ಬೆಂಗಳೂರು: ಪಾಸ್ಪೋರ್ಟ್ ಆಕಾಂಕ್ಷಿಗಳ ಅನುಕೂಲಕ್ಕಾಗಿ ಪ್ರಾದೇಶಿಕ ಪಾಸ್ಪೋರ್ಟ್ ಕೇಂದ್ರವು (ಆರ್ಪಿಒ) ನಗರದಲ್ಲಿ ಶನಿವಾರ ಪಾಸ್ಪೋರ್ಟ್ ಮೇಳ ಆಯೋಜಿಸಿತ್ತು.

ನಗರದ ಲಾಲ್ಬಾಗ್ ರಸ್ತೆ ಮತ್ತು ಮಾರತ್ಹಳ್ಳಿಯಲ್ಲಿರುವ ಪಾಸ್ಪೋರ್ಟ್ ಸೇವಾ ಕೇಂದ್ರಗಳಲ್ಲಿ ನಡೆದ ಮೇಳದಲ್ಲಿ 855 ಮಂದಿ ಪಾಸ್ಪೋರ್ಟ್ ಆಕಾಂಕ್ಷಿಗಳ ಅರ್ಜಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಲಾಯಿತು. 1,290 ಮಂದಿಗೆ ಪೂರ್ವಾನುಮತಿ ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದಲ್ಲಿ ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ ಪಾಸ್ಪೋರ್ಟ್ ಅರ್ಜಿಗಳ ಪ್ರಮಾಣ ಐದು ಪಟ್ಟು ಹೆಚ್ಚಾಗಿದೆ. ಪ್ರತಿನಿತ್ಯ ಸುಮಾರು 1,600 ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಲಾಗುತ್ತಿದೆ. ಸಿಬ್ಬಂದಿ ನಿಗದಿತ ಅವಧಿಗಿಂತ ಹೆಚ್ಚು ಕಾಲ ಕೆಲಸ ಮಾಡುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುತ್ತಿದ್ದಾರೆ.

ಸೇವಾ ಕೇಂದ್ರಗಳಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಂಡು ಅರ್ಜಿಗಳ ಪರಿಷ್ಕರಣೆ ಮತ್ತು ವಿಲೇವಾರಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪಾಸ್ಪೋರ್ಟ್ ಆಕಾಂಕ್ಷಿಗಳ ಅನುಕೂಲಕ್ಕಾಗಿ ಮತ್ತು ಪಾಸ್ಪೋರ್ಟ್ ವಿತರಣೆ ಸೇವೆಯು ಹೆಚ್ಚಿನ ಜನರಿಗೆ ಲಭಿಸಲಿ ಎಂಬ ಕಾರಣಕ್ಕಾಗಿ ಈ ಮೇಳ ಆಯೋಜಿಸಲಾಗಿತ್ತು. ಅರ್ಜಿದಾರರು ಆನ್ಲೈನ್ ಮೂಲಕವೇ ಮುಂಚಿತವಾಗಿ ಭೇಟಿ ಸಮಯ ನಿಗದಿಪಡಿಸಿಕೊಂಡು ಸೇವಾ ಕೇಂದ್ರಕ್ಕೆ ಬರಬಹುದು.

ಅರ್ಜಿಯ ಸ್ಥಿತಿಗತಿ ಬಗ್ಗೆ ತಿಳಿಯಲು ಡಿಡಿಡಿ.ಟ್ಟಠಿಜ್ಞಿಜಿ.ಜಟ.ಜ್ಞಿ ವೆಬ್ಸೈಟ್ ವಿಳಾಸ ಸಂಪರ್ಕಿಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.