ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದಂತೆ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ಸೇವಾನಿರತ ವೈದ್ಯರಿಗೆ ಶುಕ್ರವಾರ ನಡೆಯಬೇಕಿದ್ದ ಮರು ಕೌನ್ಸೆಲಿಂಗ್ ಅನ್ನು ಗುರುವಾರ ಏಕಾಏಕಿ ಮುಂದೂಡಲಾಗಿದೆ.

ಮರು ಕೌನ್ಸೆಲಿಂಗ್ ತಯಾರಿಸಿರುವ ಮೆರಿಟ್ ಪಟ್ಟಿಯಲ್ಲಿ ಲೋಪಗಳು ಆಗಿವೆ. ಆರು ವರ್ಷ ಸೇವಾವಧಿ ಪೂರ್ಣಗೊಳಿಸದ 27 ವೈದ್ಯರನ್ನು ಪಟ್ಟಿಯಲ್ಲಿ ಸೇರಿಸಿರುವುದು ಮತ್ತು 9 ಮಂದಿಗೆ ಸೇವಾ ಕೃಪಾಂಕ ನೀಡುವಲ್ಲಿ ವ್ಯತ್ಯಾಸಗಳು ಆಗಿವೆ ಎಂದು ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಕೌನ್ಸೆಲಿಂಗ್ ಮುಂದೂಡಲಾಗಿದೆ.

ಮುಂದೂಡಿಕೆಗೆ ಕಾರಣ ಏನು ಎಂಬುದನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ತಿಳಿಸಿಲ್ಲ. ಆದರೆ ಇದೇ 13ರಂದು ಮರು ಕೌನ್ಸೆಲಿಂಗ್ ನಡೆಯುವ ಸಾಧ್ಯತೆ ಇದೆ ಎಂದು ವಿಶ್ವವಿದ್ಯಾಲಯ ಕುಲಸಚಿವ ಡಾ.ಡಿ.ಪ್ರೇಮಕುಮಾರ್ ತಿಳಿಸಿದ್ದಾರೆ.

ಮೇ ತಿಂಗಳಲ್ಲಿ ಎರಡನೇ ಬಾರಿಗೆ ನಡೆದ ಕೌನ್ಸೆಲಿಂಗ್ಗೆ ಸಿದ್ಧಪಡಿಸಿದ್ದ ಪಟ್ಟಿಯಲ್ಲಿ 32 ಜನ ಅನರ್ಹರಿಗೂ ಸ್ಥಾನ ನೀಡಲಾಗಿದೆ ಎಂದು ಆರೋಪಿಸಿ ಕೆಲವರು ಹೈಕೋರ್ಟ್ ಮೊರೆ ಹೋದ ಪರಿಣಾಮ, ನ್ಯಾಯಾಲಯ ಮರು ಕೌನ್ಸೆಲಿಂಗ್ಗೆ ಆದೇಶ ನೀಡಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೆಲವರು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದರು. ಅಲ್ಲೂ ಮರು ಕೌನ್ಸೆಲಿಂಗ್ ನಡೆಸಬೇಕು ಎಂದು ಆದೇಶಿಸಲಾಯಿತು.

ಮರು ಕೌನ್ಸೆಲಿಂಗ್ಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇವಾನಿರತ ವೈದ್ಯರ ಪಟ್ಟಿಯನ್ನು ಸಿದ್ಧಪಡಿಸಿದೆ. ಆದರೆ ಅದರಲ್ಲಿ ಸೇವಾ ವಿಚ್ಛಿನ್ನತೆ (ಕಡಿತ) ಇರುವ ವೈದ್ಯರಿಗೂ ಸೇವಾ ಕೃಪಾಂಕ ನೀಡಿರುವುದು ಸರಿಯಲ್ಲ, ಈ ಲೋಪವನ್ನು ಸರಿಪಡಿಸಿ ಪರಿಷ್ಕೃತ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ನೊಂದ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

ನಿಯಮಾವಳಿ ಪ್ರಕಾರ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡು ಕಾಯಂ ಆದ ದಿನಾಂಕದಿಂದ ಆರು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದವರು ಮಾತ್ರ ಸೇವಾನಿರತ ಅಭ್ಯರ್ಥಿಗಳ ಕೋಟಾದಡಿ ಸ್ನಾತಕೋತ್ತರ ಕೋರ್ಸ್ಗಳ ಪ್ರವೇಶಕ್ಕೆ ಅರ್ಹರು.

ಆದರೆ ಈಗ ತಯಾರಿಸಿರುವ ಪಟ್ಟಿಯಲ್ಲಿ ಆರು ವರ್ಷಗಳ ಸೇವೆಯನ್ನು ಪೂರೈಸದ 27 ವೈದ್ಯರಿದ್ದಾರೆ. ಇವರನ್ನು ಪಟ್ಟಿಯಿಂದ ಕೈಬಿಟ್ಟು, ಪರಿಷ್ಕೃತ ಪಟ್ಟಿ ತಯಾರಿಸಬೇಕು ಎಂದು ಕೋರಿ ನೊಂದ ಅಭ್ಯರ್ಥಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.

ನಿರಂತರವಾಗಿ ಆರು ವರ್ಷಗಳ ಸೇವಾವಧಿ ಪೂರ್ಣಗೊಳಿಸದ 32 ವೈದ್ಯರನ್ನು ಪಟ್ಟಿಯಿಂದ ಕೈಬಿಟ್ಟು, ಮರು ಕೌನ್ಸೆಲಿಂಗ್ ನಡೆಸಿ ಎಂದು ನ್ಯಾಯಾಲಯ ಆದೇಶಿಸಿದೆ. ಹೀಗಾಗಿ ಆರು ವರ್ಷಗಳ ಸೇವಾವಧಿ ಪೂರೈಸದ ಎಲ್ಲರಿಗೂ ಇದು ಅನ್ವಯವಾಗುತ್ತದೆ. ಆದರೆ ಇಲಾಖೆ ಕೇವಲ 32 ಜನರನ್ನು ಕೈಬಿಟ್ಟು ಉಳಿದ ಅನರ್ಹರನ್ನು ಹಾಗೆಯೇ ಉಳಿಸಿಕೊಂಡಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪದೇ ಪದೇ ಮಾಡುವ ತಪ್ಪುಗಳಿಂದಾಗಿಯೇ 3 ಬಾರಿ ಕೌನ್ಸೆಲಿಂಗ್ ನಡೆಯುವಂತಾಗಿದೆ. ಇಷ್ಟಾದರೂ ಪಾಠ ಕಲಿಯದ ಇಲಾಖೆಯು ಮತ್ತೆ ಅದೇ ತಪ್ಪುಗಳನ್ನು ಮಾಡಿದೆ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.