ಪಾಲಹಳ್ಳಿಯಲ್ಲಿ ಪ್ಯಾಸೆಂಜರ್ ನಿಲುಗಡೆ

ಸೋಮವಾರ, ಮೇ 27, 2019
29 °C

ಪಾಲಹಳ್ಳಿಯಲ್ಲಿ ಪ್ಯಾಸೆಂಜರ್ ನಿಲುಗಡೆ

Published:
Updated:

ನವದೆಹಲಿ:  ಬೆಂಗಳೂರು- ಮೈಸೂರು ನಡುವೆ ಸಂಚರಿಸುವ ಪ್ಯಾಸೆಂಜರ್ ರೈಲುಗಳನ್ನು ಶ್ರೀರಂಗಪಟ್ಟಣ ತಾಲ್ಲೂ ಕಿನ ಪಾಲಹಳ್ಳಿಯಲ್ಲಿ ನಿಲ್ಲಿಸಲು ರೈಲ್ವೆ ಮಂಡಳಿ ನಿರ್ಧರಿಸಿದೆ.ರೈಲ್ವೆ ಮಂಡಳಿ ಈ ಸಂಬಂಧ ಸೋಮವಾರ ನಿರ್ಧಾರ ಕೈಗೊಂಡಿದೆ. ವಿದ್ಯಾರ್ಥಿಗಳು. ರೈತರು ಮತ್ತಿತರರಿಗೆ ಅನುಕೂಲ  ಮಾಡಿಕೊಡುವ ಉದ್ದೇಶದಿಂದ ಪ್ಯಾಸೆಂಜರ್ ರೈಲುಗಳನ್ನು ಪಾಲಹಳ್ಳಿಯಲ್ಲಿ ನಿಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುನಿಯಪ್ಪ ತಿಳಿಸಿದರು.

ಪಾಲಹಳ್ಳಿಯಲ್ಲಿ ಪ್ಯಾಸೆಂಜರ್ ರೈಲುಗಳನ್ನು ಕೆಲವು ವರ್ಷಗಳ ಹಿಂದೆ ನಿಲ್ಲಿಸಲಾಗುತಿತ್ತು. ಅನಂತರ ಇದನ್ನು ಕೈಬಿಡಲಾಗಿತ್ತು.

ಇದನ್ನು ಪ್ರತಿಭಟಿಸಿ ತಾಲೂಕು ಪಂಚಾಯತಿ ಮಾಜಿ ಸದಸ್ಯ ಶಂಕರೇಗೌಡ, ದೇವರಾಜ್, ನಾಗರಾಜ್, ವಿ.ನಾರಾಯಣ ಮತ್ತು  ಗ್ರಾಮಸ್ಥರು ಸತತ ಪ್ರತಿಭಟನೆ ನಡೆಸಿದಲ್ಲದೆ, ರೈಲ್ವೆ ಸಚಿವ ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry