ಸೋಮವಾರ, ಮೇ 17, 2021
27 °C

ಪುಣೆಗೆ ಮತ್ತೊಂದು ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ (ಪಿಟಿಐ): ಮರ್ಲಾನ್ ಸ್ಯಾಮುಯೆಲ್ಸ್ (46, 39ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ರಾಬಿನ್ ಉತ್ತಪ್ಪ (40, 33ಎಸೆತ, 2 ಬೌಂಡರಿ, 2 ಸಿಕ್ಸರ್) ಅವರ ಉತ್ತಮ ಬ್ಯಾಟಿಂಗ್ ಮತ್ತು ಬೌಲರ್‌ಗಳ ಶಿಸ್ತಿನ ದಾಳಿಯ ನೆರವಿನಿಂದ ಪುಣೆ ವಾರಿಯರ್ಸ್ ತಂಡ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಪಡೆಯಿತು.ಇಲ್ಲಿ ನೂತನವಾಗಿ ನಿರ್ಮಾಣಗೊಂಡ ಸುಬ್ರತಾ ರಾಯ್ ಸಹಾರಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪುಣೆ 22 ರನ್‌ಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮಣಿಸಿತು. ಪುಣೆ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ಗೆ ಆಘಾತ ನೀಡಿತ್ತು.ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸೌರವ್ ಗಂಗೂಲಿ ಬಳಗ 20 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 166 ರನ್‌ಗಳನ್ನು ಗಳಿಸಿದರೆ, ಆ್ಯಡಮ್ ಗಿಲ್‌ಕ್ರಿಸ್ಟ್ ನೇತೃತ್ವದ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 144 ರನ್ ಪೇರಿಸಿತು.ಗಿಲ್‌ಕ್ರಿಸ್ಟ್ (6) ಮತ್ತು ಪಾಲ್ ವಲ್ತಾಟಿ (1) ಅವರನ್ನು ಬೇಗನೇ ಕಳೆದುಕೊಂಡ ತಂಡ ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ರಾಹುಲ್ ಶರ್ಮ (34ಕ್ಕೆ 2) ಮತ್ತು ಅಶೋಕ್ ದಿಂಡಾ (13ಕ್ಕೆ 1) ಪಂಜಾಬ್ ತಂಡದ ಪತನಕ್ಕೆ ಕಾರಣರಾದರು.ಪುಣೆ ತಂಡದ ಆರಂಭ ಕೂಡಾ ಉತ್ತಮವಾಗಿರಲಿಲ್ಲ. ಜೆಸ್ಸಿ ರೈಡರ್ ಬೇಗನೇ ಪೆವಿಲಿಯನ್‌ಗೆ ಮರಳಿದರು. ನಾಯಕ ಸೌರವ್ ಗಂಗೂಲಿ 20 ರನ್ (18ಎಸೆತ, 3ಬೌಂಡರಿ) ಗಳಿಸಿ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ಸ್ಯಾಮುಯೆಲ್ಸ್ ಹಾಗೂ ರಾಬಿನ್ ರನ್ ಗಳಿಕೆಯ ವೇಗವನ್ನು ಹೆಚ್ಚಿಸಿದರು. ಈ ಜೋಡಿ ಮೂರನೇ ವಿಕೆಟ್‌ಗೆ  81 ರನ್‌ಗಳನ್ನು ಕಲೆ ಹಾಕಿತು. ಸ್ಟೀವನ್ ಸ್ಮಿತ್ ಕೊನೆಯಲ್ಲಿ 12 ಎಸೆತಗಳಲ್ಲಿ 25 ರನ್ ಗಳಿಸಿದರು.ಸ್ಕೋರ್ ವಿವರ:

