ಶುಕ್ರವಾರ, ಮೇ 7, 2021
20 °C

ಪಿ.ಟಿ.ಉಷಾ ಆಗುವ ಕನಸು..

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

`ಅಂತರರಾಷ್ಟ್ರೀಯ ಓಟಗಾರ್ತಿಯರಾದ ಪಿ.ಟಿ.ಉಷಾ, ಅಶ್ವಿನಿ ನಾಚಪ್ಪ ಅವರ ಹಾಗೆ ಸಾಧನೆ ಮಾಡಬೇಕೆಂಬುದು ನನ್ನ ಜೀವನದ ಕನಸು~ಹೀಗೆ ಹೇಳುವಾಗ ರೋಮಾಂಚನಗೊಳ್ಳುವ ಓಂಪ್ರಿಯಾ ಅಪ್ಪಟ ಗ್ರಾಮೀಣ ಪ್ರತಿಭೆ. ಈಗಾಗಲೇ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದ ಓಟದ ಸ್ಪರ್ಧೆಗಳಲ್ಲಿ ಹಲವು ಬಹುಮಾನಗಳನ್ನು ಗಳಿಸಿರುವ ಓಂಪ್ರಿಯಾ ಒಂದೊಂದಾಗಿ ಸಾಧನೆ ಮೆಟ್ಟಿಲು ಏರುತ್ತಿದ್ದಾರೆ.ಸಾಧನೆಗಾಗಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಅರಸನಹಳ್ಳಿ ಗ್ರಾಮದ ಕ್ರೀಡಾ ಪಟು ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ವೇಳೆ ತಪ್ಪದೇ ತರಬೇತಿ ನಡೆಸುತ್ತಾರೆ. ಕೆ.ವಿ.ಇಂಗ್ಲಿಷ್ ಶಾಲೆಯಲ್ಲಿ ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದ ಅವರು, ಪ್ರಸ್ತುತ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ದ್ವಿತೀಯು ಪಿಯುಸಿ ಅಧ್ಯಯನ ನಡೆಸಿದ್ದಾರೆ. ಎಂಟನೇ ತರಗತಿ ಓದುತ್ತಿರುವಾಗಲೇ ಓಟದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಅವರು ಹಂತಹಂತವಾಗಿ ತರಬೇತಿ ಪಡೆದು, ಈಗ ಜಿಲ್ಲೆಯ ಪ್ರಮುಖ ಓಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.ರಾಜ್ಯಮಟ್ಟದ  ಶಾಲಾ ಓಟದ ಸ್ಪರ್ಧೆ, ದಸರಾ ಕ್ರೀಡಾಕೂಟದಲ್ಲೂ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

2010ರ ಡಿಸೆಂಬರ್‌ನಲ್ಲಿ ಹೈದರಾಬಾದನಲ್ಲಿ ನಡೆದ ಐಸಿಎಸ್‌ಇ ಪಠ್ಯಕ್ರಮದ ರಾಜ್ಯಮಟ್ಟದ 100 ಮೀಟರ್ ಮತ್ತು 200 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಕೇರಳದ ಕೊಚ್ಚಿನ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಓಟದ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆವತಿಯಿಂದ ನಡೆದ 2009-10 ಮತ್ತು 2010-11ರ ಜಿಲ್ಲಾ ಮಟ್ಟದ ಓಟದ ಸ್ಪರ್ಧೆಯಲ್ಲೂ ಅವರು ಪ್ರಥಮ ಸ್ಥಾನ ಗಳಿಸಿದ್ದಾರೆ. 2010ರಲ್ಲಿ ಚಿತ್ರದುರ್ಗದಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಅವರು ಪ್ರಥಮ ಸ್ಥಾನ ಗಳಿಸಿದ್ದಾರೆ. ಪ್ರತಿ ವರ್ಷ ಜಿಲ್ಲೆಯಲ್ಲಿ ನಡೆಯುವ ದಸರಾ ಕ್ರೀಡಾಕೂಟದಲ್ಲೂ ಅವರು ಹಲವು ಬಾರಿ ಬಹುಮಾನಗಳನ್ನು ಪಡೆದಿದ್ದಾರೆ.`ತರಬೇತಿದಾರರಾದ ಮಂಚನಬಲೆ ಕೆ. ಶ್ರೀನಿವಾಸ್ ಅವರ ಮಾರ್ಗದರ್ಶನ ಹಾಗೂ ಸಾಧನೆ ನನಗೆ ದಾರಿದೀ ವಾಯಿತು. ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಓಡುವ ತರಬೇತಿ ಪಡೆಯುತ್ತೇನೆ~ ಎಂದು ಓಂಪ್ರಿಯಾ `ಪ್ರಜಾವಾಣಿ~ಗೆ ತಿಳಿಸಿದರು.`ನಮ್ಮದು ರೈತ ಕುಟುಂಬ. ತಂದೆ ಸುಭಾಷ್‌ಬಾಬು ಮತ್ತು ತಾಯಿ ಪದ್ಮಶ್ರೀ ತುಂಬ ಪ್ರೋತ್ಸಾಹ ನೀಡುತ್ತಾರೆ. ಒಲಿಂಪಿಕ್ಸ್ ಹಂತ ಮುಟ್ಟಲು ತುಂಬ ಶ್ರಮಿಸಬೇಕು. ಕಷ್ಟಪಡಬೇಕಿದೆ ಎಂಬುದು ಗೊತ್ತು. ಆದರೂ ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಹಾದಿಯು ಕಷ್ಟದಿಂದ ಕೂಡಿದ್ದರೂ ಒಂದಿಲ್ಲೊಂದು ದಿನ ಗುರಿ ಮುಟ್ಟುತ್ತೇನೆ ಎಂಬ ಅಚಲ ವಿಶ್ವಾಸ ನನಗಿದೆ~ಎನ್ನುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.