ಗುರುವಾರ , ಮೇ 13, 2021
22 °C

`ಪಾಶ್ಚಿಮಾತ್ಯ ಸಂಸ್ಕೃತಿಯಿಂದ ವಿನಾಶ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ:  ಮಧ್ಯಪ್ರಾಚ್ಯದಿಂದ ಆಗಮಿಸಿದ ಆರ್ಯರರಲ್ಲಿ ಶಿವ ಸಂಸ್ಕೃತಿಯಿಲ್ಲ,  ಮೂಲತಃ ಭಾರತೀಯರಾಗಿರುವ ಜಂಗಮರು ಧಾರ್ಮಿಕತೆಯಲ್ಲಿ ಮುಂದುವರಿದಿದ್ದಾರೆ ಎಂದು ಸೂಡಿಯ ಜುಕ್ತಿಹಿರೇಮಠದ ಕೊಟ್ಟೂರ ಬಸವರೇಶ್ವರ ಶಿವಾಚಾರ್ಯರು ಹೇಳಿದರು.ನಗರದ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಭಾನುವಾರ ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾದ ಆಶ್ರಯದಲ್ಲಿ ನಡೆದ ಜಂಗಮರ ವಧು-ವರರ ಸಮ್ಮೇಳನದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸಾಮಾಜಿಕ ವ್ಯವಸ್ಥೆ ಸದೃಢವಾಗಬೇಕಿದೆ. ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಣೆ ಮಾಡುವದರಿಂದ ದೇಶದ ಸಂಸ್ಕೃತಿ ಹಾಳಾಗುತ್ತಿದೆ.  ಅರ್ಥಿಕ ಸ್ಥಿತಿವಂತರು ಮತೀಯ ಭಾವನೆ ತೊರೆದು ಆದರ್ಶ ಗುಣ ಹೊಂದಬೇಕು. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಿದಂತೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದರು.ಅಡ್ನೂರಿನ ಪಂಚಾಕ್ಷರ ಶಿವಾಚಾರ್ಯ ಮಾತನಾಡಿ, ಜಂಗಮ ಕ್ಷೇಮಾಭಿವೃದ್ಧಿ ಸಂಘಟನೆಯು ಉತ್ತಮ ಕಾರ್ಯ ಮಾಡುತ್ತಿದೆ. ವಧು-ವರರಲ್ಲಿ ಅರ್ಥಿಕ, ಶಿಕ್ಷಣ ಸಮಾನತೆ ಹೋಗಲಾಡಿಸಬೇಕು. ಆಗ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.ಸಮಾಜದ ಹಿರಿಯರಾದ ಬಸವಯ್ಯಶಾಸ್ತ್ರಿ ಹಿರೇಮಠ ಮಾತ ನಾಡಿ, ಆರ್ಯರು ಮತ್ತು ಲಿಂಗಾ ಯತರ ದಬ್ಬಾಳಿಕೆಯಿಂದ ಜಂಗಮರ ಸಂಖ್ಯೆ ಕಡಿಮೆಯಾಗಿದೆ. ದೇಶದ ತುಂಬ ಜಂಗಮರಿದ್ದಾರೆ. ಹಿಮಾಲಯ, ಮಧ್ಯಪ್ರದೇಶ ಇತರೆ ರಾಜ್ಯಗಳಲ್ಲಿ ಮಠಗಳಿವೆ. ಇತರೆ ಸಮಾಜಗಳು ನಮ್ಮನ್ನು ಕಡೆಗಣಿಸುತ್ತಿವೆ. ಸಂಘಟನೆ ಮೂಲಕ ಜಂಗಮರು ಒಂದಾಗಬೇಕಿದೆ ಎಂದರು.ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಜಿ.ಎಸ್.ಗಡ್ಡದೇವರ ಮಠ, ಜಂಗಮರು ಜಂಗಮ ವೃತ್ತಿ ಹೊರತು ಪಡಿಸಿ ವಿವಿಧ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾರೆ ಎಂದರು.ಪಂಚಾಚಾರ್ಯ ಮಾಂಗಲ್ಯ ಮಂದಿರದ ಕಾರ್ಯಾಧ್ಯಕ್ಷ ಬಸಣ್ಣ ಮಲ್ಲಾಡದ, ರಾಜ್ಯ ಘಟಕದ ಅಧ್ಯಕ್ಷ ಎಸ್.ಆರ್. ನವಲಿಹಿರೇಮಠ, ಡಾ.ಕೆ.ಕೆ.ಬಿ.ಎಂ. ಬಸಯ್ಯ, ರಾಜ್ಯ ಯುವ ಅಧ್ಯಕ್ಷ ಬಂಗಾರೇಶ ಹಿರೇ ಮಠ, ಶಶಿರೇಖಾ ಶಿಗ್ಲಿಮಠ ಮಾತ ನಾಡಿದರು.ಸಿ.ಬಿ. ದೊಡ್ಡಗೌಡ್ರ, ಎಸ್.ಎಸ್.ಗುರು ಸ್ವಾಮಿಮಠ, ಬಸವರಾಜ ಶಾಬಾದಿಮಠ, ಬಾಬಣ್ಣ ಶಾಬಾದಿಮಠ, ಗಿರಿಜಾದೇವಿ ಹಿರೇ ಮಠ, ಸಂಗಮ್ಮ ಹಿರೇಮಠ, ಆರ್. ಎಫ್.ಪುರಾಣಿಕ ಮಠ ಬಸವಣ್ಣೆಯ್ಯ ಹಿರೇಮಠ,    ಆರ್.ಕೆ.ಕುಲಕರ್ಣಿ ಸಂಚಾಲಕ ಬೆಟದಯ್ಯ ಹಿರೇಮಠ, ಪ್ರಧಾನ ಕಾರ್ಯದರ್ಶಿ ರೇವಯ್ಯ ಹಿರೇಮಠ ಹಾಜರಿದ್ದರು.  ವಿ.ಕೆ ಗುರು ಮಠ ಸ್ವಾಗತಿಸಿ, ನಿರೂಪಿಸಿದರು. ವಿಜಯಕುಮಾರ ವಂದಿಸಿದರು.ಬಡ ವಿದ್ಯಾರ್ಥಿಗೆ ನೆರವು

ಗದಗ: ಜಿಲ್ಲಾ ವೀರಶೈವ ಲಿಂಗವಂತ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಮುದ್ದೇ ಬಿಹಾಳ ಅವರು  ಕಳಸಾಪೂರಿನ ಬಡ ದಲಿತ ವಿದ್ಯಾರ್ಥಿ ಲಕ್ಷ್ಮಣ ಸಣ್ಣಕ್ಕಿಗೆ  8ನೇ ತರಗತಿಗೆ ಬೇಕಾಗುವ ನೋಟ ಬುಕ್, ಬಟ್ಟೆ, ಪೆನ್ನು, ಬಸ್‌ಪಾಸ್ ಮುಂತಾದವುಗಳ ಸೌಲಭ್ಯ ನೀಡಿ ದರು. ಈ ಸಂದರ್ಭದಲ್ಲಿ ಪಿ. ವೀರಪ್ಪ.  ಕೆ.ಎ. ಲೋಹಾರ, ಎಸ್.ಎ.ಅಥ ನೂರ, ಎಸ್‌ಡಿಎಂಸಿ. ಅಧ್ಯಕ್ಷರು ಸದಸ್ಯರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.