ಗುರುವಾರ , ಮೇ 26, 2022
22 °C

ಪಿತಾಂಬರಿ ಭರ್ಜರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪುಗಳ ವಿನ್ಯಾಸಕ್ಕೀಗ ಯಾವುದೇ ಮಿತಿಗಳಿಲ್ಲ. ಹೂವಿನ ಚಿತ್ರಗಳಿರಲಿ, ಕಸೂತಿಯ ಚಿತ್ತಾರಗಳಿರಲಿ ಏನೇ ಇದ್ದರೂ ಹೊಸತನದ ಟ್ರೆಂಡ್‌ಗೆ ಅಳವಡಿಸುವುದೇ ಸವಾಲಾಗಿದೆ.ಈಗ ಎಲ್ಲರಿಗೂ ಹೊಸತನ ಬೇಕು. ಕೇವಲ ಹೂಗಳಿರುವ ಬಟ್ಟೆಗಳಾದರೆ ದಿನನಿತ್ಯದ ಬಳಕೆಗೆ ಸಾಕು. ಆದರೆ ಸಮಾರಂಭಗಳಿಗೆ, ವಿಶೇಷ ಸಂದರ್ಭಗಳಿಗೆ ಹೊಂದಬೇಕೆಂದರೆ ಏನಾದರೂ ಕರಕುಶಲ ಕಸೂತಿ ಇರಲೇಬೇಕು. ಕುಂದನ್ ಮತ್ತು ಜರ್ದೋಸಿಯಂಥ ಕೆಲಸಗಳಿದ್ದರೆ ಇಡೀ ಉಡುಗೆಗೆ ವೈಭವದ ನೋಟ ದಕ್ಕುತ್ತದೆ. ಆದರೆ, ಉಡುಗೆಗೆ ಕೇವಲ ಕಸೂತಿಯ ಸ್ಪರ್ಶ ದೊರೆತರೆ ಸಿಗುವ ಅನುಭವವೇ ಭಿನ್ನ. ಈ ಉಡುಗೆಗಳು ಯಾವುದೇ ಸಮಾರಂಭಗಳಿಗೂ ಸೈ.

ಇಂಥವೇ ಪ್ರಯೋಗಗಳನ್ನು ಮಾಡಿರುವ, ಸಾಂಪ್ರದಾಯಿಕ ಉಡುಗೆಗಳಿಗೆ ಸಮಕಾಲೀನ ಸ್ಪರ್ಶ ನೀಡುವ ಸಂಗ್ರಹವನ್ನು `ಪಿತಾಂಬರಿ~ ಪ್ರಸ್ತುತ ಪಡಿಸಿದೆ.ಈ ಸಂಗ್ರಹವನ್ನು ಬಿಡುಗಡೆಗೊಳಿಸಿದ ರಾಧೇಶ್ ಕಾಗ್ಜಿ ಪ್ರಕಾರ ಇದು ಭಾರತೀಯ ನೋಟದ, ಪಾಶ್ಚಿಮಾತ್ಯ ಸ್ಪರ್ಶದ ಸಮನ್ವಯಗೊಳಿಸಿರುವ ಸಂಗ್ರಹವಾಗಿದೆ. ಆಧುನಿಕ ಮಹಿಳೆಯ ಮನೋಭಾವವನ್ನು ಪ್ರತಿನಿಧಿಸುವ ಸಂಗ್ರಹ ಇದಾಗಿದೆ.ಈ ಸಂಗ್ರಹವು ಪ್ಯಾಂಟಲೂನ್ಸ್, ಲೈಫ್‌ಸ್ಟೈಲ್, ಸೆಂಟ್ರಲ್, ಶಾಪ್ಪರ್ಸ್‌ ಸ್ಟಾಪ್ ಮುಂತಾದ ಮಳಿಗೆಗಳಲ್ಲಿ ಲಭ್ಯ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.