಕರ ಗುರುವಾರವೂ ಮುಂದುವರಿಯಿತು.
ಬೆಳಗಿನಿಂದಲೇ ಮಳೆ ವಿರಾಮ ನೀಡಿದ್ದರಿಂದ ಪಕ್ಷದ ಕಾರ್ಯಕರ್ತರು ಬಂದ್ ಸಂಘಟಿಸಲು ಅನುಕೂಲವಾಗಿತ್ತು. ಬಿಜೆಪಿ, ಭಜರಂಗ ದಳ, ಹಿಂದೂ ಜಾಗರಣಾ ವೇದಿಕೆ ಸಂಘಟನೆಗಳ ಕಾರ್ಯಕರ್ತರು ಬೆಳಗಿನ 6ರಿಂದಲೇ ಯಾವುದೇ ಅಂಗಡಿ, ಹೋಟೆಲ್ ತೆರೆಯದಂತೆ ಎಚ್ಚರ ವಹಿಸಿದ್ದವು.

ದೊಡ್ಡಟ್ಟಿ ಚೌಕಿ ಬಳಿ 7ಗಂಟೆ ವೇಳೆಗೆ ತೆರೆದ ಹೋಟೆಲ್ ಒಂದನ್ನು ಪಕ್ಷದ ಕಾರ್ಯಕರ್ತರು ಒತ್ತಾಯಪೂರ್ವಕವಾಗಿ ಮುಚ್ಚಿಸಿದರು. ಸರ್ಕಲ್ ಇನ್ಸ್ಪೆಕ್ಟರ್ ಗಂಗಾಧರ ಸ್ವಾಮಿ, ನಗರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಅನೂಪ್ ಮಾದಪ್ಪ ಹಾಗೂ ಸಿಬ್ಬಂದಿ ಬಂದೋಬಸ್ತ್ನ ಉಸ್ತುವಾರಿ ವಹಿಸಿದ್ದರು. ವಿರಾಜಪೇಟೆ ತಾಲ್ಲೂಕಿನಾದ್ಯಂತ ಬಂದ್ ಶಾಂತಿಯುತವಾಗಿತ್ತು ಎಂದು ಡಿವೈಎಸ್ಪಿ ಅಣ್ಣಪ್ಪ ನಾಯಕ್ ತಿಳಿಸಿದರು.

ಪರಿಸರವಾದಿಗಳ ಪ್ರತಿಕೃತಿ ದಹನ
ನಾಪೋಕ್ಲು: ಕೊಡಗು ಬಂದ್ ಕರೆಗೆ ನಾಪೋಕ್ಲು ಪಟ್ಟಣ ಪೂರ್ಣವಾಗಿ ಸ್ಪಂದಿಸಿತು.
ಮಧ್ಯಾಹ್ನ ನಡೆದ ಪ್ರತಿಭಟನೆಯಲ್ಲಿ ಡೋಂಗಿ ಪರಿಸರವಾದಿಗಳ ಪ್ರತಿಕೃತಿ ದಹಿಸಲಾಯಿತು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಮಾತನಾಡಿ ಕೊಡಗು ಜಿಲ್ಲೆಯ ಪ್ರದೇಶಗಳನ್ನು ಯುನೆಸ್ಕೋ ಸಂಸ್ಥೆ ವಿಶ್ವಪಾರಂಪರಿಕ ತಾಣ ಎಂದು ಘೋಷಿಸಿರುವುದರಿಂದ ಜಿಲ್ಲೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಲಿದೆ. ಡೋಂಗಿ ಪರಿಸರವಾದಿಗಳ ಹುನ್ನಾರದಿಂದ ಕೊಡಗಿನ ಅರಣ್ಯ ಪರಿಸರಕ್ಕೆ ಧಕ್ಕೆಯಾಗಲಿದೆ.

