ಭಾನುವಾರ, ಜನವರಿ 26, 2020
30 °C

ಪಿಡಬ್ಲ್ಯೂಸಿಗೆ ‘ಸುಪ್ರೀಂ’ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬ್ರಿಟನ್‌ ಮೂಲದ ಖಾಸಗಿ ಬಹು­ರಾಷ್ಟ್ರೀಯ ಲೆಕ್ಕ­ಪತ್ರ ಸಂಸ್ಥೆ ಪ್ರೈಸ್‌­ವಾಟರ್‌ ಹೌಸ್‌­ಕೂಪರ್ಸ್ (ಪಿಡ­ಬ್ಲ್ಯುಸಿ) ಮತ್ತು ಭಾರತದಲ್ಲಿ ಅದರ ಜಾಲ ಹೊಂದಿ­ರುವ ಲೆಕ್ಕ­ಪರಿ­ಶೋಧನಾ ಸಂಸ್ಥೆ­ಗಳ ಕಾರ್ಯ­ನಿರ್ವ­ಹಣೆ ಈಗ ನ್ಯಾಯಾಂಗ ವಿಮರ್ಶೆಗೆ ಒಳಗಾಗಿವೆ.

ಹಣಕಾಸು ಅವ್ಯವಹಾರಗಳು ಮತ್ತು ಅಸಮರ್ಥ ಲೆಕ್ಕ­ಪತ್ರ ದಾಖಲು ವ್ಯವ­ಹಾರ­ಗಳಲ್ಲಿ ಭಾಗಿ­ಯಾದ ಆರೋ­ಪದ ಮೇಲೆ ಈ ಎಲ್ಲ ಸಂಸ್ಥೆ­ಗಳ ವಿರುದ್ಧ ತನಿಖೆ ನಡೆಸುವಂತೆ ಕೋರಿ ಸಲ್ಲಿ­ಸಲಾಗಿರುವ ಅರ್ಜಿ­ಯೊಂದನ್ನು ವಿಚಾ­ರಣೆಗೆ ಕೈಗೆತ್ತಿ­ಕೊಳ್ಳಲು ಸುಪ್ರೀಂ­ಕೋರ್ಟ್‌ ಸಮ್ಮತಿಸಿದೆ. ಅರ್ಜಿಯಲ್ಲಿ ಪ್ರಸ್ತಾಪಿಸಿರುವ ವಿಷಯ­­ಗಳನ್ನು ಪರೀಕ್ಷಿಸುವ ಅವಶ್ಯಕತೆ ಇದೆ ಎಂದು ಮುಖ್ಯ ನ್ಯಾಯಮೂರ್ತಿ ಪಿ. ಸದಾ­­ಶಿವಂ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.ಈ ಸಂಬಂಧ ಕೇಂದ್ರ ಸರ್ಕಾರ, ಆರ್‌ಬಿಐ, ಕೇಂದ್ರೀಯ ನೇರ ತೆರಿಗೆಗಳ ಮಂಡಳಿ, ಭಾರತೀಯ ಚಾರ್ಟರ್ಡ್ ಅಕೌಂ­ಟೆಂಟ್ಸ್ ಸಂಸ್ಥೆ, ಪಿಡಬ್ಲ್ಯುಸಿ ಹಾಗೂ ಅದರ ವ್ಯಾಪಾರನಾಮವನ್ನು ಹಂಚಿ­ಕೊಂಡಿ­­­ರುವ ಲೆಕ್ಕಪರಿಶೋಧನಾ ಸಂಸ್ಥೆಗಳಿಗೆ ನೋಟಿಸ್‌ ಜಾರಿಗೊಳಿಸಿದೆ. ಈ ಸಂಸ್ಥೆಗಳು ಆದಾಯ ತೆರಿಗೆ ವಂಚನೆ, ವಿದೇಶಿ ನೇರ ಬಂಡವಾಳ (ಎಫ್‌ಡಿಐ) ನೀತಿ, ಆರ್‌ಬಿಐ, ವಿದೇಶಿ ವಿನಿಯಮ  ನಿರ್ವಹಣಾ ಕಾಯ್ದೆ (ಫೆಮಾ) ಹಾಗೂ ಇತರ ನಿಯಮ­ಗಳನ್ನು ಉಲ್ಲಂಘನೆ ಮಾಡಿ­­ರು­ವು­ದಾಗಿ ಆರೋಪಿಸಿ ಸಾರ್ವ­ಜನಿಕ ಹಿತಾಸಕ್ತಿ ದಾವೆ ಕೇಂದ್ರ (ಸಿಪಿಐಎಲ್‌) ಎಂಬ  ಎನ್‌ಜಿಒ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧಾರ­ದಲ್ಲಿ ಪೀಠ ಈ ಆದೇಶ ಹೊರಡಿಸಿದೆ.

ಪ್ರತಿಕ್ರಿಯಿಸಿ (+)