ಪಿರಿಯಾಪಟ್ಟಣ: ಪಟ್ಟಣದ ಪೊಲೀಸ್ ಇಲಾಖೆಗೆ ಸೇರಿದ ವಸತಿ ಗೃಹಗಳ ದುರಸ್ತಿ ಕಾರ್ಯ ಕೈಗೊಳ್ಳದ ಕಾರಣ ಪಾಳು ಬಿದ್ದಿವೆ.

ಪಟ್ಟಣದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬಳಿ ಬಿ.ಎಂ. ರಸ್ತೆಗೆ ಹೊಂದಿಕೊಂಡಿರುವ ಪೊಲೀಸ್ ವಸತಿ ಗೃಹಗಳು 1973ರಲ್ಲಿ ನಿರ್ಮಿಸ ಲಾಗಿದೆ. ಈ ಹಿಂದೆ ಪೊಲೀಸ್ ಠಾಣೆಯಾಗಿ ಕಟ್ಟಡಲಾಗಿದ್ದ ಈ ಕಟ್ಟಡವನ್ನು ಕೆ.ಎಂ. ಶಿವಶಂಕರ್ ನಿವೇಶನ ದಾನ ನೀಡಿದ ನಂತರ ನೂತನ ಪೊಲೀಸ್ ಠಾಣೆ ನಿರ್ಮಿಸಿ ಅಲ್ಲಿಗೆ ಠಾಣೆ ಸ್ಥಳಾಂತರಿಸಲಾ ಯಿತು. ನಂತರ ಈ ಕಟ್ಟಡವನ್ನು ಆರು ವಸತಿ ಗೃಹಗಳಾಗಿ ಮಾರ್ಪಡಿಸಲಾಯಿತು. ಹಳೆಯ ಪೊಲೀಸ್ ಠಾಣೆ ಕಟ್ಟಡದಲ್ಲಿ ಕೆಲವು ವರ್ಷಗಳ ಕಾಲ ಇನ್ಸ್ಪೆಪೆಕ್ಟರ್ ಸೇರಿದಂತೆ ಇಲಾಖೆಯ ಹಲವರು ವಾಸವಾಗಿದ್ದರು. ಈಚೆಗೆ ಆರು ವಸತಿ ಗೃಹಗಳೂ ಪಾಳು ಬಿದ್ದಿದ್ದು, ರಾತ್ರಿ ವೇಳೆ ಅನೈತಿಕ ಚಟುವಟಿಕೆಯ ತಾಣವಾಗಿದೆ.

ಪಟ್ಟಣದ ಪೊಲೀಸ್ ಸಿಬ್ಬಂದಿಗೆ ವಸತಿ ಗೃಹಗಳ ಕೊರತೆಯಿದೆ. ಪ್ರಸ್ತುತ 46 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಠಾಣೆಯಲ್ಲಿ ಕೇವಲ 17 ಸಿಬ್ಬಂದಿಗಳಿಗೆ ಮಾತ್ರ ವಸತಿ ಗೃಹದ ಸೌಲಭ್ಯವಿದೆ. ಈಗ ವಾಸವಿರುರುವ ವಸತಿ ಗೃಹಗಳೂ ಕಾಲಕಾಲಕ್ಕೆ ಸೂಕ್ತ ನಿರ್ವಹಣೆಯಿಲ್ಲದೆ ದುಃಸ್ಥಿತಿ ತಲುಪಿವೆ. ತಕ್ಷಣ ಸೂಕ್ತ ರಿಪೇರಿ ಸೌಲಭ್ಯ ಕಲ್ಪಿಸದಿದ್ದರೆ ಇರುವ ವಸತಿಗೃಹಗಳೂ ಪಾಳು ಬೀಳುವುದು ಖಚಿತ.

ತಾಲ್ಲೂಕಿನ ಗ್ರಾಮೀಣ ಪೊಲೀಸ್ ಠಾಣೆಗಳಾದ ಬೆಟ್ಟದಪುರ, ಬೈಲುಕುಪ್ಪೆ ಗ್ರಾಮಗಳಲ್ಲಿ ನೂತನ ವಸತಿ ಗೃಹ ನಿರ್ಮಿಸಲಾಗಿದೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿರುವ ಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿಗಳು ದುಬಾರಿ ಬಾಡಿಗೆ ತೆತ್ತು ವಾಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನೂತನ ವಸತಿ ಗೃಹಗಳನ್ನು ನಿರ್ಮಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದು, ಕೇವಲ ಭರವಸೆಯಾಗಿಯೇ ಉಳಿದಿದೆ. ವಸತಿ ಗೃಹ ನಿರ್ಮಿಸಲು ಸಾಕಷ್ಟು ನಿವೇಶನ ಲಭ್ಯವಿದ್ದು, ಕೂಡಲೇ ಪೊಲೀಸ್ ಸಿಬ್ಬಂದಿಗೆ ವಸತಿಸೌಕರ್ಯ ಕಲ್ಪಿಸಲು ಸರ್ಕಾರ ಮುಂದಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.