ರಸ್ತೆ ಅಭಿವೃದ್ಧಿ, ಆದಿವಾಸಿಗಳ ಮೂಲಭೂತ ಸೌಕರ್ಯಗಳಿಗೂ ಯುನೆಸ್ಕೊ ಅನುಮತಿ ಪಡೆಯಬೇಕಾದ ಸಂಕಷ್ಟ ಎದುರಾಗಲಿದೆ ಎಂದರು. ಕೇಟೋಳಿರ ಹರೀಶ್ ಪೂವಯ್ಯ, ಪಾಡಿಯಮ್ಮಂಡ ಮನು ಮಹೇಶ್, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ವಾಹನ ಮಾಲೀಕರ ಸಂಘದ ಅಧ್ಯಕ್ಷ ಅರೆಯಡ ಅಶೋಕ, ಅಪ್ಪನೆರವಂಡ ಕಿರಣ್ಕಾರ್ಯಪ್ಪ ಮತ್ತಿತರರು ಇದ್ದರು.

ವ್ಯಾಪಾರ-ಸಂಚಾರ ಸ್ಥಗಿತ
ಸಿದ್ದಾಪುರ: ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಕೊಡಗು ಜಿಲ್ಲೆಯ ಹಲವು ಪ್ರದೇಶಗಳನ್ನು ಸೇರ್ಪಡೆ ಮಾಡಿರುವುದರ ವಿರುದ್ಧ ಕರೆ ನೀಡಿರುವ ಬಂದ್ಗೆ ಸಿದ್ದಾಪುರ, ಪಾಲಿಬೆಟ್ಟ, ಅಮ್ಮತ್ತಿ, ಮರಗೋಡು, ನೆಲ್ಯಹುದಿಕೇರಿ ಹಾಗೂ ಚೆಟ್ಟಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಂದ್ ಯಶಸ್ವಿಯಾಯಿತು.

ನಂದಿನಿ ಹಾಲಿನ ಮಳಿಗೆ, ಪತ್ರಿಕಾ ವಿತರಕರು, ಒಂದೆರಡು ಔಷಧ ಮಳಿಗೆಗಳನ್ನು ಹೊರತುಪಡಿಸದರೆ ಸಾರ್ವಜನಿಕ ಸಂಚಾರ ವ್ಯವಸ್ಥೆ ಕೂಡ ಸಂಪೂರ್ಣ ಸ್ತಬ್ಧವಾಗಿತ್ತು. ಜಿಲ್ಲೆಯ ಯಶಸ್ವಿ ಬಂದ್ ವಿಶ್ವ ಪರಿಸರ ತಾಣ ಪಟ್ಟಿಗೆ ಜಿಲ್ಲೆಯನ್ನು ಸೇರ್ಪಡೆಗೊಳಿಸಿದ ಆದೇಶದ ವಿರುದ್ಧ ವ್ಯಕ್ತಗೊಂಡಿರುವ ಜನಧ್ವನಿಯಾಗಿದೆ. ಕೇಂದ್ರ ಸರ್ಕಾರ ಆದೇಶದ ಕುರಿತು ಮರುಪರಿಶೀಲನೆ ಮಾಡಬೇಕು ಎಂದು ಸಿಪಿಐ(ಎಂ)ನ ಜಿಲ್ಲಾ ಸಮಿತಿ ಸದಸ್ಯ ಹೊಸಮನೆ ವಸಂತ್ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಪಾರಂಪರಿಕ ತಾಣ ಪಟ್ಟಕ್ಕೆ ವಿರೋಧ
ಶನಿವಾರಸಂತೆ: ಬಿಜೆಪಿ ಕರೆ ನೀಡಿದ್ದ ಜಿಲ್ಲಾ ಬಂದ್ ಕರೆಗೆ ಶನಿವಾರಸಂತೆಯಲ್ಲಿ ಸಂಪೂರ್ಣ ಸ್ಪಂದನೆ ವ್ಯಕ್ತವಾಯಿತು.

ಸಮೀಪದ ಕೊಡ್ಲಿಪೇಟೆ ಪಟ್ಟಣದಲ್ಲೂ ಬಂದ್ ಸಂಪೂರ್ಣ ಯಶಸ್ವಿಯಾಯಿತು. ಹೋಟೆಲ್, ಅಂಗಡಿ-ಮುಂಗಟ್ಟುಗಳು ಹಾಗೂ ಶಾಲಾ-ಕಾಲೇಜುಗಳು ಮುಚ್ಚಲ್ಪಟ್ಟಿದ್ದವು. ಖಾಸಗಿ ಬಸ್ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಪ್ರವಾಸಿಗರಿಗೆ ತಟ್ಟಿದ ಬಂದ್ ಬಿಸಿ
ಕುಶಾಲನಗರ: ಕುಶಾಲನಗರ, ಸುಂಟಿಕೊಪ್ಪ ಪಟ್ಟಣ ವ್ಯಾಪ್ತಿಯಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಯಿತು. ಬೆಳಿಗ್ಗೆ 6 ರಿಂದ ಸಂಜೆ 6 ರ ತನಕ ನಡೆದ ಬಂದ್ ಸಂದರ್ಭ ಕುಶಾಲನಗರ, ಸುಂಟಿಕೊಪ್ಪ ಪಟ್ಟಣಗಳಲ್ಲಿ ವರ್ತಕರು ಅಂಗಡಿ - ಮುಂಗಟ್ಟುಗಳನ್ನು ಮುಚ್ಚಿದ್ದರು. ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಪ್ರವಾಸಿಗರಿಗೆ ಬಂದ್ ಬಿಸಿ ತಟ್ಟಿತು.

ಮೈಸೂರು - ಕೊಡಗು ಜಿಲ್ಲೆಗಳ ಗಡಿಭಾಗದಲ್ಲಿ ಕಾವೇರಿ ಸೇತುವೆ ಬಳಿ ಅರಣ್ಯ ತಪಾಸಣಾ ಗೇಟ್ ಬಳಿ ಬಿಜೆಪಿ ಕಾರ್ಯಕರ್ತರು ವಾಹನಗಳನ್ನು ತಡೆದ ಪರಿಣಾಮ ಬಹುಹೊತ್ತಿನ ತನಕ ರಸ್ತೆಯಲ್ಲಿ ವಾಹನಗಳು ಸ್ಥಗಿತಗೊಂಡಿದ್ದವು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಂ.ಎನ್.ಕುಮಾರಪ್ಪ, ಜಿ.ಪಂ.ಸದಸ್ಯ ಬಿ.ಬಿ.ಭಾರತೀಶ್, ಪ.ಪಂ.ಸದಸ್ಯರಾದ ಎಂ.ವಿ.ನಾರಾಯಣ, ವಿ.ಡಿ.ಪುಂಡರೀಕಾಕ್ಷ, ನಗರ ಬಿಜೆಪಿ ಅಧ್ಯಕ್ಷ ಎನ್.ಎನ್.ಚರಣ್, ಮತ್ತಿತರರು ಪಾಲ್ಗೊಂಡಿದ್ದರು.

`ಕೊಡಗಿಗೆ ಮಾರಕ ಯೋಜನೆ: ಕಾಂಗ್ರೆಸ್ ಕೊಡುಗೆ~

ಮಡಿಕೇರಿ: ಕೊಡಗಿಗೆ ಮಾರಕವಾಗಿ ಪರಿಣಮಿಸುತ್ತಿರುವ ವಿವಿಧ ಯೋಜನೆಗಳು ಕಾಂಗ್ರೆಸ್ಸಿಗರ ಕೊಡುಗೆ ಎಂದು ಬಿಜೆಪಿಯ ಎಂ.ಬಿ.ದೇವಯ್ಯ, ತಳೂರು ಕಿಶೋರ್ ಕುಮಾರ್, ಎನ್.ಎ.ರವಿಬಸಪ್ಪ ಹಾಗೂ ಮನು ಮುತ್ತಪ್ಪ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ರಾಜ್ಯದ ಕೆಲವು ಅಭಯಾರಣ್ಯಗಳನ್ನು ಸೇರ್ಪಡೆಗೊಳಿಸುವ ಪ್ರಸ್ತಾವನೆಯನ್ನು ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಯುನೆಸ್ಕೊಗೆ ಕಳುಹಿಸಲಾಗಿತ್ತು ಎಂಬ ಕಾಂಗ್ರೆಸ್ಸಿಗರ ಹೇಳಿಕೆಗೆ ಸೂಕ್ತ ದಾಖಲೆ ನೀಡಲಿ ಎಂದು ಅವರು ಆಗ್ರಹಿಸಿದ್ದಾರೆ.