ಪುಣೆ ವಾರಿಯರ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 166

ಜೆಸ್ಸಿ ರೈಡರ್ ರನ್‌ಔಟ್ (ಪ್ರವೀಣ್ ಕುಮಾರ್)  08

ಸೌರವ್ ಗಂಗೂಲಿ ಸಿ. ಪಾಲ್ ವಲ್ತಾಟಿ ಬಿ ಮಸ್ಕರೇನಸ್  20

ಮರ್ಲಾನ್ ಸ್ಯಾಮಯೆಲ್ಸ್ ಬಿ ಹರ್ಮಿತ್ ಸಿಂಗ್  46

ರಾಬಿನ್ ಉತ್ತಪ್ಪ ಬಿ ಹರ್ಮಿತ್ ಸಿಂಗ್  40

ಕಾಲಮ್ ಫರ್ಗ್ಯುಸನ್ ಸಿ ಮತ್ತು ಬಿ ಹರ್ಮಿತ್ ಸಿಂಗ್  03

ಸ್ಟೀವನ್ ಸ್ಮಿತ್ ಬಿ ಫಾಕ್ನರ್  25

ಮನೀಷ್ ಪಾಂಡೆ ಔಟಾಗದೆ  12

ರಾಹುಲ್ ಶರ್ಮ ಔಟಾಗದೆ  00

ಇತರೆ: (ಲೆಗ್ ಬೈ-7, ವೈಡ್-3, ನೋ ಬಾಲ್-2)  12

ವಿಕೆಟ್ ಪತನ: 1-28 (ಗಂಗೂಲಿ; 3.6), 2-32 (ರೈಡರ್; 4.5), 3-113 (ಸ್ಯಾಮಯೆಲ್ಸ್; 14.6), 4-121 (ಫರ್ಗ್ಯುಸನ್; 16.3), 5-132 (ಉತ್ತಪ್ಪ; 18.2), 6-166 (ಸ್ಮಿತ್; 19.4).

ಬೌಲಿಂಗ್: ಪ್ರವೀಣ್ ಕುಮಾರ್ 4-7-27-0, ಜೇಮ್ಸ ಫಾಕ್ನರ್ 4-0-31-1, ದಿಮಿತ್ರ್ರಿ ಮಸ್ಕರೇನಸ್ 4-0-23-1, ಬಿಪುಲ್ ಶರ್ಮ 2.4-0-40-0, ಪಿಯೂಷ್ ಚಾವ್ಲಾ 2-0-14-0, ಹಮೀತ್ ಸಿಂಗ್ 3.2-0-24-3

ಕಿಂಗ್ಸ್ ಇಲೆವೆನ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 144

ಆ್ಯಡಮ್ ಗಿಲ್‌ಕ್ರಿಸ್ಟ್ ರನೌಟ್  06

ಪಾಲ್ ವಲ್ತಾಟಿ ರನೌಟ್  01

ಮನ್‌ದೀಪ್ ಸಿಂಗ್ ಸಿ ರಾಬಿನ್ ಬಿ ಜೆಸ್ಸಿ ರೈಡರ್  24

ಅಭಿಷೇಕ್ ನಾಯರ್ ಸಿ ಗಂಗೂಲಿ ಬಿ ಆಶೀಶ್ ನೆಹ್ರಾ  24

ಡೇವಿಡ್ ಹಸ್ಸಿ ಬಿ ರಾಹುಲ್ ಶರ್ಮ  18

ಪಿಯೂಷ್ ಚಾವ್ಲಾ ಸಿ ಪಾಂಡೆ ಬಿ ರಾಹುಲ್ ಶರ್ಮ  16

ದಿಮಿತ್ರಿ ಮಸ್ಕರೇನಸ್ ಸಿ ರೈಡರ್ ಬಿ ಸ್ಯಾಮಯೆಲ್ಸ್  05

ಬಿಪುಲ್ ಶರ್ಮ ಔಟಾಗದೆ  35

ಜೇಮ್ಸ ಫಾಕ್ನರ್ ಸಿ ಗಂಗೂಲಿ ಬಿ ಅಶೋಕ್ ದಿಂಡಾ  03

ಪ್ರವೀಣ್ ಕುಮಾರ್ ಔಟಾಗದೆ  01

ಇತರೆ: (ಬೈ-4, ಲೆಗ್‌ಬೈ-2, ವೈಡ್-4, ನೋಬಾಲ್-1)  

 11

ವಿಕೆಟ್ ಪತನ: 1-7 (ವಲ್ತಾಟಿ; 2.1), 2-9 (ಗಿಲ್‌ಕ್ರಿಸ್ಟ್; 3.2), 3-50 (ಮನ್‌ದೀಪ್; 9.4), 4-75 (ನಾಯರ್; 12.5), 5-84 (ಹಸ್ಸಿ; 13.6), 6-99 (ಚಾವ್ಲಾ; 15.1), 7-106 (ಮಸ್ಕರೇನಸ್; 16.4), 8-131 (ಫಾಕ್ನರ್; 18.6)

ಬೌಲಿಂಗ್: ಅಶೋಕ್ ದಿಂಡಾ 3-0-13-1, ಮರ್ಲಾನ್ ಸ್ಯಾಮಯೆಲ್ಸ್ 4-0-23-1, ಆಶೀಶ್ ನೆಹ್ರಾ 3-0-20-1, ರಾಹುಲ್ ಶರ್ಮ 4-0-34-2, ಮುರಳಿ ಕಾರ್ತಿಕ್ 3-0-23-0, ಜೆಸ್ಸಿ ರೈಡರ್ 3-0-25-1

ಫಲಿತಾಂಶ: ಪುಣೆ ವಾರಿಯರ್ಸ್‌ಗೆ 22 ರನ್ ಗೆಲುವು

ಪಂದ್ಯಶ್ರೇಷ್ಠ: ಮರ್ಲಾನ್ ಸ್ಯಾಮುಯೆಲ್ಸ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.