ವಾಜಪೇಯಿ ಸರ್ಕಾರವೇ ಈ ಪ್ರಸ್ತಾವನೆ ಕಳುಹಿಸಿದ್ದೇ ಆದ್ದಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನೇತೃತ್ವದ ರಾಜ್ಯ ಸರ್ಕಾರ ಈ ಬಗ್ಗೆ ವಿರೋಧ ವ್ಯಕ್ತಪಡಿಸಲಿಲ್ಲವೇಕೆ? 2004 ಕ್ಕೆ ಈ ಪ್ರಸ್ತಾವನೆ ಸಲ್ಲಿಸಲ್ಪಟ್ಟಿದ್ದೇ ಆದಲ್ಲಿ ಅದು 2012 ರಲ್ಲಿ ಜಾರಿಯಾಗುವುದರ ಹಿಂದೆ ಯಾರ ಕುಮ್ಮಕ್ಕಿದೆ ಎಂದು ಪ್ರಶ್ನಿಸಿದ್ದಾರೆ.

ಎಸ್. ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿಯೇ ಕೊಡಗಿನ 3 ವನ್ಯಧಾಮಗಳಾದ ಬ್ರಹ್ಮಗಿರಿ, ಪುಷ್ಪಗಿರಿ, ತಲಕಾವೇರಿಯನ್ನು ಸೇರಿಸಿ ಗ್ರೇಟರ್ ತಲಕಾವೇರಿ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಈ ಯೋಜನೆಯನ್ನು ವಿರೋಧಿಸಿ, ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿ, ಗ್ರೇಟರ್ ತಲಕಾವರಿ ಯೋಜನೆ ಜಾರಿಯಾಗುವುದನ್ನು ತಪ್ಪಿಸಿತು ಎಂದು ತಿಳಿಸಿದ್ದಾರೆ.

ಕೊಡಗಿಗೆ ಮಾರಕವಾಗುವ ಗ್ರೇಟರ್ ತಲಕಾವೇರಿ, ವಿಶ್ವಪಾರಂಪರಿಕ ತಾಣ, ಪರಿಸರ ಸೂಕ್ಷ್ಮ ವಲಯ ಮುಂತಾದ ಜನವಿರೋಧಿ ಯೋಜನೆಗಳನ್ನು ಹುಟ್ಟುಹಾಕಿದವರೇ ಕಾಂಗ್ರೆಸ್ಸಿಗರು ಎಂದು ಆರೋಪಿಸಿದ್ದಾರೆ. ಪಶ್ಚಿಮ ಘಟ್ಟಗಳ ರಕ್ಷಣೆಗಾಗಿ ಪ್ರೊ. ಮಾಧವ ಗಾಡ್ಗಿಳ್ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯು ಈ ವ್ಯಾಪ್ತಿಯಲ್ಲಿ ಕಾಫಿ, ಟೀ, ರಬ್ಬರ್, ಏಲಕ್ಕಿ ಮುಂತಾದ ವಾಣಿಜ್ಯ ಬೆಳೆಗಳನ್ನು ಬೆಳೆಯಬಾರದೆಂದು ಶಿಫಾರಸು ಮಾಡಿದೆ. ಆದರೂ ಈ ಬಗ್ಗೆ ಚಕಾರ ಎತ್ತದೇ ಇರುವುದನ್ನು ಗಮನಿಸಿದರೆ ಕಾಂಗ್ರೆಸ್ಸಿಗರು ಕೊಡಗಿನ ಹಿತಾಸಕ್ತಿ ಬಲಿಕೊಡಲು ವಿದೇಶಿ ಸಂಸ್ಥೆಗಳೊಂದಿಗೆ ಶಾಮೀಲಾಗಿರುವುದು ಕಂಡು ಬರುತ್ತದೆ ಎಂದು ಆರೋಪಿಸಿದ್ದಾರೆ.

ಕೊಡಗು-ಕೇರಳ ಗಡಿಯಲ್ಲಿ ರಸ್ತೆ ತಡೆ

ವಿರಾಜಪೇಟೆ: ಬಿಜೆಪಿ ಕಾರ್ಯಕರ್ತರು ಗುರುವಾರ ಬೆಳಗಿನ 6ಗಂಟೆಯಿಂದಲೇ ಪೆರುಂಬಾಡಿ ಚೆಕ್ಪೋಸ್ಟ್ನ ಗೇಟ್ ಬಂದ್ ಮಾಡಿ ರಸ್ತೆ ತಡೆ ನಡೆಸಿದರು. ಇದರಿಂದ ಕೇರಳದ ಕಡೆ ಹಾಗೂ ವಿರಾಜಪೇಟೆ ಕಡೆಯಿಂದ ಬಂದ ನೂರಾರು ವಾಹನಗಳು ಗೇಟ್ ಬಳಿ ಸಾಲುಗಟ್ಟಿ ನಿಂತಿದ್ದವು. ಬೆಳಿಗ್ಗೆ 11.30ಕ್ಕೆ ಕೇರಳದ ತಲ್ಲಿಚೇರಿಯಿಂದ ಪ್ರಯಾಣಿಕರನ್ನು ತಂಬಿಸಿಕೊಂಡು ಬೆಂಗಳೂರಿಗೆ ತೆರಳಲು ಗೇಟ್ನ ಬಳಿ ಬಂದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸನ್ನೂ ಕಾರ್ಯಕರ್ತರು ಹಿಂದಕ್ಕೆ ಕಳಿಸಿದರು. ಇದೇ ರೀತಿ ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು, ಖಾಸಗಿ ಬಸ್ಸುಗಳು, ವಾಹನಗಳೆಲ್ಲವೂ ಹಿಂದಕ್ಕೆ ತೆರಳಿದವು.

ಬೆಂಗಳೂರು, ಆಂಧ್ರ, ಮೈಸೂರು, ಹಾಸನದಿಂದ ಬಂದ ಸರಕು ಸಾಗಾಣಿಕೆ ಲಾರಿಗಳು ಹಿಂದಕ್ಕೆ ತೆರಳದೇ ಚೆಕ್ಪೋಸ್ಟ್ ಬಳಿ ಸಂಜೆ 6ರವರೆಗೆ ಬಂದ್ ಮುಕ್ತಾಯವಾಗುವುದನ್ನೇ ಕಾಯುತ್ತಿದ್ದರು. ಅಮ್ಮತ್ತಿಯಿಂದ ಕಾರಿನಲ್ಲಿ ತಲ್ಲಿಚೇರಿಗೆ ಹೋಗಲು ಗೇಟ್ನ ಬಳಿ ಬಂದ ವರ್ತಕರನ್ನು ಚೆಕ್ಪೋಸ್ಟ್ ಬಳಿ ತಡೆದಾಗ ಕಾರ್ಯಕರ್ತರು ಹಾಗೂ ವರ್ತಕರ ನಡುವೆ ವಾಗ್ವಾದ ನಡೆಯಿತು. ನಂತರ ವರ್ತಕರು ಸರ್ಕಲ್ ಇನ್ಸ್ಪೆಕ್ಟರ್ಗೆ ದೂರು ನೀಡುವುದಾಗಿ ವಿರಾಜಪೇಟೆ ಕಡೆಗೆ ತೆರಳಿದರು.

ಚೆಕ್ಪೋಸ್ಟ್ ಬಳಿಯ ರಸ್ತೆ ತಡೆಯಲ್ಲಿ ಜಿಲ್ಲಾ ಪಂಚಾಯಿತಿಯ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಕೆ.ಕಾಂತಿ ಬೆಳ್ಳಿಯಪ್ಪ, ಪಂಚಾಯಿತಿ ಸದಸ್ಯೆ ಶಶಿಕಲಾ, ಆರ್ಎಂಸಿ ಅಧ್ಯಕ್ಷ ಪಿ.ರಘು ನಾಣಯ್ಯ, ಉಪಾಧ್ಯಕ್ಷ ಶಶಿ ಸುಬ್ರಮಣಿ, ಆರ್ಎಂಸಿ ಸದಸ್ಯ ಅಚ್ಚಪಂಡ ಮಹೇಶ್, ಎಂ.ಕಾವೇರಪ್ಪ, ಸ್ಪೀಕರ್ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ತಾಲ್ಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುವಿನ್ ಗಣಪತಿ, ಜೋಕಿಂ, ಸಾಯಿನಾಥ್, ಲವ, ಪ್ರಭು, ಬಾಬು ವಿಠಲ ಸೇರಿದಂತೆ 50ಕ್ಕೂ ಅಧಿಕ ಕಾರ್ಯಕರ್ತರು ಸೇರಿದ್ದರು. ಚೆಕ್ಪೋಸ್ಟ್ನಲ್ಲಿಯೂ ಸಮುಚ್ಚಯ ಪೊಲೀಸ್ ಠಾಣೆಗಳಿಂದ ವಿಶೇಷ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.